ಅತ್ಯಾಚಾರವಾಗಿ ಆಯ್ತು ವಾರ: ಆರೋಪಿ ಇನ್ನೂ ನಾಪತ್ತೆ

ಅಪ್ರಾಪ್ತೆ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೋಸ್ಕೋ ಕಾಯದೆಯಡಿ ಪ್ರಕರಣ ದಾಖಲಿಸಿದ್ದ ಪೊಲೀಸರು ಆರೋಪಿಯನ್ನು ಶೀಘ್ರವೇ ಪತ್ತೆ ಮಾಡುವುದಾಗಿ ಅಭಯ ನೀಡಿ ರಾಜನ ಕುಂಟೆ ಪ್ರದೇಶದ ಸಿಸಿಟಿವಿ ಫೂಟೇಜನ್ನೂ ವಶಪಡಿಸಿಕೊಂಡಿದ್ದರು.

ಬೆಂಗಳೂರು, ಮಾರ್ಚ್ 04: ಬೆಂಗಳೂರಿನ ರಾಜನಕುಂಟೆ ಅರಣ್ಯ ಪ್ರದೇಶದಲ್ಲಿ 13 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರವಾಗಿ ಒಂದು ವಾರ ಕಳೆದರೂ ಆರೋಪಿ ಮಾತ್ರ ಇನ್ನೂ ಪತ್ತೆಯಾಗಿಲ್ಲ.

ಬೀದಿ ವ್ಯಾಪಾರಿಯೊಬ್ಬರ ಮಗಳಾಗಿದ್ದ ಈಕೆ, ಫೆ.24ರಂದು ತಂದೆಯೊಂದಿಗೆ ವ್ಯಾಪಾರಕ್ಕೆ ತೆರಳಿದ್ದಳು. ತಂದೆ ಇಲ್ಲದ ಸಮಯ ನೋಡಿ ಆಕೆಯ ಬಳಿಗೆ ಬಂದ ವ್ಯಕ್ತಿಯೊಬ್ಬ ಆಕೆಗೆ ಒಂದಷ್ಟು ತಿಂಡಿಯ ಆಮಿಷವೊವ್ವಿ ರಾಜನಕುಂಟೆ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಆ ರಾತ್ರಿಯೆಲ್ಲ ಅತ್ಯಾಚಾರವೆಸಗಿದ್ದ. [ದೆಹಲಿಯ ಅಪ್ರಾಪ್ತೆಯ ಮೇಲೆ ಇಬ್ಬರು ಬಾಲಾಪರಾಧಿಗಳಿಂದ ಅತ್ಯಾಚಾರ]

ಮರುದಿನ ಬೆಳಗ್ಗೆ ಆಕೆಯನ್ನು ಕರೆತಂದಿದ್ದ ರಸ್ತೆಯ ಬಳಿಯೇ ಬಿಟ್ಟು ಪರಾರಿಯಾಗಿದ್ದ. ಮನೆಗೆ ಬಂದ ಹುಡುಗಿ ನಡೆದ ಘಟನೆಯನ್ನು ತಂದೆ -ತಾಯಿಗೆ ತಿಳಿಸಿದ್ದಳು. ನೊಂದ ಪಾಲಕರು ಸಂಜಯ ನಗರ ಪೊಲೀಸರಿಗೆ ದೂರು ನೀಡಿದ್ದರು.

ಪೋಸ್ಕೋ ಕಾಯದೆಯಡಿ ಪ್ರಕರಣ ದಾಖಲಿಸಿದ್ದ ಪೊಲೀಸರು ಆರೋಪಿಯನ್ನು ಶೀಘ್ರವೇ ಪತ್ತೆ ಮಾಡುವುದಾಗಿ ಅಭಯ ನೀಡಿ ರಾಜನ ಕುಂಟೆ ಪ್ರದೇಶದ ಸಿಸಿಟಿವಿ ಫೂಟೇಜನ್ನೂ ವಶಪಡಿಸಿಕೊಂಡಿದ್ದರು. ಆದರೆ ಒಂದು ವಾರ ಕಳೆದರೂ ತನಿಖೆಯಲ್ಲಿ ಯಾವುದೇ ಬೆಳವಣಿಗೆ ಇಲ್ಲದಿರುವುದು ಸಂತ್ರಸ್ಥೆ ಮತ್ತು ಆಕೆಯ ಪೋ‌ಷಕರಲ್ಲಿ ದಿಗಿಲುಮೂಡಿಸಿದೆ. [ಅಪ್ರಾಪ್ತೆಯನ್ನು ತಾಯಿಯನ್ನಾಗಿಸಿದ ಪಾದ್ರಿಯ ಬಂಧನ]

ತನಿಖೆ ಸರಿಯಾದ ಹಾದಿಯಲ್ಲೇ ನಡೆಯುತ್ತಿದೆ. ಸಂತ್ರಸ್ಥೆಗೆ ಮತ್ತು ಆಕೆಯ ಮನೆಯವರಿಗೆ ಆರೋಪಿಯ ಪರಿಚಯವಿಲ್ಲದ ಕಾರಣ ಪತ್ತೆಗೆ ಸ್ವಲ್ಪ ಸಮಯ ಹಿಡಿಯುತ್ತಿದೆ. ಸದ್ಯದಲ್ಲೇ ಆರೋಪಿಯನ್ನು ಪತ್ತೆ ಮಾಡುತ್ತೇವೆ ಎಂದು ಬೆಂಗಳೂರು ಉತ್ತರ ಡಿಸಿಪಿ ಲಭು ರಾಮ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+