ಮಹಾ ಶಿವರಾತ್ರಿ ವಿಶೇಷ: ಮಾದರಿ ಮಾದಯ್ಯ ನಾಟಕ ನೋಡಿ
ಬೆಂಗಳೂರು, ಮಾರ್ಚ್ 03: ಕನ್ನಡ ಜನಪದರ ಚರಿತ್ರೆಯ ಅಂತರಂಗದ ಅದ್ಭುತ ಅಧ್ಯಾಯಗಳಲ್ಲಿ ಒಂದಾಗಿರುವ ಮಾದೇಶ್ವರನ ಪುಣ್ಯ ಕಥೆಯ ಸಮಕಾಲೀನ ಅರ್ಥದ ನಾಟಕ ಮಾದರಿ ಮಾದಯ್ಯ. ಮಾದಯ್ಯ ಅವರನ್ನು ಕುರಿತ ನಾಟಕ ಮಹಾ ಶಿವರಾತ್ರಿ ಅಂಗವಾಗಿ ಕೆಎಚ್ ಕಲಾಸೌಧದಲ್ಲಿ ಮಾರ್ಚ್ 04ರಂದು ಪ್ರದರ್ಶನಗೊಳ್ಳುತ್ತಿದೆ.
ಹುಟ್ಟು ಬಾಲ್ಯದ ನೆನಪಿನಲ್ಲಿ ತಪ್ಪು ಪ್ರಗತಿಯ ಹಾದಿಯಲ್ಲಿ ಅಮಲೇರಿದ ಬಾಲಕನೊಬ್ಬ ನಡೆಸುತ್ತಿರುವ ಬಹುರಾಷ್ಟ್ರೀಯ ಕಂಪನಿಯ ಕಾರಿನಂತೆ ಕುರುಡು ವೇಗದಲ್ಲಿ ಮುನ್ನುಗ್ಗುತ್ತಿರುವ ನಮ್ಮ ಜಗತ್ತಿನ ಕೆಳಸ್ತರದ ಕಂಸಾಳೆಯವರ ಸಾಮೂಹಿಕ ನೆನಪಿನಲ್ಲಿ ಮಾದೇಶ್ವರನ ಹೆಸರು, ಅವನ ಏಳು ಮಲೆಗಳ ಚಿತ್ರ ಹೊರಡಿಸುವ ಭಾವನೆಗಳೇ ಬೇರೆ.
ಅವನು ಒಬ್ಬ ಸಾಂಸ್ಕೃತಿ ಪುರುಷ. ಕಸಿದುಕೊಳ್ಳಲ್ಪಟ್ಟಿದ್ದ ಬೆಳಕನ್ನು ಮರಳಿಸಿದವ. ನರಮನುಷ್ಯರಾದಿಯಾಗಿ ಎಲ್ಲಾ ಜೀವ - ಜಡಗಳನ್ನೂ ಕಲ್ಪನೆಯ ಆಚೆಕಡೆ ಸೀಮೆಗೆ ಕೊಂಡೊಯ್ಯುವವ ಮನವತ್ವ ದೈವತ್ವವನ್ನು ಮೀರಿದ ದೈವೀಕ ಮಾನವತೆಯ ಹರಿಕಾರ, ಅವನೊಬ್ಬ ಕಠೋರ ವಾಸ್ತವಗಳಿಗಿಂತ ಕಠೋರವಾದ ಆದರ್ಶ.
ಮಲೆ ಮಾದೇಶ್ವರ ಪುರಾಣದ ಹೃದಯ, ಶ್ರವಣ ದೊರೆ ಸಂಹಾರದ ಸಾಲು. ಇದು ಮೇಲುನೋಟಕ್ಕೆ ಅದ್ಭುತ ಪವಾಡದ ಕತೆ. ಮಾದೇಶ್ವರ ನಿಸರ್ಗದ ಶಕ್ತಿಗಳನ್ನು ತನ್ನ ಅಡಿಯಾಳುಗಳನ್ನಾಗಿಸಿಕೊಂಡು ಶ್ರವಣನನ್ನು ನಾಶ ಮಾಡುವ ಕತೆ.
