ಆರ್ಟಿಒ ಅಧಿಕಾರಿಗಳಿಗೆ ಶಾಕ್: ಬೆಂಗಳೂರಿನ ಹಲವು ಆರ್ಟಿಒ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
ಬೆಂಗಳೂರು, ಸೆ.13: ನಗರದ ಎಲ್ಲಾ ಆರ್ ಟಿಒ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಿಢೀರ್ ದಾಳಿ ನಡೆಸುವ ಮೂಲಕ ಆರ್ ಟಿಒ ಅಧಿಕಾರಿಗಳಿಗೆ ಲೋಕಾಯುಕ್ತ ಇಲಾಖೆ ಶಾಕ್ ನೀಡಿದೆ.
ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ ಎನ್ ಫಣೀಂದ್ರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಯಶವಂತಪುರ, ಇಂದಿರಾನಗರ, ಜಯನಗರ, ಜ್ಞಾನಭಾರತಿ ಆರ್ ಟಿಒ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಲಾಗಿದೆ.

ಆರ್ ಟಿಓ ಕಚೇರಿಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ ಎಂದು ವದಿಯಾಗಿದೆ.ಆರ್ ಟಿಓ ಕಚೇರಿಗಳಲ್ಲಿ ಅವ್ಯಹಾರ ಹೆಚ್ಚಾಗಿದೆ ಎಂದು ಸಾರ್ವನಿಕರಿಂದ ದೂರುಗಳು ಬಂದ ನಂತರ ಏಕಕಾಲದಲ್ಲಿ ದಾಳಿ ಮಾಡಲಾಗಿದೆ. ಜತನಗರದ ಆರ್ ಟಿಒ ಕಚೇರಿಗೆ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದರು.
ದೇವನಹಳ್ಳಿ ಆರ್ ಟಿಒ ಕಚೇರಿ ಮೇಲೆ ಕೂಡ ದಾಳಿ ನಡೆಸಲಾಗಿದೆ. ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ ಪವನ್ ನಜೀರ್ ನೇತೃತ್ವದ ತಂಡದ ಆರ್ಟಿಒ ಶ್ರೀನಿವಾಸ್ ಹಾಗೂ ಅಧಿಕಾರಿಗಳನ್ನು ಕೂರಿಸಿಕೊಂಡು ದಾಖಲೆಗಳನ್ನು ಪರೀಶಲನೆ ಮಾಡಿದರು.
ಕೆಆರ್ಪುರ ಮತ್ತು ಇಂದಿರಾನಗರ ಆರ್ಟಿಒ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಲಂಚ, ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ಕಾರಣ, ಲೋಕಾಯುಕ್ತ ನ್ಯಾಯಮೂರ್ತಿ ಸುದೇಶ್ ರಾಜು ಪರದೇಶಿ, ಡಿವೈಎಸ್ಪಿ ಗೋಪಾಲ್ ಜೋಗಿನಿ ನೇತೃತ್ವದಲ್ಲಿ ದಾಳಿ ಮಾಡಿದರು.
13 ಕಡೆ ದಾಳಿ, ಪರಿಶೀಲನೆ
ಲೋಕಾಯುಕ್ತ ದಾಳಿ ಬಗ್ಗೆ ಮಾಹಿತಿ ನೀಡಿರುವ ಲೋಕಾಯುಕ್ತ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೋರ್, ಬೆಂಗಳೂರು ನಗರದಲ್ಲಿ 13 ಕಡೆಗಳಲ್ಲಿ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದೆ ಎಂದು ಹೇಳಿದರು. ದೂರು ಬಂದ ಹಿನ್ನಲೆಯಲ್ಲಿ ದಾಳಿ ಮಾಡಿದ್ದು, ನಾಳೆ (ಗುರುವಾರ) ಮಾಹಿತಿಗಳನ್ನು ಬಹಿರಂಗಪಡಿಸುವುದಾಗಿ ಹೇಳಿದರು.












Click it and Unblock the Notifications