ಅರಣ್ಯ ಜಾಗ ವಶಪಡಿಸಿಕೊಂಡು ರಸ್ತೆ ನಿರ್ಮಾಣ: ಮುಖ್ಯ ಆಯುಕ್ತರಿಂದ ಮಹತ್ವದ ಸೂಚನೆ
ಬೆಂಗಳೂರು, ನವೆಂಬರ್26: ನ್ಯೂ ಹಾರಿಜನ್ ಕಾಲೇಜು ಬಳಿಯ ಎಸ್.ಹೆಚ್ 45 ವರ್ತೂರು-ಗುಂಜೂರು ಮುಖ್ಯ ರಸ್ತೆಯ ಬಳಿ, ಹೊಸದಾಗಿ ರಸ್ತೆ ನಿರ್ಮಾಣ ಮಾಡುವ ಸಲುವಾಗಿ 6 ಎಕರೆ ಅರಣ್ಯ ಜಾಗ ನೀಡಿದರೆ, ಈ ಭಾಗದಲ್ಲಿ ಬಹುತೇಕ ಸಂಚಾರ ದಟ್ಟಣೆ ನಿವಾರಣೆಯಾಲಿದೆ. ಈ ಸಂಬಂಧ ಅರಣ್ಯ ಜಾಗ ವಶಪಡಿಸಿಕೊಂಡು, ರಸ್ತೆ ನಿರ್ಮಾಣಕ್ಕೆ ಕ್ರಮವಹಿಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಇಬ್ಲೂರು ಜಂಕ್ಷನ್ ಬಳಿ ಮೇಲ್ಸೇತುವೆ ಕಳೆಭಾಗದಲ್ಲಿ ಈಗಾಗಲೇ ಸುಂದರೀಕರಣ ಮಾಡಲಾಗಿದ್ದು, ಇದೇ ಮಾದರಿಯಲ್ಲಿ ಇತರೆ ಮೇಲ್ಸೇತುವೆಗಳ ಕೆಳಭಾಗದಲ್ಲಿ ಸಿ.ಎಸ್.ಆರ್ ಅಡಿ ಅಭಿವೃದ್ಧಿಪಡಿಸಲು ಸೂಚನೆ ನೀಡಿದರು. ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಿ.ಎಸ್.ಆರ್ ಅಡಿ ಮೇಲ್ಸೇತುವೆಗಳ ಕೆಲ ಭಾಗಗಳನ್ನು ಅಭಿವೃದ್ಧಿಪಡಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುಂಜೂರು ಪಣತ್ತೂರು ರಸ್ತೆಯಲ್ಲಿ ಡಾಂಬರೀಕರಣ ಮಾಡಲಾಗಿದ್ದು, ಈ ರಸ್ತೆಯಲ್ಲಿ 180 ಮೀಟರ್ ರಾಜಕಾಲುವೆ ಮೇಲೆ ರಸ್ತೆಯಿದೆ. ಅದಕ್ಕೆ ಮಾತ್ರ ಡಾಂಬರೀಕರಣ ಹಾಕಿರುವುದಿಲ್ಲ. ನಕಾಷೆಯಲ್ಲಿರುವ ರಸ್ತೆಯನ್ನು ಪರಿಶೀಲಿಸಿ ಅದರ ಅನುಸಾರ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಸೂಚನೆ ನೀಡಿದರು.
ಮೇಲ್ಸೇತುವೆಗಳ ಕೆಳಭಾಗಗಳಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು, ಕಾರ್ಮಲರಂ ಮೇಲ್ಸೇತುವೆ ಕೆಳಭಾಗದಲ್ಲಿ ಸಿ.ಎಸ್.ಆರ್ ಅಡಿ ಎಲ್ & ಟಿ ಸಂಸ್ಥೆಯು ಚತುರಂಗ ಮಂಟಪ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದೇ ರೀತಿ ಬೆರೆ ಕಡೆ ವಿವಿಧ ರೀತಿಯ ವಿನ್ಯಾಸದಲ್ಲಿ ಅಭಿವೃದ್ಧಿಪಡಿಸುವಂತೆ ಸೂಚಿಸಿದರು. ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿವಾರಿಸುವ ಉದ್ದೇಶದಿಂದ ಮುಖ್ಯ ರಸ್ತೆಯಿಂದ ಸರ್ವೀಸ್ ರಸ್ತೆಗೆ (Entry & Exit) ಒಳಗೆ-ಹೊರಗೆ ವಾಹನಗಳು ತೆರಳುವ ಸಲುವಾಗಿ ಪಾಲಿಕೆಯಿಂದ ಈಗಾಗಲೇ 3 ಕಡೆ ಅನುಷ್ಠಾನಗೊಳಿಸಲಾಗಿದೆ. ಉಳಿದ ಕಡೆ ಮೆಟ್ರೋ ಇಲಾಖೆಯಿಂದ ಮಾಡಬೇಕಿದ್ದು, ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಎಂಟ್ರಿ-ಎಕ್ಸಿಟ್ ಪಾಯಿಂಟ್ಸ್ ಮಾಡಲು ಸೂಚನೆ ನೀಡಿದರು.
