ದಾವಣಗೆರೆ ವೀರಶೈವ ಮಹಾಸಭಾಕ್ಕೆ ಲಿಂಗಾಯತ ನಾಯಕ ಎಂಬಿ ಪಾಟೀಲ್ ಗೈರಾಗಿದ್ದೇಕೆ?
ಬೆಂಗಳೂರು, ಡಿಸೆಂಬರ್ 26: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಎರಡು ದಿನಗಳ ಅಖಿಲ ಭಾರತ ವೀರಶೈವ ಮಹಾಸಭಾದ 24ನೇ ಮಹಾ ಅಧಿವೇಶನ ಅದ್ಧೂರಿಯಾಗಿ ನಡೆಯಿತು. ಈ ಅಧಿವೇಶನಕ್ಕೆ ಅನೇಕ ರಾಜಕೀಯ ಗಣ್ಯರು, ಅತಿಥಿಗಳು ಆಗಮಿಸಿದ್ದರು. ಆದರೆ ಕಾಂಗ್ರೆಸ್‌ನ ಲಿಂಗಾಯತ ನಾಯಕ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಗೈರಾಗಿದ್ದರು. ಇದು ಹಲವರ ಕುತೂಹಲಕ್ಕೆ ಕಾರಣವಾಗಿತ್ತು.
ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ನಡೆದ ಲಿಂಗಾಯತ ಅಧಿವೇಶನ ನಡೆಯಿತು. ಈ ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಸ್ವತಃ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಕೆಎಲ್ಇ ಸೊಸೈಟಿ ಅಧ್ಯಕ್ಷರಾದ ಪ್ರಭಾಕರ ಕೋರೆ ಅವರ 50ನೇ ವಿವಾಹ ವಾರ್ಷಿಕೋತ್ಸವ ಮತ್ತು ವಿಜಯಪುರದಲ್ಲಿ ತಮ್ಮ ನೇತೃತ್ವದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್ ಕಾರ್ಯಕ್ರಮಗಳು ಪೂರ್ವ ನಿಗದಿತವಾಗಿದ್ದವು. ಹೀಗಾಗಿ, ದಾವಣಗೆರೆಯಲ್ಲಿ ನಡೆದ ವೀರಶೈವ ಮಹಾಸಭಾದ ಅಧಿವೇಶನದಲ್ಲಿ ಖುದ್ದಾಗಿ ಭಾಗವಹಿಸಲು ಆಗಲಿಲ್ಲ. ಆದರೆ, ಅಧಿವೇಶನಕ್ಕೆ ಸಂದೇಶ ಕಳಿಸಿಕೊಟ್ಟಿದ್ದೆ ಎಂದು ಸಚಿವ ಎಂಬಿ ಪಾಟೀಲ ಮಂಗಳವಾರ ಮಾಹಿತಿ ನೀಡಿದ್ದಾರೆ.
ಮೊದಲೇ ನಿಗದಿ ಆಗಿದ್ದ ಕಾರ್ಯಕ್ರಮಗಳಿವು
ಬೆಂಗಳೂರಿನ ನಿವಾಸದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, 'ಮೇಲಿನ ಎರಡೂ ಕಾರ್ಯಕ್ರಮಗಳು ಬಹಳ ದಿನಗಳ ಮೊದಲೇ ನಿಗದಿ ಆಗಿದ್ದವು. ಇಲ್ಲದಿದ್ದರೆ ನಾನೂ ಅಧಿವೇಶನಕ್ಕೆ ಹೋಗುತ್ತಿದ್ದೆ. ಅಧಿವೇಶನಕ್ಕೆ ನನ್ನನ್ನು ಉದ್ಘಾಟಕನನ್ನಾಗಿ ಆಹ್ವಾನಿಸಲಾಗಿತ್ತು. ಇದರಲ್ಲಿ ಅಸಮಾಧಾನದ ಪ್ರಶ್ನೆಯೇನೂ ಇಲ್ಲ' ಎಂದು ಅವರು ಸ್ಪಷ್ಟಪಡಿಸಿದರು.
ಅಧಿವೇಶನದಲ್ಲಿ ಜಾತಿ ಗಣತಿ ಕುರಿತು ನಿರ್ಣಯ ಅಂಗೀಕರಿಸಲಾಗಿದೆ. ಲಿಂಗಾಯತರಲ್ಲಿ ಇರುವ 60-70 ಒಳಪಂಗಡಗಳೆಲ್ಲವೂ ಒಂದೇ ಸೂರಿನಡಿ ಬರಬೇಕು. ಹೀಗಾದರೆ ಮಾತ್ರ ಲಿಂಗಾಯತ ಸಮುದಾಯಕ್ಕೆ ಮೀಸಲಾತಿಯ ಲಾಭ ಸಿಗುತ್ತದಷ್ಟೆ. ಇದನ್ನು ನಾನು ಮೊದಲಿನಿಂದಲೂ ಹೇಳುತ್ತ ಬಂದಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಹಸಭಾ ಕೈಗೊಂಡ ನೀರ್ಣಯಗಳು
ಈ ವೀರಶೈವ ಮಹಸಭಾ ಅಧಿವೇಶನದಲ್ಲಿ ಒಟ್ಟು ಎಂಟು ನೀರ್ಣಯಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಪ್ರಮುಖವಾದವುಗಳೆಂದರೆ, ''ಎಲ್ಲ ಲಿಂಗಾಯತ ಧರ್ಮ ಕಾಲಂ ನಲ್ಲಿ ವೀರಶೈವ'' ಎಂದು ಬರೆಸಬೇಕು ಎಂಬುದದು ಅಗ್ರ ನೀರ್ಣಯವಾಗಿದೆ.
ಇದರೊಂದಿಗೆ ''ದೇಶದ ಅಖಂಡತೆ, ಸಮಗ್ರತೆಗಾಗಿ ಹಿಂದಿನಂತೆ ಮುಂದೆ ಮಹಾಸಭಾ ಸಂಪೂರ್ಣ ಬೆಂಬಲ ನೀಡಲಿದೆ, ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಬಸವತತ್ವ ಪರಿಹಾರವಾಗಿದ್ದು, ಜಗಜ್ಯೋತಿ ಬಸವೇಶ್ವರ ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರೆಂದು ಸರ್ಕಾರ ಅಧಿಕೃತಗೊಳಿಸಿ ಘೋಷಿಸಬೇಕು. ವೀರಶೈವ ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸಿನ ಮೂಲಕ ಒತ್ತಾಯ ಮಾಡಬೇಕು.ಅದನ್ನು ಕೇಂದ್ರ ಸರ್ಕಾರ ಅದನ್ನು ಅನುಮೋದಿಸುವುದು'' ಸೇರಿದಂತೆ ಒಟ್ಟು ಎಂಟು ನೀರ್ಣಯಗಳನ್ನು ಮಹಾಸಭಾ ಕೈಗೊಂಡಿದೆ.












Click it and Unblock the Notifications