ಬೆಂಗಳೂರು; ಮಾರತಹಳ್ಳಿ ಠಾಣೆಯ ಸಿಬ್ಬಂದಿಗೆ ಕ್ವಾರಂಟೈನ್

ಬೆಂಗಳೂರು, ಜೂನ್ 19 : ಬೆಂಗಳೂರು ನಗರದ ಮಾರತಹಳ್ಳಿ ಪೊಲೀಸ್ ಠಾಣೆಯ 10 ಸಿಬ್ಭಂದಿಗಳನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ವಂಚನೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದ ನಾಲ್ವರು ಆರೋಪಿಗಳಲ್ಲಿ ಒಬ್ಬನಿಗೆ ಕೋವಿಡ್ - 19 ಸೋಂಕು ಇರುವುದು ಖಚಿತವಾಗಿದೆ.

ಹೊಸೂರು ಮೂಲದ ವ್ಯಕ್ತಿ ಬೆಂಗಳೂರಿನ ಉದ್ಯಮಿಯೊಬ್ಬರಿಗೆ 2 ಕೋಟಿ ರೂ. ವಂಚನೆ ಮಾಡಿದ್ದ. ಪ್ರಕರಣದ ತನಿಖೆ ಕೈಗೊಂಡಿದ್ದ 11 ಜನರ ಪೊಲೀಸರ ತಂಡ ನಾಲ್ವರನ್ನು ಬಂಧಿಸಿತ್ತು. ಇವರಲ್ಲಿ ಒಬ್ಬ ಆರೋಪಿಗೆ ಸೋಂಕು ತಗುಲಿದೆ.

ಮಾರತಹಳ್ಳಿ ಮೂಲದ ಉದ್ಯಮಿ 10 ಜನರ ವಿರುದ್ಧ ದೂರು ನೀಡಿದ್ದ. ಗುರುವಾರ ಪೊಲೀಸರು ನಾಲ್ವರನ್ನು ಬಂಧಿಸಿ ಕರೆತಂದಿದ್ದರು. ಈ ತಂಡದಲ್ಲಿದ್ದ 10 ಸಿಬ್ಬಂದಿಗಳನ್ನು ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಕೋವಿಡ್ -19 ಪರೀಕ್ಷೆ ಮಾಡಲಾಗುತ್ತದೆ.

Quarantine For Marathahalli Police Station 9 Personal

ಬುಧವಾರ ಬೆಂಗಳೂರು ನಗರದ 9 ಪೊಲೀಸ್ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಇವರೆಲ್ಲರೂ ಕಂಟೈನ್ಮೆಂಟ್ ಝೋನ್‌ಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದರು. ಮಂಗಳವಾರ ವಿವಿ ಪುರಂ ಸಂಚಾರಿ ಠಾಣೆಯ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿತ್ತು.

ಬೆಂಗಳೂರು ನಗರದಲ್ಲಿನ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 851. ಇವುಗಳಲ್ಲಿ 423 ಸಕ್ರಿಯ ಪ್ರಕರಣಗಳು. 277 ಕಂಟೈನ್ಮೆಂಟ್ ಝೋನ್‌ಗಳು ನಗರದಲ್ಲಿವೆ. ಇವುಗಳಲ್ಲಿ 239 ಸಕ್ರಿಯ ಕಂಟೈನ್ಮೆಂಟ್ ಝೋನ್‌ಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+