ಸಿಟಿ ರವಿಯಿಂದ "ಮೋದಿ ಮತ್ತೊಮ್ಮೆ" ವಿಡಿಯೋ ಸಾಂಗ್ ಬಿಡುಗಡೆ
ಬೆಂಗಳೂರು, ಅಕ್ಟೋಬರ್ 21: ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಹುದ್ದೆಗೇರಿದ್ದು ಯಾವುದೇ ಅದೃಷ್ಟದ ಪರಿಣಾಮವಲ್ಲ, ವಂಶಪಾರಂಪರ್ಯವಾಗಿ ಅಲ್ಲ ತಮ್ಮ ಪರಿಶ್ರಮದಿಂದ ಎಂದು ಮಾಜಿ ಸಚಿವ ಸಿ ಟಿ ರವಿ ಅವರು ಹೇಳಿದರು.
ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ರಾಷ್ಟ್ರಧರ್ಮ ಆಯೋಜಿಸಿದ್ದ "ಮೋದಿ ಮತ್ತೊಮ್ಮೆ" ವಿಡಿಯೋ ಹಾಡಿನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು. ಕೇವಲ ಡಿಎನ್‍ಎ ಮಾತ್ರವೇ ಹಲವರನ್ನು ಪ್ರಧಾನಿ ಹುದ್ದೇಗೇರಿಸಿದೆ.
ಕೆಲವರು ಹಣಬಲ, ಜಾತಿ ಬಲ ಹಾಗೂ ತಮ್ಮ ಕುಟುಂಬದ ರಾಜಕೀಯ ಹಿನ್ನಲೆಯ ಪರಿಣಾಮವಾಗಿ ದೇಶದ ಪ್ರಧಾನಿ ಹುದ್ದೇಗೇರುತ್ತಾರೆ. ಆದರೆ, ಜಾತಿ, ಹಣ ಹಾಘೂ ಕುಟುಂಬದ ರಾಜಕೀಯ ಹಿನ್ನಲೆ ಇಲ್ಲದೆ ತಮ್ಮ ಶ್ರಮದಿಂದ ಪ್ರಧಾನಿ ಹುದ್ದೇಗೇರಿದವರು ನರೇಂದ್ರ ಮೋದಿ.
ದೇಶದ ಬಗ್ಗ ಅಪಾರ ಕನಸುಗಳನ್ನು ಹೊಂದಿರುವ ನರೇಂದ್ರ ಮೋದಿ ಯವರ ಸಾಧನೆಗಳನ್ನು ಪ್ರಸ್ತುತ ಪಡಿಸುವ ಇಂತಹ ವಿಡಿಯೋವನ್ನು ರಾಷ್ಟ್ರ ಧರ್ಮ ಸಂಸ್ಥೆಯ ಸಂತೋಷ್ ಕೆಂಚಾಂಬರವರು ಹೊರತಂದಿರುವುದು ಬಹಳ ಸಂತಸದ ವಿಷಯ ಎಂದರು. ಇಂತಹ ಕನಸುಗಳನ್ನು ಹೊಂದಿರುವ ಪ್ರಧಾನಿಯವರು ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

"ಮೋದಿ ಮತ್ತೊಮ್ಮೆ" ವಿಡಿಯೋ ಹಾಡು ಬಿಡುಗಡೆ
ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ರಾಷ್ಟ್ರಧರ್ಮ ಆಯೋಜಿಸಿದ್ದ "ಮೋದಿ ಮತ್ತೊಮ್ಮೆ" ವಿಡಿಯೋ ಹಾಡಿನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ದೇಶ ಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು. ಕೇವಲ ಡಿಎನ್‍ಎ ಮಾತ್ರವೇ ಹಲವರನ್ನು ಪ್ರಧಾನಿ ಹುದ್ದೇಗೇರಿಸಿದೆ. ಕೆಲವರು ಹಣಬಲ, ಜಾತಿ ಬಲ ಹಾಗೂ ತಮ್ಮ ಕುಟುಂಬದ ರಾಜಕೀಯ ಹಿನ್ನಲೆಯ ಪರಿಣಾಮವಾಗಿ ದೇಶದ ಪ್ರಧಾನಿ ಹುದ್ದೇಗೇರುತ್ತಾರೆ ಎಂದು ಸಿಟಿ ರವಿ ಹೇಳಿದರು. ಎಬಿವಿಪಿಯ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದ್ರಿ, ಸಮಾಜ ಸುಧಾರಕರಾದ ಶಕುಂತಲಾ ಅಯ್ಯರ್ ಭಾಗವಹಿಸಿದ್ದರು.

