ಕೆಎಸ್ಆರ್‌ಟಿಸಿಯಿಂದ ಶಬರಿಮಲೆಗೆ ರಾಜಹಂಸ ಬಸ್ ಸೇವೆ
ಬೆಂಗಳೂರು, ನವೆಂಬರ್ 21 : ತೀರ್ಥಕ್ಷೇತ್ರ ಶಬರಿಮಲೆ ಯಾತ್ರೆ ನ.16ರಿಂದ ಆರಂಭಗೊಂಡಿದೆ. ಕೆಎಸ್ಆರ್‌ಟಿಸಿ ಭಕ್ತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಾಜಹಂಸ ಬಸ್ ಸೇವೆಯನ್ನು ಶಬರಿಮಲೆಗೆ ಡಿಸೆಂಬರ್ 12ರಿಂದ ಆರಂಭಿಸಲಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್‌ಟಿಸಿ) ಬೆಂಗಳೂರು ಕೇಂದ್ರೀಯ ವಿಭಾಗ ಈ ಬಸ್ ಸೇವೆಯ ವ್ಯವಸ್ಥೆಯನ್ನು ಮಾಡಿದೆ. ಡಿಸೆಂಬರ್ 12 ರಿಂದ ಬೆಂಗಳೂರು-ಪಂಪಾ ಮಾರ್ಗದಲ್ಲಿ ರಾಜಹಂಸ ಬಸ್ಸುಗಳು ಸಂಚಾರ ನಡೆಸಲಿವೆ. [ಶಬರಿಮಲೆ ಯಾತ್ರೆ ಆರಂಭ]

ವೇಳಾಪಟ್ಟಿ : ಈ ವಿಶೇಷ ಬಸ್ಸುಗಳು ಬೆಂಗಳೂರಿನಿಂದ ಮಧ್ಯಾಹ್ನ 12.30ಕ್ಕೆ ಬಸ್ ಹೊರಡಲಿದ್ದು, ಮರುದಿನ ಬೆಳಗ್ಗೆ 8.45ಕ್ಕೆ ಪಂಪಾ ತಲುಪಲಿದೆ. ಪಂಪಾದಿಂದ ಸಂಜೆ 5ಗಂಟೆಗೆ ಹೊರಡುವ ಬಸ್ ಮರುದಿನ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ವಾಪಸ್ ಆಗಲಿದೆ. ಪ್ರಯಾಣ ದರ ವಯಸ್ಕರಿಗೆ ರೂ.825. [ಚಿತ್ರಗಳಲ್ಲಿː ಶಬರಿಮಲೆಗೆ ಭಕ್ತರ ತಂಡ]
ಈ ಬಸ್ ಸೇವೆಯ ಮುಂಗಡ ಟಿಕೇಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 080-49696666 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. ಟಿಕೆಟ್ ಬುಕ್ ಮಾಡಲು www.ksrtc.in ವೆಬ್ ಸೈಟ್‌ಗೆ ಭೇಟಿ ನೀಡಿಬಹುದಾಗಿದೆ.












Click it and Unblock the Notifications