#BJPKidnapsMLAs ಫುಲ್ ಟ್ರೆಂಡಿಂಗ್, ಡಿಕೆಶಿ ಮಿಂಚಿಂಗೋ ಮಿಂಚಿಂಗ್
Recommended Video
ಕರ್ನಾಟಕದಲ್ಲಿ ಆಡಳಿತಾರೂಢ ಕೈ ತೆನೆ ಸರ್ಕಾರ ಸಚಿವರು, ಶಾಸಕರು ಸರಣಿ ರಾಜೀನಾಮೆಯಿಂದಾಗಿ ಉಂಟಾಗಿರುವ ಅಸ್ಥಿರತೆಯ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಕಿಚ್ಚು ಹೆಚ್ಚಾಗಿದೆ.
ಸರ್ಕಾರ ರಚನೆ ಬಗ್ಗೆ ಬಿಜೆಪಿ ತಲೆಕೆಡಿಸಿಕೊಂಡಿರುವ ವೇಳೆಯಲ್ಲಿ ಮುಂಬೈಗೆ ತೆರಳಿ ಅತೃಪ್ತರ ಮನ ಓಲೈಕೆಗೆ ಯತ್ನಿಸಿದ ಸಚಿವ ಡಿಕೆ ಶಿವಕುಮಾರ್ ರನ್ನು ಹಾಡಿ ಹೊಗಳಿರುವ ಟ್ವೀಟ್ ಗಳು ಕಂಡು ಬಂದಿವೆ. ಜೊತೆಗೆ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಕಿಡ್ನಾಪ್ ಮಾಡಿ ಬಂಧನದಲ್ಲಿರಿಸಿದೆ ಎಂಬ ಆರೋಪಿಸಿ #BJPKidnapsMLAs ಹ್ಯಾಶ್ ಟ್ಯಾಗ್ ನೊಂದಿಗೆ ಟ್ರೆಂಡ್ ಶುರು ಮಾಡಲಾಗಿದೆ.
ಅತೃಪ್ತರ ಸಂಖ್ಯೆ ಒಂದೇ ದಿನದಲ್ಲಿ 13ರಿಂದ 18ಕ್ಕೇರಿದೆ. ಮುಂಬೈನಲ್ಲಿ ಹೈ ಡ್ರಾಮಾ ನಡೆದು ಡಿಕೆ ಶಿವಕುಮಾರ್ ಅವರು ಸದ್ಯ ಮುಂಬೈ ಪೊಲೀಸರ ವಶದಲ್ಲಿದ್ದು, ರಾತ್ರಿ 7.30 ವೇಳೆಗೆ ಸುದ್ದಿಗೋಷ್ಠಿ ನಡೆಸುತ್ತೇನೆ ಎಂದಿದ್ದಾರೆ.
ಇತ್ತ ಕರ್ನಾಟಕದ ಗಾಂಧಿ ಪ್ರತಿಮೆ, ರಾಜಭವನ ಸುತ್ತಾ ಮುತ್ತಾ ಒಂದು ಸುತ್ತಿನ ಪರ ವಿರೋಧ ಪ್ರತಿಭಟನೆ ನಡೆಸಿ ಮನೆಗೆ ತೆರಳಲು ಸಿದ್ಧವಾಗಿದ್ದ ಕಾಂಗ್ರೆಸ್, ಬಿಜೆಪಿ ನಾಯಕರ ದಂಡು ನೇರವಾಗಿ ಸ್ಪೀಕರ್ ಕಚೇರಿಯತ್ತ ದೌಡಾಯಿಸಿದ್ದಾರೆ.

ಸುಧಾಕರ್ ಬಂಧನದಲ್ಲಿಟ್ಟ ನಾಯಕರು
ರಾಜೀನಾಮೆ ನೀಡಿ ಬಂದ ಶಾಸಕ ಸುಧಾಕರ್ ಅವರನ್ನು ಕಾಂಗ್ರೆಸ್ ನಾಯಕರು ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದು, ಸಂಧಾನ ನಡೆಸಲು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಎಂಟ್ರಿಯಾಗಿದ್ದು, ಕೊಠಡಿ ಹೊರಗಡೆ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರ ಪ್ರತಿಭಟನೆ ನಡುವೆ ಅಲೋಕ್ ಕುಮಾರ್ ನೇತೃತ್ವದ ಪೊಲೀಸ್ ಪಡೆ ಪ್ರವೇಶ ಪಡೆದುಕೊಂಡಿದೆ. ಇದೆಲ್ಲ ನಾಟಕ, ಬಿಜೆಪಿ ವಿರುದ್ಧ ಶಾಸಕರನ್ನು ಕಿಡ್ನಾಪ್ ಮಾಡಿರುವ ಆರೋಪದ ಬಗ್ಗೆ ಟ್ವೀಟ್ ಮುಂದಿದೆ.
