ಮಗಳ ಕೊಂದು ಆತ್ಮಹತ್ಯೆಗೆ ಶರಣಾದ ತಂದೆ
ಬೆಂಗಳೂರು, ಫೆ. 16: ಪತ್ನಿ ನಾಪತ್ತೆಯಾದ ಕಾರಣ ಬೇಸತ್ತ ವ್ಯಕ್ತಿಯೋರ್ವ ಮಗಳ ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರು ಉತ್ತರ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ನಿವಾಸಿ ಪ್ರಸನ್ನಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.
ಪ್ರಸನ್ನ ಕುಮಾರ್ ಅವರ ಪತ್ನಿ ಉಷಾ ನಾಪತ್ತೆಯಾಗಿದ್ದರು. ಇದರಿಂದ ತೀವ್ರ ವ್ಯಾಕುಲಗೊಂಡಿದ್ದರು. ಸೋಮವಾರ ಬೆಳಗ್ಗೆ ಪ್ರಸನ್ನಕುಮಾರ್ ಅವರು ತಮ್ಮ ಮಗಳು ಕೀರ್ತಿ (7) ಅವರನ್ನು ಹತ್ಯೆಗೈದು ನಂತರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜಾನುಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications