Session 2026: ಜನರ ಸಮಸ್ಯೆಗಿಂತ ಪ್ರತಿಷ್ಠೆಯೇ ಮುಖ್ಯವೇ? ಬಿಜೆಪಿಗೆ ಮಧು ಬಂಗಾರಪ್ಪ ಫುಲ್ ಕ್ಲಾಸ್!

ಬೆಂಗಳೂರು: ಕರ್ನಾಟಕ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಬರಗಾಲ, ರೈತರಿಗೆ ಪರಿಹಾರ, ಬೆಳೆ ನಷ್ಟ ಸಮೀಕ್ಷೆ, ಕೆಪಿಎಸ್‌ಸಿ ಹಗರಣ, ನಿರುದ್ಯೋಗ, ಅಭಿವೃದ್ಧಿ ಯೋಜನೆಗಳು ಹೀಗೆ ನಾನಾ ವಿಷಯಗಳನ್ನು ಚರ್ಚಿಸಲಾಗುತ್ತದೆ ಎಂಬ ಭಾವನೆ ರಾಜ್ಯದಲ್ಲಿ ಜನರಲ್ಲಿತ್ತು. ಆದರೆ ಅದೆಲ್ಲವು ಹುಸಿಯಾಗಿದೆ. ಸದನದಲ್ಲಿ ಪ್ರಮುಖ ವಿಷಯಗಳು ಚರ್ಚೆ ನಡೆಯದೇ ನಾಯಕರು ಕೇವಲ ಕಾಲಹರಣ ಮಾಡಲಾಗುತ್ತಿದೆ. ಸಚಿವ ಬಿ.ನಾಗೇಂದ್ರ ಅವರ ವಿಚಾರ ಮುಂದಿಟ್ಟುಕೊಂಡು ಕಲಾಪ ಬಲಿ ಕೊಡಲಾಗುತ್ತಿದೆ. 'ಹಾವು ಸಾಯುತ್ತಿಲ್ಲ, ಕೋಲು ಮುರಿಯುತ್ತಿಲ್ಲ' ಎಂಬ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು, ಬಿಜೆಪಿ ಜನ ವಿರೋಧಿ ನೀತಿ ತಾಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ (ಕೆಪಿಸಿಸಿ) ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಇಂದು ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ರಾಜ್ಯದ ಅಭಿವೃದ್ಧಿ ವಿಚಾರಗಳ ಕುರಿತು ವಿಧಾನಮಂಡಲದಲ್ಲಿ ಚರ್ಚೆ ನಡೆಸಲು ಬಿಜೆಪಿಗೆ ಎಳ್ಳಷ್ಟೂ ಆಸಕ್ತಿ ಇಲ್ಲ. ಹೀಗಾಗಿ ಸದನದ ಕಲಾಪಕ್ಕೆ ನಿರಂತರವಾಗಿ ಅಡ್ಡಿಪಡಿಸುವ ಮೂಲಕ ಜನವಿರೋಧಿಯಾಗಿ ವರ್ತಿಸುತ್ತಿದೆ ಎಂದರು.

Madhu Bangarappa

ಬಿಜೆಪಿಯಿಂದ ಉದ್ದೇಶಪೂರ್ವಕ ಕಲಾಪಕ್ಕೆ ಅಡ್ಡಿ

ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ವಿಚಾರಗಳ ಕುರಿತು ಸದನದಲ್ಲಿ ಸಮಗ್ರ ಚರ್ಚೆ ನಡೆಯಬೇಕು. ಆದರೆ, ಬಿಜೆಪಿ ಸದಸ್ಯರು ಉದ್ದೇಶಪೂರ್ವಕವಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಜನರ ಸಮಸ್ಯೆಗಳು ಹಾಗೂ ಅಭಿವೃದ್ಧಿಯ ವಿಚಾರಗಳು ಚರ್ಚೆಯಾಗದಂತೆ ಮಾಡುತ್ತಿದ್ದಾರೆ. ಬಿಜೆಪಿಯ ಈ ನಡೆಯಿಂದ ಆ ಪಕ್ಷಕ್ಕೆ ಪ್ರಜಾತಾಂತ್ರಿಕ ವ್ಯವಸ್ಥೆಯ ಮೇಲೆ ಗೌರವವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಜನರ ಸಮಸ್ಯೆಗಳಿಗಿಂತ ಬಿಜೆಪಿಗೆ ತನ್ನ ಪ್ರತಿಷ್ಠೆಯೇ ಹೆಚ್ಚಾಗಿದೆ ಎಂದು ಅವರು ದೂರಿದರು.

ಅಭಿವೃದ್ಧಿಗೆ ನೀತಿ ನಿರ್ಧಾರ ರೂಪಿಸಬೇಕು

ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ರಾಜ್ಯದ ಅಭಿವೃದ್ಧಿಗೆ ಅಗತ್ಯವಾದ ನೀತಿ-ನಿರ್ಧಾರಗಳನ್ನು ರೂಪಿಸಲು ವಿಧಾನಮಂಡಲದ ಕಲಾಪ ಅತ್ಯಂತ ಮಹತ್ವದ್ದಾಗಿದೆ. ಆದರೆ, ಪ್ರತಿಪಕ್ಷವು ರಚನಾತ್ಮಕ ಚರ್ಚೆಗೆ ಮುಂದಾಗದೇ ಸದನದ ಕಲಾಪವನ್ನು ಅಡ್ಡಿಪಡಿಸುವುದನ್ನೇ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಯಾವುದೇ ವಿಷಯದ ಕುರಿತು ಚರ್ಚಿಸಲು ನಾವು ಸಿದ್ಧರಿದ್ದೇವೆ ಎಂದರೂ ಅವಕಾಶ ನೀಡದೇ, ಸದನದ ಘನತೆಗೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು.

ರಾಜ್ಯದ ಅಭಿವೃದ್ಧಿ, ಶಿಕ್ಷಣ, ರೈತರು, ಯುವಜನರು ಹಾಗೂ ಜನಸಾಮಾನ್ಯರ ಬದುಕಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ. ಪ್ರತಿಪಕ್ಷವೂ ಸಹ ಜವಾಬ್ದಾರಿಯುತವಾಗಿ ನಡೆದುಕೊಂಡು ಸದನದ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಕಲಾಪದಲ್ಲಿ ಬಿ. ನಾಗೇಂದ್ರ ರಾಜೀನಾಮೆ ನೀಡಬೇಕು. ಅವರ ಮೇಲೆ ಪ್ರಕರಣಗಳಿದ್ದು, ಅವರು ಕ್ಲೀನ್ ಚೀಟ್ ಪಡೆದು ಸಚಿವರಾಗಲಿ ಎಂಬ ಒಂದೇ ಕಾರಣವಿಟ್ಟುಕೊಂಡು ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ, ಘೋಷಣೆ ನಡೆಯುತ್ತಿವೆ. ಬೇರಾವುದೇ ವಿಷಯ ಚರ್ಚೆ ಆಗುತ್ತಿಲ್ಲ. ಇತ್ತ ಸರ್ಕಾರವು ಬಿ.ನಾಗೇಂದ್ರ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಎರಡು ಪಕ್ಷಗಳ ನಾಯಕರ ಮೊಂಡುತನದಿಂದ ಕಲಾಪ ಬಲಿಯಾಗುತ್ತಿದೆ. ಚರ್ಚಿಸಲು ಸಾಕಷ್ಟು ವಿಷಯಗಳು ಇವೆ. ಜನಪರ ಕಾಳಜಿ ಇದ್ದವರು ಅನಗತ್ಯ ಕಾಲ ಹರಣ ಮಾಡದೇ ಚರ್ಚಿಸುತ್ತಿದ್ದರು. ಇವರಿಗೆ ಜನರ ಸಮಸ್ಯೆ ಬೇಕಿಲ್ಲ, ಮತ, ಅಧಿಕಾರ ಮಾತ್ರವೇ ಬೇಕೆಂದು ಸಾರ್ವಜನಿಕರು ದೂರುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+