Get Updates
Get notified of breaking news, exclusive insights, and must-see stories!

ಶಾಸಕ ಹರತಾಳು ಹಾಲಪ್ಪ ಪುತ್ರಿ ಇದ್ದ ಕಾರು ಗುದ್ದಿ ಇಬ್ಬರು ಸಾವು, ಹಲವರಿಗೆ ಗಾಯ

ಶಾಸಕ ಹಾಲಪ್ಪ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದ ಹಾಲಿ ಶಾಸಕರಾಗಿದ್ದು, ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್ ಐಎಲ್) ಅಧ್ಯಕ್ಷರೂ ಆಗಿದ್ದಾರೆ.

ಬೆಂಗಳೂರು, ಫೆಬ್ರವರಿ 7: ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಅವರ ಸಂಬಂಧಿಕರಿಗೆ ಸೇರಿದ ಎಸ್‌ಯುವಿ ಕಾರು ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಡಿಎಚ್‌ ವರದಿ ಮಾಡಿದೆ.

ಶಾಸಕ ಹಾಲಪ್ಪ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದ ಹಾಲಿ ಶಾಸಕರಾಗಿದ್ದು, ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್ ಐಎಲ್) ಅಧ್ಯಕ್ಷರೂ ಆಗಿದ್ದಾರೆ. ನಿವೃತ್ತ ಅರಣ್ಯಾಧಿಕಾರಿ ರಾಮು ಸುರೇಶ್ ಅವರ ಬಳಿ ಕೆಲಸ ಮಾಡುತ್ತಿರುವ ಎಂ ಮೋಹನ್ ಅವರು ಕಾರನ್ನು ಓಡಿಸುತ್ತಿದ್ದರು ಎನ್ನಲಾಗಿದೆ. ಕಾರಿನಲ್ಲಿ ಇದ್ದ ಹಾಲಪ್ಪ ಅವರ ಪುತ್ರಿ ಡಾ. ಸುಶ್ಮಿತಾ ಹಾಲಪ್ಪ ಅವರು ಸುರೇಶ್ ಅವರ ಪುತ್ರನನ್ನು ವಿವಾಹವಾಗಿದ್ದಾರೆ. ಸುಶ್ಮಿತಾ ಅವರು ಕಿಮ್ಸ್ ಆಸ್ಪತ್ರೆಯಲ್ಲಿ ಎಂಡಿ ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾರಿನ ಮೇಲೆ ಎಂಎಲ್ ಎ ಸ್ಟಿಕ್ಕರ್ ಅಂಟಿಸಲಾಗಿತ್ತು. ಕಾರು ಗುದ್ದಿ ಮೃತಪಟ್ಟವರನ್ನು ಎಚ್‌ಬಿಆರ್ ಲೇಔಟ್ ನಿವಾಸಿ ಮಜೀದ್ ಖಾನ್ (36) ಮತ್ತು ಕೆ.ಜಿ.ಹಳ್ಳಿ ನಿವಾಸಿ ಅಯ್ಯಪ್ಪ (60) ಎಂದು ಗುರುತಿಸಲಾಗಿದೆ. ಖಾನ್ ಅವರು ಆಟೋಮೊಬೈಲ್ ಬಿಡಿಭಾಗಗಳ ಮಾರಾಟಗಾರರಾಗಿದ್ದರು ಮತ್ತು ಜೆಸಿ ರಸ್ತೆಯಲ್ಲಿ ಅಂಗಡಿಯನ್ನು ಹೊಂದಿದ್ದರು. ಅಯ್ಯಪ್ಪ ಪಾರ್ಕಿಂಗ್ ಸ್ಥಳದಲ್ಲಿ ಮ್ಯಾನೇಜರ್ ಆಗಿದ್ದರು.

ಗಾಯಗೊಂಡವರು ರಿಯಾಜ್ ಪಾಷಾ, ಮೊಹಮ್ಮದ್ ಕೆ ರಿಯಾಜ್, ಮೊಹಮ್ಮದ್ ಸಲೀಂ ಮತ್ತು ಶೇರ್ ಗಿಲಾನಿ. ಈಗ ಅವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾನ್ ತನ್ನ ಸ್ಕೂಟರ್ ಅನ್ನು ಪಾಷಾ ಜೊತೆಯಲ್ಲಿ ಪಿಲಿಯನ್ ಮೇಲೆ ಓಡಿಸುತ್ತಿದ್ದ. ರಿಯಾಜ್ ಬಜಾಜ್ ಪಲ್ಸರ್ ಓಡಿಸಿದರು. ಸಲೀಂ ಮತ್ತು ಗಿಲಾನಿ ಹೋಂಡಾ ಆಕ್ಟಿವಾದಲ್ಲಿ ಸವಾರಿ ಮಾಡುತ್ತಿದ್ದರು.

ಮ್ಯಾಜಿಸ್ಟ್ರೇಟ್ ಕೋರ್ಟ್ ಕಾಂಪ್ಲೆಕ್ಸ್ ಎದುರು ಸೋಮವಾರ ಮಧ್ಯಾಹ್ನ 3.15ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಲಹಂಕ ನ್ಯೂ ಟೌನ್ ನಿವಾಸಿ ಎಂ.ಮೋಹನ್ (48) ಚಲಾಯಿಸುತ್ತಿದ್ದ ಟೊಯೊಟಾ ಇನ್ನೋವಾ (ಕೆಎ 50/ಎಂಎ 6600) ಟೊಯೊಟಾ ಎಟಿಯೋಸ್ ಮತ್ತು ಮಾರುತಿ ಆಲ್ಟೊ ಹಾಗೂ ಮೂರು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿತ್ತು.

