ಆಯುಧ ಪೂಜೆ ತಂದ ಸಂಕಷ್ಟ, ಮುತ್ತಪ್ಪ ರೈಗೆ ಸಿಸಿಬಿ ನೊಟೀಸ್
ಬೆಂಗಳೂರು, ಅಕ್ಟೋಬರ್ 20: ಆಯುಧ ಪೂಜೆಯಂದು ಗನ್‌ಗಳು, ಡ್ರಾಗರ್‌ಗಳನ್ನು ಇಟ್ಟು ಪೂಜೆ ಮಾಡಿದ್ದ ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಮುತ್ತಪ್ಪ ರೈಗೆ ಸಿಸಿಬಿ ಪೊಲೀಸರು ನೊಟೀಸ್ ಜಾರಿ ಮಾಡಿದ್ದಾರೆ.
ಮೊನ್ನೆ ಆಯುಧ ಪೂಜೆಯಂದು ಮುತ್ತಪ್ಪ ರೈ ಅವರು ವಿವಿಧ ಗನ್‌ಗಳು, ಡ್ರಾಗರ್‌ಗಳನ್ನು ಮನೆಯ ಮುಂದೆ ಇಟ್ಟು ಪೂಜೆ ಮಾಡುತ್ತಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು, ಇದು ಸಿಸಿಬಿ ಕೆಂಗಣ್ಣಿಗೆ ಗುರಿ ಆಗಿತ್ತು.

ಇಂದು ಸಿಸಿಬಿ ಮುಂದೆ ಹಾಜರಾಗುವಂತೆ ಸಿಸಿಬಿ ನೊಟೀಸ್ ಜಾರಿ ಮಾಡಿದ್ದು, ಸಂಜೆಯೊಳಗೆ ಹಾಜರಾಗಿ ಸ್ಪಷ್ಟನೆ ನೀಡಬೇಕಿದೆ. ವಿಚಾರಣೆಗೆ ಬರುವ ಸಮಯ ಆಯುಧ ಪೂಜೆಯಂದು ಪೂಜೆ ಮಾಡಿದ ಎಲ್ಲ ಗನ್‌ಗಳು ಹಾಗೂ ಡ್ರಾಗರ್‌ಗೆ ಲೈಸನ್ಸ್ ತರುವಂತೆ ಸಿಸಿಬಿಯು ಹೇಳಿದೆ.

ಅಕ್ರಮ ಶಶಾಸ್ತ್ರ ಹೊಂದಿರುವ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಮುತ್ತಪ್ಪ ರೈಗೆ ನೊಟೀಸ್ ಜಾರಿ ಮಾಡಿದ್ದು ಸಿಸಿಬಿ ಪೊಲೀಸ್ ಎಸಿಪಿ ಮರಿಯಪ್ಪ ಅವರ ಮುಂದೆ ಮುತ್ತಪ್ಪ ರೈ ವಿಚಾರಣೆಗೆ ಹಾಜರಾಗಬೇಕಿದೆ.












Click it and Unblock the Notifications