ಕಿಮ್ಸ್ ಸಿಬ್ಬಂದಿ ಧರಣಿಗೆ ಮಣಿಯದ ಅಪ್ಪಾಜಿ ಗೌಡ

ಬೆಂಗಳೂರು, ಸೆಪ್ಟೆಂಬರ್. 29: ಒಂದೆಡೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದ(ಕಿಮ್ಸ್‌) ವೈದ್ಯರು ಸ್ಟಾಫ್ ನರ್ಸ್‌ ಮತ್ತು ಕಂಪ್ಯೂಟರ್‌ ಆಪರೇಟರ್‌ಗಳ ಪ್ರತಿಭಟನೆ, ಉಪವಾಸ ಸತ್ಯಾಗ್ರಹ. ಇನ್ನೊಂದೆಡೆ ಸಂಸ್ಥೆ ನಷ್ಟದಲ್ಲಿದೆ, ವೇತನ ಹೆಚ್ಚಳ ಮಾಡಿದ್ದರೂ ಪ್ರತಿಭಟನೆ ಸರಿಯಲ್ಲ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದೆ ಸಮಸ್ಯೆಯಾಗಿದೆ ಎಂದು ಕಿಮ್ಸ್ ಅಧ್ಯಕ್ಷ ಅಪ್ಪಾಜಿ ಗೌಡ ಸುದ್ದಿಗೋಷ್ಠಿಯಲ್ಲಿ ಹೇಳಿಕೆ.

11 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಸಿಬ್ಬಂದಿ ಸೋಮವಾರದಿಂದ ಆಸ್ಪತ್ರೆ ಎದುರು ಅಹೋರಾತ್ರಿ ಉಪವಾಸ ಧರಣಿ ಕುಳಿತಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಯಲಿದೆ. ವೈದ್ಯರು ನಮ್ಮ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದ್ದಾರೆ.[ಬೆಂಗಳೂರಿನ ಕಿಮ್ಸ್ ಸಿಬ್ಬಂದಿ ಧರಣಿ, ರೋಗಿಗಳ ಪರದಾಟ]

KIMS workers protest continuous

ಸಿಬ್ಬಂದಿ ಆರೋಪ ಮತ್ತು ಬೇಡಿಕೆಯೇನು?

* ಬದಲಾದ ಆಡಳಿತ ಮಂಡಳಿ ನಮ್ಮ ಹಕ್ಕುಗಳನ್ನು ಕಸಿದುಕೊಂಡಿದೆ>
* ನಾಲ್ಕೈದು ವರ್ಷಗಳಿಂದ ಸ್ಟಾಫ್ ನರ್ಸ್‌ ಹಾಗೂ ಕಂಪ್ಯೂಟರ್‌ ಆಪರೇಟರ್‌ ಗಳಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು 130 ಮಂದಿಯನ್ನುಕಾಯಂಗೊಳಿಸಬೇಕು.
* 2011ರಲ್ಲಿ ಒಂದು ವರ್ಷ ತರಬೇತಿ ಸೇರಿದಂತೆ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಎಲ್ಲಾ 28 ಶುಶ್ರೂಷಕಿಯರನ್ನು ಅಂದಿನ ಆಡಳಿತ ಮಂಡಳಿ ಕಾಯಂಗೊಳಿಸಿದೆ. ಆದರೆ ಈ ಆಡಳಿತ ಮಂಡಳಿ ನಮ್ಮನ್ನು ಕಾಯಂ ಮಾಡುತ್ತಿಲ್ಲ.
* ಆಡಳಿತ ಮಂಡಳಿ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದೆ.
* ಇಲ್ಲಿಯವರೆಗೂ ನಮ್ಮ ಸಮಸ್ಯೆ ಆಲಿಸಲು ಇಲ್ಲಿವರೆಗೆ ಯಾರೂ ಭೇಟಿ ನೀಡಿಲ್ಲ
* ಬೇರೆಡೆಗೆ ತೆರಳಿ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿ ಇದೆ.
* ವಯೋಮಿತಿಯ ಸಮಸ್ಯೆಯೂ ಅಡ್ಡಿ ಬರುತ್ತಿದೆ.
* ಆಸ್ಪತ್ರೆಯ ವೆಚ್ಚಚನ್ನು ಏರಿಕೆ ಮಾಡಿದ್ದರೂ ನಮ್ಮ ಸ್ಥಿತಿ ಹಾಗೇ ಇದೆ.

KIMS workers protest continuous

ಸುದ್ದಿಗೋಷ್ಠಿಯಲ್ಲಿ ಅಪ್ಪಾಜಿ ಗೌಡ ಹೇಳಿದ್ದೇನು?

* ಕಿಮ್ಸ್ 720 ಹಾಸಿಗೆಯುಳ್ಳ ಆಸ್ಪತ್ರೆ, ಆಸ್ಪತ್ರೆಗೆ 350 ದಾದಿಯರು ಸಾಕಾಗಿತ್ತು, ಆದರೂ ಆಸ್ಪತ್ರೆಯಲ್ಲಿ 670 ದಾದಿಯರಿದ್ದಾರೆ. ಅವರೆಲ್ಲರಿಗೂ ವೇತನ ನೀಡಲಾಗುತ್ತಿದೆ.

* ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡವರು ಕಾಯಂ ಮಾಡಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ.
* ಸಂಸ್ಥೆಗೆ ಪ್ರತಿ ವರ್ಷ 110 ಕೋಟಿ ಹಣ ಖರ್ಚಿಗೆ ಬೇಕಿದ್ದು ಆದಾಯ 95 ಕೋಟಿ ಇದೆ.
* ನಮ್ಮಲ್ಲಿ ಅಗತ್ಯಕ್ಕಿಂತ ಹೆಚ್ಚಿನ ದಾದಿಯರು, ವೈದ್ಯರು ಇದ್ದಾರೆ. ಆದರೆ ಅವರನ್ನು ಮಾನವೀಯತೆ ದೃಷ್ಟಿಯಿಂದ ಉಳಿಸಿಕೊಂಡಿದ್ದೇವೆ.
* ಸಂಸ್ಥೆ ನಷ್ಟದಲ್ಲಿರುವುದರಿಂದ ಈ ರೀತಿಯಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+