ವಾರಾಂತ್ಯದ ಸರಣಿ ರಜೆ : ಕೆಎಸ್ಆರ್‌ಟಿಸಿಯಿಂದ ಹೆಚ್ಚುವರಿ ಬಸ್
ಬೆಂಗಳೂರು, ಅಕ್ಟೋಬರ್ 07 : ಮಹಾಲಯ ಅಮಾವಾಸ್ಯೆ ಪ್ರಯುಕ್ತ ಸರ್ಕಾರಿ ರಜೆ ಇರುವುದರಿಂದ ಕೆಎಸ್ಆರ್‌ಟಿಸಿ ಅಕ್ಟೋಬರ್ 9 ಮತ್ತು 10ರಂದು ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಮಾಡಿದೆ. ಅಕ್ಟೋಬರ್ 10, 11 ಮತ್ತು 12 ರಂದು ಸರಣಿ ರಜೆ ದೊರೆಯಲಿದೆ.
ಅಕ್ಟೋಬರ್ 9ರ ಶುಕ್ರವಾರ ಮತ್ತು ಅಕ್ಟೋಬರ್ 10ರ ಶನಿವಾರ ಹೆಚ್ಚುವರಿ ಬಸ್ಸುಗಳು ಸಂಚಾರ ನಡೆಸಲಿವೆ. ಮೆಜೆಸ್ಟಿಕ್‌ನಲ್ಲಿ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿರುವುರಿಂದ ನಗರದ ವಿವಿಧ ಪಿಕಪ್ ಪಾಯಿಂಟ್‌ಗಳಿಂದ ಹೆಚ್ಚುವರಿ ಬಸ್ಸುಗಳು ಸಂಚಾರ ನಡೆಸಲಿವೆ. [2015ರ ಸರ್ಕಾರಿ ರಜೆ ಪಟ್ಟಿ]

ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ, ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ, ವಿಜಯನಗರ ಟಿಟಿಎಂಸಿ, ಗಂಗಾನಗರ, ಮಲ್ಲೇಶ್ವರಂ 18ನೇ ಕ್ರಾಸ್, ಜಯನಗರ 4ನೇ ಬ್ಲಾಕ್ ಮುಂತಾದ ಸ್ಥಳದಿಂದ ಬಸ್ಸುಗಳು ಸಂಚಾರ ನಡೆಸಲಿದ್ದು, ಮುಂಗಡವಾಗಿ ಟಿಕೆಟ್ ಬುಕ್ ಮಾಡಿದವರು ಈ ಸ್ಥಳಗಳಿಂದ ಪ್ರಯಾಣಿಸಬಹುದಾಗಿದೆ. [KSRTC ಬಯೋ ಬಸ್ ಉಪಯೋಗಗಳು]
ಮುಂಗಡ ರಹಿತ ಬಸ್ಸುಗಳು ಕೆಂಪೇಗೌಡ ಬಸ್ ನಿಲ್ದಾಣದಿಂದ ಸಂಚಾರ ನಡೆಸಲಿವೆ. ದಾವಣಗೆರೆ, ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ, ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸುವ ಮುಂಗಡ ರಹಿತ ಮತ್ತು ಹೆಚ್ಚುವರಿ ಬಸ್ಸುಗಳು ಮೆಜೆಸ್ಟಿಕ್ ನಿಲ್ದಾಣದ ಮುಂಭಾಗದ ಬಿಎಂಟಿಸಿ ಸರ್ವಿಸ್ ರಸ್ತೆಯ ಮೂಲಕ ಸಂಚಾರ ನಡೆಸಲಿವೆ. [KSRTC ವೆಬ್ ಸೈಟ್]
ಸರಣಿ ರಜೆಗಳು
* ಅಕ್ಟೋಬರ್ 10 (2ನೇ ಶನಿವಾರ)
* ಅಕ್ಟೋಬರ್ 11 (ಭಾನುವಾರ)
* ಅಕ್ಟೋಬರ್ 12 ಮಹಾಲಯ ಅಮಾವಾಸ್ಯೆ (ಸೋಮವಾರ)












Click it and Unblock the Notifications