KEA UGNEET 2025: ಉಳಿದ ಸೀಟುಗಳ ಹಂಚಿಕೆ ಆರಂಭ, ನವೆಂಬರ್ 27 ಕೊನೆ ದಿನ
ಬೆಂಗಳೂರು, ನವೆಂಬರ್ 26: ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ -ಪದವಿ (UGNEET 2025) ಆಯುಷ್ ಕೋರ್ಸ್ ಗಳ ಎರಡನೇ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ಆರಂಭಿಸಲಾಗಿದೆ. ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.
ಆಯುಷ್ ಕೋರ್ಸುಗಳಿಗೆ ಸ್ಟೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ನಂತರ ಉಳಿದಿರುವ ಅಥವಾ ರದ್ದುಪಡಿಸಿಕೊಂಡಿರುವ ಅಥವಾ ಹೊಸದಾಗಿ ಸೇರ್ಪಡೆಯಾದ ಸೀಟುಗಳಿಗೆ ಎರಡನೇ ಸ್ಟೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ನಡೆಸಲಾಗುತ್ತದೆ. ಈ ಸಂಬಂಧ ಅಭ್ಯರ್ಥಿಗಳಿಗೆ ನವೆಂಬರ್ 27ರಂದು ಬೆಳಗ್ಗೆ 10 ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಅದೇ ದಿನ ಮಧ್ಯಾಹ್ನ 2 ಗಂಟೆ ನಂತರ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ನವೆಂಬರ್ 28ರಂದು ಬೆಳಗ್ಗೆ 10 ಗಂಟೆ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಶುಲ್ಕ ಪಾವತಿಸಿ, ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಂಡು ನವೆಂಬರ್ 30ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/kahvs ಗೆ ಭೇಟಿ ನೀಡಿ ಎಂದು ತಿಳಿಸಿದ್ದಾರೆ.
ಸೀಟು ಹಂಚಿಕೆಯಲ್ಲಿ ಭಾಗವಹಿಸಿ
ಆಯುಷ್ ಕೋರ್ಸುಗಳ ಪ್ರವೇಶಾತಿಗೆ ಮೊದಲನೇ ಸ್ಟೇ ವೇಕೆನ್ಸಿ ಸುತ್ತಿನಲ್ಲಿ ಭಾಗವಹಿಸಿದ ಅರ್ಹ ಅಭ್ಯರ್ಥಿಗಳು ಯಾವುದೇ ಆಯುಷ್ ಸೀಟುಗಳನ್ನು ಹಂಚಿಕೆ ಮಾಡಿಕೊಳ್ಳದಿದ್ದಲ್ಲಿ ಲಭ್ಯವಿರುವ ಸೀಟುಗಳಿಗೆ ಆಸಕ್ತಿ ಇದ್ದಲ್ಲಿ ಎರಡನೇ ಸ್ಟೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಬಹುದು.
ದಿನಾಂಕ 06-11-2025 ರ ಪ್ರಕಟಣೆಯಲ್ಲಿ ನೀಡಲಾಗಿರುವ ಎಲ್ಲಾ ಸೂಚನೆಗಳು ಯಥಾವತ್ತಾಗಿ ಎರಡನೇ ಸ್ಟೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಗೆ ಅನ್ವಯಿಸುತ್ತದೆ. ದಂತ ವೈದ್ಯಕೀಯ ಮತ್ತು ವೈದ್ಯಕೀಯ ಕಾಲೇಜುಗಳಿಗೆ ಸೇರಿರುವ ಅಭ್ಯರ್ಥಿಗಳು ಹಾಗೂ 3ನೇ ಸುತ್ತಿನ ವೈದ್ಯಕೀಯ ಅಥವಾ ದಂತ ವೈದ್ಯಕೀಯ ಸುತ್ತಿನಲ್ಲಿ ತಾತ್ಕಲಿಕವಾಗಿ ಹಂಚಿಕೆ ಮಾಡಿಕೊಂಡಿರುವ ಭಾಗವಹಿಸಲು ಅರ್ಹತೆ ಇರುವುದಿಲ್ಲ ಎಂದು ಪ್ರಾಧಿಕಾರ ತಿಳಿಸಿದೆ.
