Metro Red Line: ಬೆಂಗಳೂರಿನ ಈ ಭಾಗದಲ್ಲಿ ಮನೆಗಳ ಬಾಡಿಗೆ ಶೇ10ರಿಂದ 30ರಷ್ಟು ಶೀಘ್ರ ಹೆಚ್ಚಳ, ಕಾರಣವೇನು ?
ಬೆಂಗಳೂರಿನ ಕೆಂಪು ಮಾರ್ಗದ ಮೆಟ್ರೋ ರೈಲು ಅಭಿವೃದ್ಧಿಗೆ ಸಂಬಂಧಿಸಿದಂತೆ ಅನುಮೋದನೆ ಸಿಕ್ಕಿದ್ದು, ಇದರಿಂದ ಬೆಂಗಳೂರಿನ ಈ ಭಾಗದಲ್ಲಿ ಪ್ರಾಪರ್ಟಿ ವಿಚಾರದಲ್ಲಿ ಮಹತ್ವದ ಬೆಳವಣಿಗೆ ಆಗಲಿದೆ. ಬೆಂಗಳೂರಿನಲ್ಲಿ ಮೆಟ್ರೋ ಮಾರ್ಗ ಸಾಗುವ ಹಾದಿಯಲ್ಲೆಲ್ಲವೂ ಆಸ್ತಿಗೆ ಗಗನ ಬೆಲೆ ಬರುತ್ತಿದೆ. ಇದೀಗ ಬೆಂಗಳೂರಿನಲ್ಲಿ ಹೊಸ ಮಾರ್ಗ ಶುರುವಾಗುತ್ತಿದ್ದು, ಇದರಿಂದ ಈ ಭಾಗದಲ್ಲೂ ಪ್ರಾಪರ್ಟಿಗೆ ಒಳ್ಳೆಯ ಬೆಲೆ ಬರಲಿದೆ ಎನ್ನುವ ಲೆಕ್ಕಾಚಾರ ಜೋರಾಗಿದೆ. ಆದರೆ, ಇದರೊಂದಿಗೆ ಬೆಂಗಳೂರಿನ ಕೆಲವು ಭಾಗದಲ್ಲಿ ಮನೆಗಳ ಬಾಡಿಗೆಗಳ ಬೆಲೆಯು ಗಗನಮುಖಿಯಾಗಲಿದೆ. ಯಾವ ಭಾಗದಲ್ಲಿ ಆಸ್ತಿ ಬೆಲೆ ಹೆಚ್ಚಳವಾಗಿದೆ ಹಾಗೂ ಬಾಡಿಗೆ ಬೆಲೆ ದುಪ್ಪಟ್ಟಾಗಲಿದೆ ಎನ್ನುವ ವಿವರ ಇಲ್ಲಿದೆ.
ಯಾಕೆಂದರೆ ಬೆಂಗಳೂರಿನಲ್ಲಿ ಈಗಾಗಲೇ ಮೆಟ್ರೋ ಮಾರ್ಗ ಆಗಿರುವ ಬಹುತೇಕ ಕಡೆಗಳಲ್ಲಿ ಆಸ್ತಿ ಬೆಲೆಯು ದುಪ್ಪಟ್ಟು ಆಗಿರುವ ಉದಾಹರಣೆಗಳು ಇವೆ. ಇದೀಗ ಹೊಸದಾಗಿ ರೆಡ್ ಮೆಟ್ರೋ ಮಾರ್ಗಕ್ಕೆ ಅನುಮೋದನೆ ಸಿಕ್ಕಿರುವುದರಿಂದ ಮುಂದಿನ ದಿನಗಳಲ್ಲಿ ಈ ಮಾರ್ಗದಲ್ಲಿನ ಆಸ್ತಿಗೆ ಚಿನ್ನದ ಬೆಲೆ ಬರಲಿದೆ ಅಂತನೇ ಹೇಳಲಾಗ್ತಿದೆ.