2 ಕಾರು, 3 ಬೈಕ್‌ಗೆ ಡಿಕ್ಕಿ

2 ಕಾರು, 3 ಬೈಕ್‌ಗೆ ಡಿಕ್ಕಿ

ಅಪಘಾತದ ವೇಳೆ ಮೋಹನ್ ಅವರು ಡಾ.ಸುಶ್ಮಿತಾ ಅವರನ್ನು ಕಿಮ್ಸ್‌ಗೆ ಕರೆದುಕೊಂಡು ಹೋಗಲು ತೆರಳುತ್ತಿದ್ದರು. ಕೋರ್ಟ್ ಕಾಂಪ್ಲೆಕ್ಸ್ ಹತ್ತಿರ ಬಂದು ಹಡ್ಸನ್ ಸರ್ಕಲ್ ಕಡೆಗೆ ಎಡಕ್ಕೆ ತಿರುಗಲು ಯತ್ನಿಸಿದಾಗ ಸಿಗ್ನಲ್ ರೆಡ್‌ಗೆ ಬಿದ್ದಿತು. ವೇಗವಾಗಿ ಬಂದ ಮೋಹನ್ ಎರಡು ಕಾರು ಹಾಗೂ ಮೂರು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದರು.

ಬ್ರೇಕ್ ಹಾಕುವ ಬದಲು ಎಕ್ಸಲೇಟರ್ ಒತ್ತಿದ

ಬ್ರೇಕ್ ಹಾಕುವ ಬದಲು ಎಕ್ಸಲೇಟರ್ ಒತ್ತಿದ

ಬಳಿಕ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು. ನಂತರ ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಸಿಗ್ನಲ್ ಬಳಿ ಬರುತ್ತಿದ್ದಾಗ ಬ್ರೇಕ್ ಹಾಕುವ ಬದಲು ಎಕ್ಸಲೇಟರ್ ಒತ್ತಿದ್ದೇ ಅಪಘಾತಕ್ಕೆ ಕಾರಣ ಎಂದು ಮೋಹನ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ಆತನ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ವಾಹನ ಚಲಾಯಿಸುವಾಗ ಮೋಹನ್ ಫೋನ್ ಬಳಸುತ್ತಿದ್ದರೇ ಎಂದು ತಿಳಿಯಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.

ಎಂಎಲ್ಎ ಸ್ಟಿಕ್ಕರ್‌ಗಳನ್ನು ಬಳಸುವುದು ಅಪರಾಧ

ಎಂಎಲ್ಎ ಸ್ಟಿಕ್ಕರ್‌ಗಳನ್ನು ಬಳಸುವುದು ಅಪರಾಧ

ಎಸ್‌ಯುವಿಯಲ್ಲಿ ಎಂಎಲ್‌ಎ ಸ್ಟಿಕ್ಕರ್ ಇತ್ತು, ಇದನ್ನು ವಿಧಾನಸೌಧಕ್ಕೆ ಪ್ರವೇಶಿಸಲು ಬಳಸಲಾಗುತ್ತಿತ್ತು. ಎಲ್ಲಿಯಾದರೂ ನಿಲುಗಡೆ ಮಾಡುವ ಸೌಲಭ್ಯಗಳನ್ನು ಹೊಂದಲು ವಾಹನದ ಮೇಲೆ ಸ್ಟಿಕ್ಕರ್ ಅನ್ನು ಹಾಕಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ (ಸಾಮಾನ್ಯವಾಗಿ ಪೊಲೀಸರು ರಾಜಕಾರಣಿಗಳ ವಾಹನಗಳಿಗೆ ದಂಡ ವಿಧಿಸುವುದಿಲ್ಲ ಅಥವಾ ಸಂಚಾರ ನಿಯಮಗಳ ಗೋಚರ ಉಲ್ಲಂಘನೆ ಕಂಡುಬಂದಾಗಲೂ ವಾಹನವನ್ನು ನಿಲ್ಲಿಸುವುದಿಲ್ಲ). ರಾಜಕಾರಣಿಗಳು ಬಳಸದ ವಾಹನಗಳ ಮೇಲೆ ಎಂಎಲ್ಎ ಸ್ಟಿಕ್ಕರ್‌ಗಳನ್ನು ಬಳಸುವುದು ಕಾನೂನುಬಾಹಿರವಾಗಿದೆ.

ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ

ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ

ಡ್ರೈವರ್‌ ಮೋಹನ್ ಅವರನ್ನು ಆಲ್ಕೋಮೀಟರ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರು ಕುಡಿದಿರುವುದು ಕಂಡುಬಂದಿಲ್ಲ ಎಂದು ಉಪ ಪೊಲೀಸ್ ಆಯುಕ್ತೆ (ಸಂಚಾರ) ಪೂರ್ವ ವಿಭಾಗದ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ. ಮೋಹನ್ ವಿರುದ್ಧ ಹಲಸೂರು ಗೇಟ್ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಅಪಘಾತದಲ್ಲಿ ಹಾನಿಗೊಳಗಾದ ಎಸ್‌ಯುವಿ ಮತ್ತು ಇತರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತದೇಹಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+