|
ಪ್ರಜಾಪ್ರಭುತ್ವದ ಕಗ್ಗೊಲೆ ಎಂದ ಕಾಂಗ್ರೆಸ್
ಕುದುರೆ ವ್ಯಾಪಾರ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಬಿಜೆಪಿಯು ಆಪರೇಷನ್ ಕಮಲದ ಮೂಲಕ ಶಾಸಕರನ್ನು ಅಪಹರಿಸಿ ಸಂವಿಧಾನ ವಿರೋಧಿಯಾಗಿ ವರ್ತಿಸುತ್ತಿರುವ ಬಿಜೆಪಿ ವಿರುದ್ಧ ಬೃಹತ್ ಪ್ರತಿಭಟನೆ
|
ಕನ್ನಡಿಗನ ರಕ್ತ ಕುದಿಯುತ್ತಿದೆ ಎಂದು ಟ್ವೀಟ್
ಶಾಂತಿಯುತವಾಗಿ ಕುಳಿತ ಕನ್ನಡಿಗ ಸಚಿವರಾದ ಡಿಕೆ ಶಿವಕುಮಾರ್, ಜಿಟಿ ದೇವೇಗೌಡ, ಶಾಸಕರಾದ ಶಿವಲಿಂಗೇಗೌಡ, ಬಾಲಕೃಷ್ಣ ಅವರನ್ನು ಬಂಧಿಸಿರುವ ದೇವೇಂದ್ರ ಫಡ್ನವೀಸ್, ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಖಂಡಿಸುತ್ತೇವೆ. ಹುಷಾರ್! ನಿಮ್ಮ ಸರ್ವಾಧಿಕಾರಿ ಧೋರಣೆಯನ್ನು ಕರ್ನಾಟಕ ನೋಡುತ್ತಿದೆ. ಕನ್ನಡಿಗನ ರಕ್ತ ಕುದಿಯುತ್ತಿದೆ ಎಂದು ಟ್ವೀಟ್ ಮಾಡಿದ ಜೆಡಿಎಸ್
|
ಎಐಸಿಸಿ ಮಾಧ್ಯಮ ವಕ್ತಾರೆಯಿಂದ ಟ್ವೀಟ್
ಎಐಸಿಸಿ ಮಾಧ್ಯಮ ವಕ್ತಾರೆಯಿಂದ ಟ್ವೀಟ್, ಪ್ರಜಾಪ್ರಭುತ್ವದ ಕಗ್ಗೊಲೆ, ಕುದುರೆ ವ್ಯಾಪಾರ ಮಾಡುತ್ತಿರುವ ಬಿಜೆಪಿ ನೂರಾರು ಕೋಟಿ ರು ನೀಡಿ ಶಾಸಕರನ್ನು ಖರೀದಿಸಿದೆ. ಹಾಡ ಹಾಗಲೇ ಕಪ್ಪು ಹಣದ ಬಳಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
|
ಏನಿದು ಕುದುರೆ ವ್ಯಾಪಾರ
ಏನಿದು ಕುದುರೆ ವ್ಯಾಪಾರ? ಹೇಗೆ ನಡೆಯಬಹುದು ಶಾಸಕರ ಖರೀದಿ, ಇಲ್ಲೊಂದು ಫನ್ನಿ ವಿಡಿಯೋ.
|
ವ್ಯವಸ್ಥಿತವಾಗಿ ಹರಡಿದೆ ಬಿಜೆಪಿ ಮಾಫಿಯಾ
ವ್ಯವಸ್ಥಿತವಾಗಿ ಹರಡಿದೆ ಬಿಜೆಪಿ ಮಾಫಿಯಾ, ಶಾಸಕರಿಗೆ ದುಡ್ಡು ಕೊಟ್ಟು ಖರೀದಿಸಿ, ಅವರ ಸ್ವಾತಂತ್ರ್ಯ ಕಸಿದುಕೊಂಡಿದ್ದಾರೆ. ಅಮಿತ್ ಶಾ ಹಾಗೂ ಯಡಿಯೂರಪ್ಪ ಅವರು ರಾಜಕೀಯವನ್ನು ಮಾಫಿಯಾ ಮಾಡಿ ಬಿಟ್ಟಿದ್ದಾರೆ.
|
ಮರಾಠಿಗರ ಮುಂದೆ ಹೀರೋ ಆದ ಡಿಕೆಶಿ
ಮರಾಠಿಗರ ಮುಂದೆ ಹೀರೋ ಆದ ಡಿಕೆ ಶಿವಕುಮಾರ್, ಮಹಾರಾಷ್ಟ್ರ ಕಾಂಗ್ರೆಸ್ ಯುವ ಘಟಕದಿಂದ ಡಿಕೆ ಶಿವಕುಮಾರ್ ಹೊಗಳಿ, ಪ್ರಜಾಪ್ರಭುತ್ವದ ಕಗ್ಗೊಲೆ, ಪೊಲೀಸ್ ಪಡೆ ದುರ್ಬಳಕೆ ಎಂದು ದೂಷಿಸಿ ಸರಣಿ ಟ್ವೀಟ್ಸ್.












Click it and Unblock the Notifications