ಸರ್ಜಾಪುರ ರಸ್ತೆ ಕೈಕೊಂಡ್ರಹಳ್ಳಿ ಬಳಿ ರಸ್ತೆ ಮಧ್ಯೆಯಿರುವ ಐಲ್ಯಾಂಡ್ ಅಭಿವೃದ್ಧಿಪಡಿಸಬೇಕು. ಎಲ್ಲಿ ಟಿ.ಡಿ.ಆರ್ ಸಮಸ್ಯೆ ಇದೆ ಅದನ್ನು ಇತ್ಯರ್ಥಪಡಿಸಿಕೊಂಡು ಸರ್ವೀಸ್ ರಸ್ತೆ ಅಭಿವೃದ್ಧಿಪಡಿಸಬೇಕು ಹಾಗೂ ಅನಧಿಕೃತ ಕಟ್ಟಡಗಳನ್ನು ಗುರುತಿಸಿ ತೆರವುಗೊಳಿಸಲು ಸೂಚನೆ ನೀಡಿದರು. ಸರ್ಜಾಪುರ ರಸ್ತೆ ವಿಪ್ರೋ ಬಳಿ ಡಾಂಬರೀಕರಣ ಕಾರ್ಯ ಪ್ರಗತಿಯಲ್ಲಿದ್ದು, ವಿಪ್ರೋದಿಂದ ಆಗಿರುವ ಡ್ರೈನ್ ಹಾಗೂ ಪಾಲಿಕೆಯಿಂದ ಆಗಿರುವ ಡ್ರೈನ್ ವಿಲೀನ ಮಾಡಿದರೆ ರಸ್ತೆಯಲ್ಲಿ ಜಲಾವೃತವಾಗುವ ಸಮಸ್ಯೆ ತಪ್ಪಲಿದೆ. ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ರಸ್ತೆ ಬದಿ ಕೈಗೊಂಡಿರುವ ಸೈಡ್ ಡ್ರೈನ್ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಸೂಚನೆ ನೀಡಿದರು.
ಸರ್ಜಾರದಿಂದ ಚಿಕ್ಕಬೆಳ್ಳಂದೂರು ಕಡೆಗಿನ 900 ಮೀಟರ್ ಉದ್ದದ ರಸ್ತೆ ಅಗಲೀಕರಣದ ಪೈಕಿ 300 ಮೀಟರ್ ರಸ್ತೆಗೆ ಫಾರ್ಮ್ 3 ನೀಡಿದ್ದು, ಟಿ.ಡಿ.ಆರ್ ನೀಡುವುದು ಬಾಕಿ ಇದೆ. ಹಾಗಾಗಿ 300 ಮೀಟರ್ ರಸ್ತೆಗೆ ಒಂದು ಲೇಯರ್ ಮಾತ್ರ ಡಾಂಬರೀಕರಣ ಹಾಕಲಾಗಿದೆ. ಟಿ.ಡಿ.ಆರ್ ಸಮಸ್ಯೆ ಇತ್ಯರ್ಥ ಆದ ಬಳಿಕ ಡಾಂಬರೀಕರಣ ಹಾಗೂ ಪಾದಚಾರಿ ಮಾರ್ಗ ಅಭಿವೃದ್ಧಿಪಡಿಸಲಾಗುವುದೆಂದು ತಿಳಿಸಿದರು. ಗುಂಜೂರು ಕ್ಲಬ್ ರಸ್ತೆಯಲ್ಲಿ ವೆಟ್ ಮಿಕ್ಸ್ ಹಾಕಿದ್ದು, ಅದಕ್ಕೆ ಡಾಂಬರೀಕರಣ ಹಾಕದೇ ಇರುವುದನ್ನು ಪ್ರಶ್ನಿಸಿದಾಗ, ರಾಜಕಾಲುವೆ ಕಾಮಗಾರಿ ನಡೆಯಬೇಕಿರುವ ಕಾರಣ ರಸ್ತೆ ಅಭಿವೃದ್ಧಿಪಡಿಸಿಲ್ಲಿ ಅಧಿಕಾರಿ ಮಾಹಿತಿ ನೀಡಿದರು. ಸಮಸ್ಯೆ ಇತ್ಯರ್ಥಪಡಿಸಿಕೊಂಡು ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚನೆ ನೀಡಿದರು.












Click it and Unblock the Notifications