ಸೆ.7ರಂದು ಕುವೆಂಪು : ಒಂದು ಚಿಂತನೆ’ ಕೃತಿ ಲೋಕಾರ್ಪಣೆ

ಬೆಂಗಳೂರು, ಸೆ. 4: ರಾಷ್ಟ್ರಕವಿ ಕುವೆಂಪು ರವರಿಗೆ ಕನ್ನಡದ ಮೊದಲನೇ ಜ್ಞಾನಪೀಠ ಪ್ರಶಸ್ತಿ ದೊರೆತು 50 ವರ್ಷಗಳಾದ ಸವಿನೆನೆಪಿಗೆ ಡಾ. ಸುರೇಶ ಪಾಟೀಲ ಮತ್ತು ಡಾ. ಆರ್. ವಾದಿರಾಜು ಸಂಪಾದಿಸಿರುವ ಕುವೆಂಪು : ಒಂದು ಚಿಂತನೆ' ಕೃತಿ ಲೋಕಾರ್ಪಣೆಗೊಳ್ಳಲಿದೆ.

ಡಾ.ಹೆಚ್.ತುಕಾರಾಂ, ಕಾರ್ಯದರ್ಶಿಗಳು, ಕನ್ಯಾಕುಮಾರಿ ವಿದ್ಯಾಸಂಸ್ಥೆ ರವರು ಲೋಕಾರ್ಪಣೆಗೊಳಿಸುವರು, ಕೃತಿ ಕುರಿತು ಡಾ. ಆರ್. ವಾದಿರಾಜು, ಲೇಖಕರು-ವಿಮರ್ಶಕರು ಮಾತನಾಡುವರು . ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತಿ ಡಾ. ಸುರೇಶ ಪಾಟೀಲ ವಹಿಸುವರು, ಲೇಖಕ ಡಾ. ಗುರುರಾಜ ಪೊಶೆಟ್ಟಿಹಳ್ಳಿ, ಹಾಗೂ ಕೆ.ಕೆ. ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್‍ನ ಶಿವರಾಂ ಉಪಸ್ಥಿತರಿರುವರು , ಶ್ರೀಮತಿ ಶ್ರೀಲಕ್ಷ್ಮೀ ಬಿ. ರಾವ್, ಅಧ್ಯಕ್ಷರು, ಚಿನ್ಮಯಿ ಸಂಗೀತಶಾಲೆ ರವರು ಪ್ರಾಸ್ತಾವಿಕ ನುಡಿಗಳನ್ನಾಡಿಲಿದ್ದಾರೆ ಎಂದು ಅಯೋಜಕರು ತಿಳಿಸಿರುತ್ತಾರೆ.

ಅಯೋಜನೆ : ಚಿನ್ಮಯ ಸಂಗೀತ ಶಾಲೆ, ನಾಗರಬಾವಿ ಮತ್ತು ವಾಸುದೇವ ಚಾರಿಟಬಲ್ ಟ್ರಸ್ಟ್, ಮಲ್ಲತ್ತಹಳ್ಳಿ
ದಿನಾಂಕ : 7-9-2019, ಶನಿವಾರ ಸಂಜೆ : 4:30 ಘಂಟೆಗೆ
ಸ್ಥಳ : ವಾಸುದೇವ ಚಾರಿಟಬಲ್ ಟ್ರಸ್ಟ್, ಕನ್ಯಾಕುಮಾರಿ ವಿದ್ಯಾಸಂಸ್ಥೆ, ಮಲ್ಲತ್ತಹಳ್ಳಿ, ಬೆಂಗಳೂರು - 560056.

Kuvempu: A debate- Kannada book release on Sept 07

ಕುವೆಂಪು : ಒಂದು ಚಿಂತನೆ ಪುಸ್ತಕದ ಬಗ್ಗೆ
ಹೊಸಗನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕುವೆಂಪುರವರು ಶಕ್ತಿ ಸಾಧನೆಗಳು ಅಸಾಧಾರಣ. ಅವರು ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡದ ಪ್ರಕಾರವಿಲ್ಲ ಎನ್ನುವುದು ಬರೀ ಕ್ಲೀಷೆಯಲ್ಲ. ಸಣ್ಣಕತೆ, ಕಾದಂಬರಿ, ಕವಿತೆ, ನಾಟಕ, ವಿಮರ್ಶೆ, ಪ್ರಬಂಧ, ಜೀವನ ಚರಿತ್ರೆ, ಲಿಲಿತ ಪ್ರಬಂಧ, ಆತ್ಮ ಚರಿತ್ರೆ ಈ ಒಂದೊಂದರಲ್ಲೂ ಅವರು ಶ್ರೇಷ್ಠವಾದುದನ್ನು ನೀಡಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು. ಅವರ ಸಾಹಿತ್ಯದ ಬಗ್ಗೆ ಬೇರೆ ಬೇರೆ ಕಾಲಘಟ್ಟ, ವಯೋಮಾನ, ಸ್ವಭಾವ, ಸಂಸ್ಕಾರಗಳ ಸಹೃದಯರು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಮತ್ತೆ ಮತ್ತೆ ಓದಿಸಿಕೊಳ್ಳುವ ಮತ್ತು ವಿಶ್ಲೇಷಣೆಗೆ ಒಳಪಡುವ ಗುಣದ ಅವರ ಸಾಹಿತ್ಯಕ್ಕೆ ಈ ಕಾಲಘಟ್ಟದ ಒಂದು ಚಿಂತನ ಮಂಥನ ಇಲ್ಲಿನ ಲೇಖನಗಳು ಕೃತಿಯ ಪ್ರಧಾನ ಸಂಪಾದಕ ಡಾ. ಸುರೇಶ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+