ಕೊಡಗು ಪ್ರವಾಹ, ಸಂಸದರಿಂದ ವರದಿ ಕೇಳಿದ ಪ್ರಧಾನಿ

ಬೆಂಗಳೂರು, ಆಗಸ್ಟ್ 20: ಕೊಡಗು, ದಕ್ಷಿಣ ಕನ್ನಡದಲ್ಲಿ ಆಗಿರುವ ಪ್ರವಾಹದ ಕುರಿತು ರಾಜ್ಯದ ಸಂಸದರಿಂದ ಪ್ರಧಾನಿ ನರೇಂದ್ರ ಮೋದಿಯವರು ವರದಿ ಕೇಳಿದ್ದಾರೆ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ತಿಳಿಸಿದ್ದಾರೆ.

ನೆರೆ ಪೀಡಿತ ಪ್ರದೇಶಗಳು, ಸಂತ್ರಸ್ತರನ್ನು ಭೇಟಿ ಮಾಡಿ ಮಾತನಾಡಿಸಿ ವರದಿ ನೀಡುವಂತೆ ರಾಜ್ಯ ಸಂಸದರಿಗೆ ವರದಿ ನೀಡಲು ಮೋದಿ ಸೂಚಿಸಿದ್ದಾರೆ, ಕೊಡಗು ಜಿಲ್ಲೆಯ ನೆರೆಪೀಡಿತ ಪ್ರದೇಶಗಳ ಜನರ ಬಳಿ ಮಾತುಕತೆ ನಡೆಸಿದ್ದೇನೆ.

ಸೇನಾಧಿಕಾರಿಗಳು, ಎನ್‌ಡಿಆರ್‌ಎಫ್‌ ಹಾಗೂ ಸಿಎಂ ಜತೆಗೂ ಸಮಾಲೋಚನೆ ನಡೆಸಿದ್ದೇವೆ, ರಸ್ತೆ ದುರಸ್ತಿ ಸೇರಿ ನೆರೆ ಪೀಡಿತ ಪ್ರದೇಶದಗಳಲ್ಲಿ ಸಾಕಷ್ಟು ಕೆಲಸ ಬಾಕಿ ಇದೆ, ಕೊಡಗು ಜಿಲ್ಲೆಯಲ್ಲಿ ಗುರುತು ಸಿಗದಂತೆ 30 ಗ್ರಾಮಗಳು ಕಾಣೆಯಾಗಿವೆ, ಕೊಡಗು ಜಿಲ್ಲೆಯಾದ್ಯಂತ ಬೆಳೆದಿದ್ದ ಕಾಫಿ ತೋಟಗಳು ನಾಶವಾಗಿದೆ.

Modi asks report on Kodagu flood from MPs

ಸಂತ್ರಸ್ತರ ಆರೋಗ್ಯ ವ್ಯವಸ್ಥೆ ಹಾಗೂ ಮೂಲಸೌಕರ್ಯವನ್ನು ಕಲ್ಪಿಸಲಾಗುತ್ತದೆ, ಮನೆ ಕಳೆದುಕೊಂಡವರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಮನೆ ನಿರ್ಮಿಸಿಕೊಡಲಾಗುತ್ತದೆ ಎಂದು ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

ಸಧ್ಯಕ್ಕೆ ಸ್ವಲ್ಪ ಮಟ್ಟಿಗೆ ಕೊಡಗು, ದಕ್ಷಿಣ ಕನ್ನಡದಲ್ಲಿ ಮಳೆ ಕಡಿಮೆಯಾಗಿದೆ, ಆದಷ್ಟು ಬೇಗ ಅವರಿಗೆ ವಸತಿ ಕಲ್ಪಿಸಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+