ಗಣರಾಜ್ಯೋತ್ಸವದಂದು ಎಂ.ಕೃಷ್ಣಪ್ಪ, ಪ್ರಿಯಾಕೃಷ್ಣರಿಂದ ಹೆಲ್ಮೆಟ್ ವಿತರಣೆ
ಬೆಂಗಳೂರು, ಜನವರಿ 24: ಈ ಬಾರಿಯ ಗಣರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲು ವಸತಿ ಸಚಿವ ಹಾಗೂ ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಮತ್ತು ಅವರ ಪುತ್ರ, ಗೋವಿಂದರಾಜನಗರ ಶಾಸಕ ಪ್ರಿಯಾಕೃಷ್ಣ ನಿರ್ಧರಿಸಿದ್ದಾರೆ.
ವಿಜಯನಗರದಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಐಎಸ್ಐ ಮಾರ್ಕಿನ ಹೆಲ್ಮೆಟ್ ಗಳನ್ನು ಉಭಯ ನಾಯಕರು ಉಚಿತವಾಗಿ ಹಂಚಲಿದ್ದಾರೆ.
ಇತ್ತೀಚೆಗೆ ಟ್ರಾಫಿಕ್ ಪೊಲೀಸರು ಐಎಸ್ಐ ಮಾರ್ಕಿನ ಹೆಲ್ಮೆಟ್ ಗಳ ಬೇಟೆ ಆರಂಭಿಸಿದ್ದಾರೆ. ಐಎಸ್ಐ ಮಾರ್ಕ್ ಇಲ್ಲದ, ಅರ್ಧ ತಲೆ ಮುಚ್ಚುವ ಹೆಲ್ಮೆಟ್ ಧರಿಸಿದವರಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಪೊಲೀಸರ ದಂಡದಿಂದ ಹಲವು ಪ್ರಯಾಣಿಕರು ಪರದಾಡುವಂತಾಗಿದೆ.

ಇದೇ ಸಂದರ್ಭದಲ್ಲಿ ಎಂ.ಕೃಷ್ಣಪ್ಪ ಮತ್ತು ಪ್ರಿಯಾಕೃಷ್ಣ ಉಚಿತ ಹೆಲ್ಮೆಟ್ ವಿತರಣೆಗೆ ಮುಂದಾಗಿದ್ದಾರೆ. ಈ ಮೂಲಕ ಜನರ ತಲೆ ರಕ್ಷಿಸುವ ಜತೆಗೆ, ಪೊಲೀಸರ ದಂಡದಿಂದ ತಪ್ಪಿಸಿಕೊಳ್ಳಲು ನೆರವಾಗುವ ಕ್ರಮಕ್ಕೆ ಮುಂದಾಗಿದ್ದಾರೆ.












Click it and Unblock the Notifications