ಈ ನಾಟಕವನ್ನು ಕನ್ನಡ ರಂಗಭೂಮಿಯಲ್ಲಿ ಕಳೆದ 17 ವರ್ಷಗಳಿಂದ ಸಕ್ರಿಯರಾಗಿರುವ ಸಂಪತ್ ಕುಮಾರ್ ರವರು ನಮ್ಮ ತಂಡಕ್ಕೆ ನಿರ್ದೇಶನವನ್ನು ಮಾಡಿದ್ದಾರೆ.

ಮಾದರಿ ಏಳು ಬೇಲಿಯಾಚೆ ಕೀಳಾಗಿ ಹುಟ್ಟಿದವನು
ಇಡೀ ನಾಟಕ ಪವಾಡದ ಸರಣಿಯನ್ನು ಯಥಾವತ್ತಾಗಿ ನಿರೂಪಿಸದೆ, ಒಂದು ರೀತಿಯ ಆಟದ ಮೂಲಕ, ಆಚರಣೆಯ ಮೂಲಕ ಕಟ್ಟಿಕೊಡುವುದರಿಂದ ಇಲ್ಲಿನ ಪವಾಡಗಳು ಕಾರಣೀಕಗಳಾಗುತ್ತವೆ. ಮಾದರಿ ಏಳು ಬೇಲಿಯಾಚೆ ಕೀಳಾಗಿ ಹುಟ್ಟಿದವನು. ಅವನ ವಿರೋಧಿ ಎಲ್ಲ ದೇವಮಾನವರನ್ನು ದಮನ ಮಾಡುತ್ತಿರುವ ಶ್ರವಣ. ಅವನು ನೆಲದೇವತೆಯನ್ನು ಕೆಡಿಸಲು ಹೊರಡುವನು. ಯುದ್ಧ ಶಾಂತಿ ಎರಡನ್ನೂ ತನ್ನ ದಬ್ಬಾಳಿಕೆ ಅಸ್ತ್ರವನ್ನಾಗಿಸಿಕೊಂಡವನು.
ಇಂತಹವನನ್ನು ಮಾದರಿ ಮುಗಿಸುವುದು ತುಳಿತಕ್ಕೊಳಗಾದ ಎಲ್ಲಾ ಜನಗಳ ರಕ್ತ, ಬೆವರುಗಳ ಸಾಕಾರ ರೂಪವಾಗಿರುವ ಉರಿಚಮ್ಮಾಳಿಗೆಯಿಂದ. ಮೇಲುನೋಟಕ್ಕೆ ಧಾರ್ಮಿಕ ಭ್ರಮೆ ಹುಟ್ಟಿಸಿದರು ಆಂತರ್ಯದಲ್ಲಿ ಧಾರ್ಮಿಕ ಸಂಸ್ಥೆ ಮತ್ತು ಸಿದ್ಧಾಂತಗಳ ಪ್ರಬಲ ಟೀಕೆಯಾಗಿರುವ ಈ ನಾಟಕ ತನ್ನ ರಾಜಕೀಯ ಹಾಗೂ ಸಾಂಸ್ಕೃತಿಕ ಅರ್ಥ ಸಾಧ್ಯತೆಗಳಿಂದ ಇಂದಿನ ಕನ್ನಡಿಯಾಗಿದೆ.
ನಾಟಕ ತಂಡ
ನಾಟಕ - ಮಾದಾರಿ ಮಾದಯ್ಯ
ದಿನಾಂಕ - 4 ಮಾರ್ಚ್ 2019 (ಶಿವರಾತ್ರಿ ದಿನ)
ರಚನೆ - ಹೆಚ್ ಎಸ್ ಶಿವಪ್ರಕಾಶ್
ಸೋಮವಾರ ಸಂಜೆ 7:30ಕ್ಕೆ
ನಿರ್ದೇಶನ - ಸಂಪತ್ ಕುಮಾರ್
ಸ್ಥಳ : ಕೆ ಹೆಚ್ ಕಲಾಸೌಧ, ಹನುಮಂತನಗರ
ನಿರ್ವಹಣೆ - ನಂದೀಶ್ ದೇವ್
ಬೆಳಕು - ಮಂಜು ನಾರಾಯಣ್ ಟಿಕೆಟ್ ದರ - 150/-
ಪ್ರಸಾದನ - ಮೋಹನ್ ಕುಮಾರ್
ರಂಗ ಸಜ್ಜಿಕೆ - ಶ್ರೀಧರ ಮೂರ್ತಿ
ರಂಗ ಪರಿಕರ - ಪ್ರಶಾಂತ್ ಹೆಬ್ಬಸೂರು
ಸಂಗೀತ - ಚಂದ್ರಶೇಖರ ಆಚಾರ್

17 ವರ್ಷಗಳಿಂದ ಸಕ್ರಿಯರಾಗಿರುವ ಸಂಪತ್ ಕುಮಾರ್
