ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ತಮ್ಮ ತಾಯಿಯ ನಾಲಾಯಕ್ ಮಗ: ಜಿಗ್ನಾನಿ ವಿವಾದ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 12: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ನಾಲಾಯಕ್ ಮಗನಾಗಿದ್ದು, ನಾವೆಲ್ಲರೂ ಅವರ ತಾಯಿಯ ಬಳಿಗೆ ತೆರಳಿ, ತಮ್ಮ ಮಗನಿಗೆ ಬುದ್ಧಿ ಹೇಳುವಂತೆ ಕೇಳೋಣ ಎಂದು ಗುಜರಾತ್ ನ ಚಿಂತಕ, ವಕೀಲ ಹಾಗೂ ದಲಿತ ಪರ ಹೋರಾಟಗಾರ ಜಿಗ್ನೇಶ್ ಮೇವಾನಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

In Pics: ನಾನೂ ಗೌರಿ ಎಂದು ಬಂದರು ಸಾವಿರಾರು ಮಂದಿ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಪ್ರತಿಭಟಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಸೆಪ್ಟೆಂಬರ್ 12ರಂದು ನಡೆಸಲಾದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಿಗ್ನೇಶ್ ಅವರು, ಗೌರಿ ಅವರ ಹತ್ಯೆಗೆ ಬಿಜೆಪಿ, ಆರೆಸ್ಸೆಸ್ ಕಾರಣವೆಂದು ಪರೋಕ್ಷವಾಗಿ ಟೀಕೆ ಮಾಡಿದರು.

Modi is a bummer son to his mother: Jignesh Mewani

''ಬನ್ನಿ ಸ್ನೇಹಿತರೆ, ನಾವೆಲ್ಲರೂ ದೆಹಲಿಗೆ ಹೋಗೋಣ. ಪ್ರಧಾನಿ ಮೋದಿ ಹಾಗೂ ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಅವರ ಎದೆ ಮೇಲೆ ಕುಳಿತು ಗೌರಿ ಹತ್ಯೆಗೆ ನ್ಯಾಯ ಕೇಳೋಣ'' ಎಂದು ಅವರು ಆಗ್ರಹಿಸಿದರು.

ಸರ್ಕಾರಕ್ಕೆ 'ಪ್ರತಿರೋಧ ಸಮಾವೇಶ' ಸಲ್ಲಿಸಿದ ಹಕ್ಕೊತ್ತಾಯಗಳಿವುಸರ್ಕಾರಕ್ಕೆ 'ಪ್ರತಿರೋಧ ಸಮಾವೇಶ' ಸಲ್ಲಿಸಿದ ಹಕ್ಕೊತ್ತಾಯಗಳಿವು

''ಪ್ರಧಾನಿ ಮೋದಿ ಅವರು ಭಾರತದ ವಿಕಾಸದ ಬಗ್ಗೆ ಮಾತನಾಡುತ್ತಾರೆ. ಆದರೆ, ಪತ್ರಕರ್ತರ ಹತ್ಯೆಯು ಯಾವ ವಿಕಾಸದ ಮಾಡೆಲ್ ಎಂದು ಮೋದಿಯವರೇ ಹೇಳಬೇಕು'' ಎಂದು ಅವರು ಟೀಕಿಸಿದರು.

English summary
Thinker Jignesh Mewani lashed out at PM Modi in a rally organised to protest against Gauri Lankesh's murder on September 12, 2017. He alleged that Modi is ೋ bummer son for his other.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X