ನವೆಂಬರ್ 10ರಂದು 'ನಾಡಿ ಮಿಡಿತದ ದಾರಿ' ಪುಸ್ತಕ ಬಿಡುಗಡೆ
ಬೆಂಗಳೂರು, ನವೆಂಬರ್ 9: ನೀಲಿಮಾ ಪ್ರಕಾಶನವು ಡಾ. ಶಿವಾನಂದ ಕುಬಸದ ಅವರ 'ನಾಡಿ ಮಿಡಿತದ ದಾರಿ' ಎನ್ನುವ ಪುಸ್ತಕದ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿದೆ.
ಪುಸ್ತಕ ಬಿಡುಡೆ ಕಾರ್ಯಕ್ರಮವು ನವೆಂಬರ್ 10ರಂದು ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ.

ನಟ ನಿರ್ದೇಶಕ ಎಸ್.ಎನ್. ಸೇತೂರಾಂ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಪುಸ್ತಕದ ಕುರಿತು ರಾಘವೇಂದ್ರ ಆಚಾರ್ಯ ಅವರು ಮಾತನಾಡಲಿದ್ದಾರೆ. ಡಾ. ಶಿವಾನಂದ ಕುಬಸದ ಉಪಸ್ಥಿತರಿರಲಿದ್ದಾರೆ.












Click it and Unblock the Notifications