ವರ್ಕ್ ಫ್ರಂ ಪ್ಲೈಓವರ್: ಬೆಂಗಳೂರು ಟೆಕ್ಕಿಗೆ ಸರಿಸಾಟಿಯಿಲ್ಲ
ಬೆಂಗಳೂರು ಜುಲೈ 13: ಹೆಚ್ಚಿನ ಜನರು ಇನ್ನೂ ಮನೆಯಿಂದಲೇ ಕೆಲಸ ಮಾಡಬೇಕೋ ಅಥವಾ ಕಚೇರಿಯಲ್ಲಿ ಕೆಲಸ ಮಾಡಬೇಕೋ ಎಂಬ ಯೋಚನೆಯಲ್ಲಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ರಸ್ತೆ ಮೇಲೆ ಲ್ಯಾಪ್‌ಟಾಪಿನಲ್ಲಿ ಕೆಲಸ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ರಸ್ತೆ ಬದಿಯಲ್ಲಿ ಕುಳಿತುಕೊಂಡೋ ಅಥವಾ ನಿಂತುಕೊಂಡೋ ಲ್ಯಾಪ್‌ಟಾಪಿನಲ್ಲಿ ಕೆಲಸ ಮಾಡಿದ್ದರೆ ಈ ವಿಷಯವನ್ನು ಹೇಳುವ ಅಗತ್ಯ ಇರಲಿಲ್ಲ. ಆದರೆ ಈ ವ್ಯಕ್ತಿ ಬೈಕ್ ಚಲಾಯಿಸುತ್ತಲೇ ಲ್ಯಾಪ್‌ಟಾಪಿನಲ್ಲಿ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದ್ದು ಇದಕ್ಕೆ ಅಧಿಕ ಪ್ರತಿಕ್ರಿಯೆಗಳು ಬಂದಿವೆ.
ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಫ್ಲೈಓವರ್ ಮೇಲೆ ಬೈಕ್ ಓಡಿಸುತ್ತಾ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿರುವ ಫೋಟೋವೊಂದು ವೈರಲ್ ಆಗಿದೆ. ಲಿಂಕ್ಡ್‌ಇನ್ ಬಳಕೆದಾರ ಹರ್ಷಮೀತ್ ಸಿಂಗ್ ಅವರು ಈ ಫೋಟೋವನ್ನು ಪೋಸ್ಟ್ ಮಾಡಿದ್ದು, ಜನರ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ.

ಲಿಂಕ್ಡ್‌ಇನ್ ಬಳಕೆದಾರ ಹರ್ಷಮೀತ್ ಸಿಂಗ್ ಅಪ್‌ಲೋಡ್ ಮಾಡಿದ ಪೋಸ್ಟ್‌ನಲ್ಲಿ, ಪಿಲಿಯನ್ ರೈಡರ್ ರಾತ್ರಿ 11 ಗಂಟೆಗೆ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ವೈರಲ್ ಪೋಸ್ಟ್‌ಗೆ ಇದುವರೆಗೆ 41,000 ಲೈಕ್‌ಗಳನ್ನು ಸ್ವೀಕರಿಸಿದೆ. ಇಂತಹ ಕಾರ್ಯಪ್ರವೃತ್ತ ವ್ಯಕ್ತಿಯನ್ನು ನೋಡಿ ನೆಟಿಜನ್‌ಗಳು ಬೆಚ್ಚಿಬಿದ್ದಿದ್ದು, ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಇದು ಅಪಾಯಕಾರಿ ಚಾಲನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬಳಕೆದಾರನೊಬ್ಬರು, "ನನ್ನ ಅನುಭವದಲ್ಲಿ ಹೇಳುವುದಾದರೆ, ಈ ರೀತಿ ಒತ್ತಡದ ಪದ ಪುಂಜಗಳನ್ನು ಅತಿ ಕಡಿಮೆ ಬಳಸಿದಷ್ಟು ನಿಮ್ಮ ತಂಡ ತಮ್ಮದೇ ಆದ ಸ್ವಂತ ನಿರ್ಣಯ ಕೈಗೊಳ್ಳಲು ಸಾಧ್ಯ, ಸದ್ಯ ಹೆಚ್ಚು ಸಬಲೀಕರಣ, ಹೆಚ್ಚು ಶಕ್ತಿಯುತವಾಗಿರುವ ಭಾವನೆ ಇದ್ದು, ಸರಿಯಾದ ಸಮಯಕ್ಕೆ ಸರಿಯಾದ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ" ಎಂದು ಬರೆದಿದ್ದಾರೆ.












Click it and Unblock the Notifications