ಬೆಂಗಳೂರಿನಲ್ಲಿ ಈಗಾಗಲೇ ಆಸ್ತಿಗಳಿಗೆ ಚಿನ್ನದ ಬೆಲೆ ಇದೆ. ಮುಂದುವರಿದು ಮೆಟ್ರೋ ಹಾಗೂ ವಿಮಾನ ನಿಲ್ದಾಣಗಳ ಪ್ರಸ್ತಾವನೆ ಅಥವಾ ಹೆದ್ದಾರಿ ಸೇರಿದಂತೆ ಯಾವುದೇ ಹೊಸ ಯೋಜನೆಗಳು ಜಾರಿಯಾದರೂ, ಅದರ ಸುತ್ತಮುತ್ತಲಿನ ಪ್ರದೇಶದಲ್ಲಿನ ಪ್ರಾಪರ್ಟಿಗಳಿಗೆ ಚಿನ್ನದ ಬೆಲೆ ಬರುತ್ತೆ. ಈ ಭಾಗದ ಆಸ್ತಿದಾರರು ಏಕಾಏಕಿ ಕೋಟ್ಯಾಧಿಪತಿಗಳು ಆಗುವುದು ಇದೆ. ಅದೃಷ್ಟದಿಂದ ಆಸ್ತಿಗಳು ದುಪ್ಪಟ್ಟು ಆಗಿರುವ ಉದಾಹರಣೆಗಳು ಇವೆ. ಇದೀಗ ಬೆಂಗಳೂರಿನ ಸರ್ಜಾಪುರದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ಬೆಂಗಳೂರಿನ ಮೆಟ್ರೋ ರೆಡ್ ಲೈನ್ (ಕೆಂಪು ಮಾರ್ಗಕ್ಕೆ) ಕರ್ನಾಟಕ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬೆಂಗಳೂರಿನ ಉತ್ತರ ಭಾಗ ಹಾಗೂ ಆಗ್ನೇಯ ಪ್ರದೇಶಗಳಲ್ಲಿ ಆಸ್ತಿಗೆ ಅದೃಷ್ಟ ಬರಲಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಹೇಳಿದ್ದಾರೆ.
ಇನ್ನು ಆಸ್ತಿ ಹಾಗೂ ಪ್ರಾಪರ್ಟಿಗಳ ಬೆಲೆ ಹೆಚ್ಚಳವಾಗುವುದು ಮಾತ್ರವಲ್ಲ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಉತ್ತರ ಭಾಗದ ಸರ್ಜಾಪುರ ಮತ್ತು ಹೆಬ್ಬಾಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನೆ ಬಾಡಿಗೆ ದರವೂ ಸಹ ಶೇಕಡ 10ರಿಂದ 30ರಷ್ಟು ಹೆಚ್ಚಳವಾಗಲಿದೆ . ಮುಂದಿನ ಎರಡು ವರ್ಷದಲ್ಲಿ ಈ ಬದಲಾವಣೆ ಆಗಲಿದೆ ಎಂದು ಅಂದಾಜಿಸಲಾಗಿದೆಯಾದರೂ, ಹಲವು ಭಾಗದಲ್ಲಿ ಈಗಾಗಲೇ ಮನೆ ಮಾಲೀಕರು ಬಾಡಿಗೆದಾರರಿಗೆ ಮುನ್ಸೂಚನೆ ಕೊಟ್ಟಾಗಿದೆ.
ಕೇಂದ್ರ ಸರ್ಕಾರದ ಅನುಮತಿ ಬಾಕಿ: ರಾಜ್ಯ ಸರ್ಕಾರವು ಉದ್ದೇಶಿತ ಮೆಟ್ರೋ ಯೋಜನೆಗೆ ಅನುಮೋದನೆ ಕೊಟ್ಟಿದೆ. ಇದರಿಂದ ಹೊಸ ಮೆಟ್ರೋ ರೈಲು ಮಾರ್ಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ವಿನ್ಯಾಸ ಸೇರಿದಂತೆ ಹಲವು ಕೆಲಸಗಳು ಭರದಿಂದ ಸಾಗಲಿದೆ ಎಂದು ಹೇಳಲಾಗಿದೆ. ಆದರೆ, ಈ ಉದ್ದೇಶಿತ ಯೋಜನೆಯು ಅಧಿಕೃತವಾಗಿ ಪ್ರಾರಂಭವಾಗಬೇಕಾದರೆ, ಇದಕ್ಕೆ ಕೇಂದ್ರ ಸರ್ಕಾರವು ಅನುಮೋದನೆ ನೀಡಬೇಕಿದೆ. ಕೇಂದ್ರ ಸರ್ಕಾರದ ಅನುಮೋದನೆಯ ನಂತರವೇ ಇದು ಅಧಿಕೃತವಾಗಿ ಶುರುವಾಗಲಿದೆ. ಕೇಂದ್ರ ಸರ್ಕಾರವು ಬೆಂಗಳೂರು ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸುತ್ತಿದೆ. ಹೀಗಾಗಿ, ರಾಜ್ಯ ಸರ್ಕಾರ ಈ ವಿಚಾರವಾಗಿ ಅನುಮೋದನೆ ಸಲ್ಲಿಸುತ್ತಿದ್ದಂತೆಯೇ ಪರಿಶೀಲನೆ ಮಾಡಿ ಕೇಂದ್ರ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆ ಇದೆ.












Click it and Unblock the Notifications