ಈ ನಾಟಕವನ್ನು ಕನ್ನಡ ರಂಗಭೂಮಿಯಲ್ಲಿ ಕಳೆದ 17 ವರ್ಷಗಳಿಂದ ಸಕ್ರಿಯರಾಗಿರುವ ಸಂಪತ್ ಕುಮಾರ್ ರವರು ನಮ್ಮ ತಂಡಕ್ಕೆ ನಿರ್ದೇಶನವನ್ನು ಮಾಡಿದ್ದಾರೆ. ಅಭಿನಯ ತರಂಗದ ವಿದ್ಯಾರ್ಥಿಯಾಗಿದ್ದ ಇವರು ಪ್ರಸ್ತುತ ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಕಿರಗೂರಿನ ಗಯ್ಯಾಳಿಗಳು, ಪಟಾಕಿ, ಕೆ ಜಿ ಎಫ್ ಮತ್ತು ಇನ್ನೂ ಅನೇಕ ಕನ್ನಡ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಅಶ್ವಘೋಷ ಥಿಯೇಟರ್ ಟ್ರಸ್ಟ್
ಅಶ್ವಘೋಷ ಥಿಯೇಟರ್ ಟ್ರಸ್ಟ್ 12 ಜನವರಿ 2018ರಂದು ನೊಂದಾಯಿಸಿ ಮಾರ್ಚ್ 11ರಂದು ಕಾರ್ಯಾರಂಭ ಮಾಡಲು ಅಡಿ ಇಟ್ಟಿತು.
ಒಂದು ವರ್ಷದಲ್ಲಿ ಬೀದಿ ಬಿಂಬ ರಂಗದ ತುಂಬ, ಪುರಹರ, ನನ್ನ ಕಥೆ, ಮತ್ತು ಈಗ ಮಾದರಿ ಮಾದಯ್ಯ ನಾಟಕಗಳನ್ನು ಪ್ರಸ್ತುತ ಪಡಿಸಿದೆ. ಪುರಹರ ನಾಟಕಕ್ಕೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 5 ವಿಭಾಗಗಳಲ್ಲಿ ಪ್ರಶಸ್ತಿ ಲಭಿಸಿದ್ದು. ಬೀದಿ ಬಿಂಬ ರಂಗದ ತುಂಬಾ ಮತ್ತು ನನ್ನ ಕಥೆ (ಏಕವ್ಯಕ್ತಿ ಪ್ರದರ್ಶನ) ನಾಟಕಗಳು ಪ್ರಯೋಗಾತ್ಮಕ ಮತ್ತು ಸಮಾಜದ ಕನ್ನಡಿಗಳಾಗಿವೆ. ಅಷ್ಟೆ ಅಲ್ಲದೆ ಇತರ ಅತ್ಯುತ್ತಮ ನಾಟಕಗಳನ್ನು ಆಹ್ವಾನಿಸಿ ಆ ತಂಡಗಳಿಗೂ ಬೆಂಗಳೂರಿನಲ್ಲಿ ನಾಟಕ ಮಾಡಲು ಪ್ರೋತ್ಸಾಹ ನೀಡುತ್ತಾ ಬಂದಿದೆ. ಅದರಲ್ಲಿ ಹಾವೇರಿಯ 'ವಾಲಿ ವಧೆ', ನೀನಾಸಂನ 'ಕುರುಕ್ಷೇತ್ರ' ಮತ್ತು ಮನೋರಂಗದ 'ಕರ್ಣ ರಸಾಯನ' ನಾಟಕಗಳು ಸೇರಿವೆ.
ಕನ್ನಡ ಪರವಾಗಿ ಏನಿವಾಗ', ಪಾರ್ಶ್ವವಾಯು ಮತ್ತು ಮೂರ್ಛೆ ರೋಗದ ಅರಿವು ಮೂಡಿಸುವ ಹಲವು ಬೀದಿನಾಟಕ ಪ್ರದರ್ಶನಗಳನ್ನು ತಂಡ ಪ್ರದರ್ಶಿಸಿದೆ
-
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications