ಬೆಂ-ಚೆನ್ನೈ- ತಿರುಪತಿ ನಡುವೆ ಸ್ಕ್ಯಾನಿಯಾ ಬಸ್‌

ಬೆಂಗಳೂರು, ಆ.4: ಬೆಂಗಳೂರು-ಚೆನ್ನೈ, ಬೆಂಗಳೂರು- ತಿರುಪತಿ ನಡುವೆ ಕೆಎಸ್‌ಆರ್‌ಟಿಸಿ ವತಿಯಿಂದ ಪರೀಕ್ಷಾರ್ಥವಾಗಿ ಎರಡು ಸ್ಕ್ಯಾನಿಯಾ ಮೆಟ್ರೋಲಿಂಕ್ ಎಚ್‌‌ಡಿ ಬಸ್ ಸೇವೆ ಆ.4 ಸೋಮವಾರದಿಂದ ಆರಂಭವಾಗಿದೆ.

ಈ ಎರಡೂ ಬಸ್‌ಗಳು 3 ತಿಂಗಳ ಕಾಲ ಪರೀಕ್ಷಾರ್ಥವಾಗಿ ಈ ನಗರಗಳಲ್ಲಿ ಸಂಚರಿಸಲಿದೆ.14.5 ಮೀಟರ್ ಮತ್ತು 13.5 ಮೀಟರ್ ಉದ್ದದ ಎರಡು ಬಸ್ ಗಳನ್ನು ಪರೀಕ್ಷಾರ್ಥ ಸೇವೆಗೆ ಸ್ಕ್ಯಾನಿಯಾ ಸಂಸ್ಥೆ ಉಚಿತವಾಗಿ ಕೆಎಸ್‌ಆರ್‌‌ಟಿಸಿಗೆ ನೀಡಿದೆ.[ಲಾಭದಲ್ಲಿ ಓಡುತ್ತಿದೆ ಬಿಎಂಟಿಸಿ, ಕೆಎಸ್‌ಆರ್‌‌ಟಿಸಿ]

scania bus

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೂತನ ಬಸ್ ಸೇವೆಗೆ ಚಾಲನೆ ನೀಡಿದರು. ಬೆಂಗಳೂರು-ತಿರುಪತಿಗೆ ಹಗಲಿನಲ್ಲಿ 450 ರೂ. ರಾತ್ರಿ ವೇಳೆ 500 ರೂ. ಹಾಗೂ ಬೆಂಗಳೂರು -ಚೆನ್ನೈಗೆ ಹಗಲಿನಲ್ಲಿ 600 ರೂ. ರಾತ್ರಿ ಪ್ರಯಾಣಕ್ಕೆ 700ರೂ. ಪ್ರಯಾಣದರ ನಿಗದಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಪರೀಕ್ಷಾರ್ಥ ಬಸ್ ಸೇವೆಯನ್ನು ತಮ್ಮ ಸಂಸ್ಥೆಯ ತಾಂತ್ರಿಕ ಸಿಬ್ಬಂದಿ ಪರಿಶೀಲಿಸಲಿದ್ದು, ಪ್ರಯಾಣಿಕರಿಗೆ ಹಾಗೂ ಸಂಸ್ಥೆಗೆ ಹೊರೆಯಾಗದೆ ಅನುಕೂಲವಾದರೆ ಈ ಬಸ್‌ಗಳನ್ನು ಖರೀದಿಸಲಾಗುವುದು ಎಂದರು.[ಖಾಸಗಿ ತಾಣಗಳಲ್ಲಿ ಕೆಎಸ್‌ಆರ್‌ಟಿಸಿ ಬುಕ್ಕಿಂಗ್‌ ಇಲ್ಲ]

ವೋಲ್ವೋಗಿಂತ 5 ಲಕ್ಷ ರೂ. ಕಡಿಮೆ ವೆಚ್ಚದ ಬಸ್ಸಿನಲ್ಲಿ ಶೇ. 10ರಷ್ಟು ಇಂಧನ ಉಳಿತಾಯವಾಗಲಿದೆ . 60 ಬಸ್‌ಗಳಿಗೆ ಕೆಎಸ್‌ಆರ್‌‌ಟಿಸಿ ಟೆಂಡರ್ ನೀಡಿದ್ದು, ಈ ಸೇವೆ ಯಶಸ್ವಿಯಾಗದಿದ್ದರೆ ಟೆಂಡರ್ ರದ್ದುಗೊಳಿಸಲಾಗುತ್ತದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಬಸ್‌ನ ವಿಶೇಷವೇನು? ಈ ಬಸ್‌‌ಗಳಲ್ಲಿ ಸ್ವಯಂಚಾಲಿತ ಗೇರು, ತುರ್ತು ನಿರ್ಗಮನ ದ್ವಾರದ ಜೊತೆಗೆ ಪ್ರತಿ ಕಿಟಕಿಯನ್ನು ತುರ್ತು ನಿರ್ಗಮನಕ್ಕೆ ವ್ಯವಸ್ಥೆ ಮಾಡಲಾಗಿದೆ. 13.5 ಮೀಟರ್ ಉದ್ದದ ಬಸ್‌ನಲ್ಲಿ 47 ಆಸನವಿದ್ದರೆ, 14.5 ಮೀಟರ್ ಉದ್ದದ ಬಸ್‌ನಲ್ಲಿ 51 ಆಸನಗಳಿವೆ. ಬಸ್‌ಗಳಲ್ಲಿ ಮಡಚುವ ವ್ಯವಸ್ಥೆಯ 3 ಎಲ್‌ಸಿಡಿ ಪರದೆ ಅಳವಡಿಸಲಾಗಿದೆ. ಅಗ್ನಿಶಾಮಕ ವ್ಯವಸ್ಥೆ ಸಹ ಜೊತೆಗೆ ಅತ್ಯುತ್ತಮ ಸುರಕ್ಷಾ ವಿಧಾನವನ್ನು ಹೊಂದಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+