Get Updates
Get notified of breaking news, exclusive insights, and must-see stories!

ರೇಸ್ ಕೋರ್ಸ್ ನಲ್ಲಿ ನಾಳೆ ಪ್ರತಿಷ್ಠಿತ ಕಿಂಗ್ ಫಿಶರ್ ಡರ್ಬಿ

ಜುಲೈ 15ರಂದು ಬೆಂಗಳೂರಿನ ಟರ್ಫ್ ಕ್ಲಬ್ ನ ರೇಸ್ ಕೋರ್ಸ್ ನಲ್ಲಿ ಕಿಂಗ್ ಫಿಶರ್ ಡರ್ಬಿ ನಡೆಯಲಿದೆ. ಈ ಬಾರಿ ರೇಸ್ ಗೆಲ್ಲುವ ಕುದುರೆಯ ಬಹುಮಾನ ಮೊತ್ತ 1 ಕೋಟಿ 31 ಲಕ್ಷ ರು. ಆಗಿದೆ. ಶುಕ್ರವಾರ ನಗರದಲ್ಲಿ ನಡೆದ ಸಮಾರಂಭದಲ್ಲಿ ಕುದುರೆಗಳ ಡ್ರಾ ನಡ

ಬೆಂಗಳೂರು, ಜುಲೈ 14: ಪ್ರತಿಷ್ಠಿತ ಕಿಂಗ್ ಫಿಶರ್ ಡರ್ಬಿ ರೇಸ್ ಈ ಬಾರಿ ಜುಲೈ 16ರಂದು ನಡೆಯಲಿದೆ. ನಗರದ ಜೆ.ಡಬ್ಲ್ಯೂ ಮ್ಯಾರಿಯಟ್ ಹೋಟೆಲ್ ನಲ್ಲಿ ಶುಕ್ರವಾರ (ಜುಲೈ 14) ಸಂಜೆ ರೇಸ್ ನ ಆಯ್ಕೆಗಳನ್ನು ಡ್ರಾ ಮೂಲಕ ನಡೆಸಲಾಯಿತು.

ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗುಲ್ ಪನಾಗ್, ಈ ಬಾರಿಯ ರೇಸ್ ವಿಜೇತರಿಗೆ ವಿತರಿಸಲಾಗುವ ಟ್ರೋಫಿ ಅನಾವರಣಗೊಳಿಸಿದರು.

King Fisher Derby on July 15 at Bengaluru race course

ಉದ್ಯಮಿ ವಿಜಯ್ ಮಲ್ಯ ಒಡೆತನ ಎರಡು ಕುದುರೆಗಳು ಈ ಬಾರಿಯ ರೇಸ್ ನಲ್ಲಿ ಪಾಲ್ಗೊಳ್ಳುತ್ತಿವೆ. ಸದ್ಯದ ಮಟ್ಟಿಗೆ ಬಹುಮಾನಗಳ ಒಟ್ಟು ಮೊತ್ತ 2 ಕೋಟಿ 67 ಲಕ್ಷ ರು.ಗಳ ಬಹುಮಾನ ಘೋಷಿಸಲಾಗಿದೆ. ಆದರೆ, ಪ್ರಾಯೋಜಕರು ಬಹುಮಾನ ಮೊತ್ತ ಹೆಚ್ಚಳಕ್ಕೆ ಹೆಚ್ಚೆಚ್ಚು ಆಸಕ್ತಿ ವಹಿಸುತ್ತಿರುವುದರಿಂದ ಬಹುಮಾನ ಮೊತ್ತ ಹೆಚ್ಚಾಗುವ ಸಾಧ್ಯತೆಗಳಿವೆ.

ವಿಜೇತ ಕುದುರೆ ಮಾಲೀಕರಿಗೆ 3 ಲಕ್ಷ ರು. ಮೌಲ್ಯದ ಟ್ರೋಫಿ, 1 ಕೋಟಿ 31 ಲಕ್ಷ ರು. ನಗದು ನೀಡಲಾಗುವುದು. ಅಂದಹಾಗೆ, ಈ ಬಾರಿಯ ರೇಸ್ ನಲ್ಲಿ 8ನೇ ಸ್ಥಾನದಿಂದ ರೇಸ್ ಗೆ ಧುಮುಕಲಿರುವ ಹೋಪ್ ಈಸ್ ಇಟರ್ನಲ್ ಕುದುರೆಯು ರೇಸ್ ಗೆಲ್ಲುವ ಸಾಧ್ಯತೆಯಿದೆ ಎಂದು 'ದ ಬೆಂಗಳೂರು ಟರ್ಫ್ ಕ್ಲಬ್' ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಂದರ್ಭದಲ್ಲಿ ಯುನೈಟೆಡ್ ಬ್ರೂವರೀಸ್ ಸಂಸ್ಥೆಯ ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ಸಮರ್ ಸಿಂಗ್ ಶೇಖಾವತ್, ಬೆಂಗಳೂರು ಟರ್ಫ್ ಕ್ಲಬ್ ನ ಅಧ್ಯಕ್ಷ ವೈ. ಜಗನ್ನಾಥ್ ಹಾಜರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+