ಅಖಿಲ ಭಾರತ ಕೌನ್ಸಿಲಿಂಗ್ / ಡೀಮ್ಸ್ ವಿಶ್ವವಿದ್ಯಾಲಯ/ಸೆಂಟ್ರಲ್ ಯೂನಿವರ್ಸಿಟಿ ಮುಂತಾದ ಮೊದಲನೆ, ಎರಡನೆ ಅಥವಾ ಮಾಪ್-ಅಪ್ ಸುತ್ತಿನಲ್ಲಿ ಸೀಟು ಹಂಚಿಕೆಯ ನಂತರ ಕಾಲೇಜಿಗೆ ವರದಿ ಮಾಡಿದ ಅಭ್ಯರ್ಥಿಗಳು ಅಥವಾ ಸ್ಟೇ ವೇಕೆನ್ಸಿ ಸುತ್ತಿನಲ್ಲಿ ಹಂಚಿಕೆಯಾಗಿರುವ ಅಭ್ಯರ್ಥಿಗಳು ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹರಾಗುವುದಿಲ್ಲ.
ಅಭ್ಯರ್ಥಿಗಳು ಆಯುಷ್ ಕೋರ್ಸುಗಳಿಗೆ ಭಾಗವಹಿಸುವ ಮೊದಲು ಸೀಟುಗಳ ಲಭ್ಯತೆಯನ್ನು ಪರಿಶೀಲಿಸಿ ವಿವಿಧ ಕಾಲೇಜುಗಳಲ್ಲಿನ ಶುಲ್ಕದ ವಿವರಗಳನ್ನು ಗಮನಿಸಿ ನಂತರ ಎರಡನೇ ಸ್ಟೇ ವೇಕೆನ್ಸಿ ಸುತ್ತಿನಲ್ಲಿ ಭಾಗವಹಿಸುವಂತೆ ನಿರ್ದೇಶಿಸಿದೆ.
ಹಿಂದಿನ ಸೀಟು ರದ್ದಾಗುತ್ತದೆ..!
ಅಭ್ಯರ್ಥಿಗಳು ಶುಲ್ಕದ ವಿವರಗಳನ್ನು ಪರಿಶೀಲಿಸಿದ ನಂತರ ದೃಢೀಕರಿಸಿಕೊಂಡು ಪೋಷಕರೊಡನೆ ಚರ್ಚಿಸಿ ನಂತರ ಈ ಸುತ್ತಿನಲ್ಲಿ ಭಾಗವಹಿಸಬಹುದು. ಇತರೆ ಅಭ್ಯರ್ಥಿಗಳು ಆಯುಷ್ ಸೀಟುಗಳಲ್ಲಿ ಆಸಕ್ತಿ ಇದ್ದಲ್ಲಿ, ಪ್ರಸ್ತುತ ಕಾಲೇಜಿನಿಂದ ನಿಗದಿತ ಸಮಯದೊಳಗೆ ಮೂಲ ದಾಖಲೆ ಪಡೆದು ದೃಢೀಕರಿಸಿಕೊಂಡ ನಂತರ ಈ ಸುತ್ತಿನಲ್ಲಿ ಭಾಗವಹಿಸಿ.ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದ ನಂತರ ಈ ಹಿಂದೆ ಪಡೆದಿದ್ದ ಸೀಟು ರದ್ದಾಗುತ್ತದೆ ಯಾವುದೇ ಕಾರಣಕ್ಕೂ ಅವರುಗಳು ಹಳೆಯ ಸೀಟನ್ನು ಮರಳಿ ಪಡೆಯಲು ಆಗುವುದಿಲ್ಲ. ಹಂಚಿಕೆಯಾದ ಸೀಟಿಗೆ ಕಡ್ಡಾಯವಾಗಿ ಕಾಲೇಜಿಗೆ ಪ್ರವೇಶ ಪಡೆಯಬೇಕು ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು.
ನಿಗದಿತ ದಿನಾಂಕ ಮತ್ತು ಸಮಯದೊಳಗೆ ಹೊಸದಾಗಿ ಹಂಚಿಕೆಯಾದ ಕಾಲೇಜಿಗೆ ಪ್ರವೇಶ ಪಡೆಯಲು ಪ್ರಸ್ತುತ ಕಾಲೇಜಿನಿಂದ ಮೂಲ ದಾಖಲೆಗಳನ್ನು ಪಡೆಯುವುದು ಅಭ್ಯರ್ಥಿಗಳ ಜವಾಬ್ದಾರಿ ಆಗಿದೆ. ಇತರೆ ಕೋರ್ಸುಗಳಿಗೆ ಪಾವತಿಸಿದ ಶುಲ್ಕವನ್ನು ಈಗಾಗಲೇ ಕಾಲೇಜುಗಳಿಗೆ ವರ್ಗಾವಣೆ ಮಾಡಲಾಗಿದೆ. ಆಯುಷ್ ಕೋರ್ಸುಗಳಿಗೆ ಹೊಂದಾಣಿಕೆ ಮಾಡುವುದಿಲ್ಲ ಎಂದು ಕೆಇಎ ಸ್ಪಷ್ಟಪಡಿಸಿದೆ.

Click it and Unblock the Notifications