ರಾಷ್ಟ್ರ ಧರ್ಮ ಸಂಘಟನೆಯ ಸಂತೋಷ್ ಕೆಂಚಾಂಬ
ರಾಷ್ಟ್ರ ಧರ್ಮ ಸಂಘಟನೆಯ ಸಂತೋಷ್ ಕೆಂಚಾಂಬರವರು ಮಾತನಾಡಿ, ಸರ್ಜಿಕಲ್ ಸ್ಟ್ರೈಕ್, ಫಸಲ್ ಬಿಮಾ ಯೋಜನೆ, ಮೇಕ್ ಇನ್ ಇಂಡಿಯಾ, ಜನಧನ ಯೋಜನೆ, ಯೂರಿಯಾ ಲೇಪಿತ ರಸಗೊಬ್ಬರ ವಿತರಣೆ ಹೀಗೆ ಹತ್ತು ಹಲವು ಕ್ರಾಂತಿಕಾರಿ ಯೋಜನೆಗಳ ಹರಿಕಾರ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು. ಅವರ ನೇತೃತ್ವದ ಕೇಂದ್ರ ಸರಕಾರ ಕಳೆದ 4 ವರ್ಷಗಳಿಂದ ದೇಶದ ಜನಸಾಮಾನ್ಯರ ಅಭಿವೃದ್ದಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದನ್ನು ಜನಸಾಮಾನ್ಯರಿಗೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಖ್ಯಾತ ರಂಗಕರ್ಮಿ ಪ್ರಕಾಶ್ ಬೆಳವಾಡಿ ಮಾತನಾಡಿ
ಖ್ಯಾತ ರಂಗಕರ್ಮಿ ಪ್ರಕಾಶ್ ಬೆಳವಾಡಿ ಮಾತನಾಡಿ, ದೇಶದ ಅಭಿವೃದ್ದಿಗೆ ಮೋದಿಯವರು ಅಪಾರ ಕೊಡುಗೆಯನ್ನು ನೀಡಿದ್ದಾರೆ. ಮೊದಲಿನಿಂದಲೂ ನಾನು ಮೋದಿಯವರನ್ನು ಇಷ್ಟಪಡುತ್ತೇನೆ ಎಂದರು. ಸಿದ್ದರಾಮಯ್ಯ ಮತ್ತು ಎಚ್ ಡಿ ದೇವೇಗೌಡ ಅವರು ಒಂದೇ ವೇದಿಕೆ ಹಂಚಿಕೊಂಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು ವ್ಯಂಗ್ಯವಾಡಿದರು. ನೆರೆ ಬಂದಾಗ ಹಾವು ಮುಂಗಸಿಯಂತೆ ಆಗ್ತಾರೆ. ಆದರೆ ಪರಸ್ಪರ ಒಬ್ಬರಿಗೊಬ್ಬರು ನೊಡಿಕೊಳ್ಳಲ್ಲ. ಅವರ ಮನೆಯವರನ್ನೇ ನೋಡಿಕೊಳ್ಳೊಕೆ ಅವರಿಗೆ ಟೈಮಿಲ್ಲ, ಇನ್ನು ರಾಜ್ಯದ ಜನರನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು. ಮೊದಿಯವರು ಘನತೆಯನ್ನು ಕಾಪಾಡುವ ಕರ್ತವ್ಯ ಬಿಜೆಪಿ ಕಾರ್ಯಕರ್ತರಿಗೆ ಇದೆ. ಅವರ ಕಾರ್ಯಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವ ಅಗತ್ಯ ವಿದೆ ಎಂದರು.

ಚೇತನ್ ಮಂಜುನಾಥ್ ನಿರ್ದೇಶನ
ಮೋದಿ ಮತ್ತೊಮ್ಮೆ ಹಾಡನ್ನು ಚೇತನ್ ಮಂಜುನಾಥ್ ನಿರ್ದೇಶಿಸಿದ್ದು, ವಾಗೀಶ್ ಚನ್ನಗಿರಿ ಅವರ ಸಾಹಿತ್ಯವಿದೆ. ದೇಸಿ ಮೋಹನ್ ಮತ್ತು ಪಂಚಮ್ ಜೀವ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಶೋಕ್ ನಾಡಿಗ್ ನೇತೃತ್ವದಲ್ಲಿ ಛಾಯಾಗ್ರಹಣ ಹಾಗೂ ಸಂಕಲನ ನಡೆದಿದೆ. ಈ ಹಾಡನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪಿಸಬೇಕೆಂಬುದು ತಂಡದ ಉದ್ದೇಶವಾಗಿದೆ.












Click it and Unblock the Notifications