ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖುದ್ದಾಗಿ ರಾಜೀನಾಮೆ ಕೊಡದೆ ಇದ್ದರೆ ಅಂಗೀಕರಿಸೊಲ್ಲ: ರಮೇಶ್ ಕುಮಾರ್

|
Google Oneindia Kannada News

Recommended Video

ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದೇನು? | K. R. Ramesh Kumar

ಬೆಂಗಳೂರು, ಜುಲೈ 9: 'ನಾನು ನಿಯಮಾವಳಿಗಳ ಪ್ರಕಾರ ನಡೆದುಕೊಳ್ಳುತ್ತೇನೆ. ಶಾಸಕರು ವೈಯಕ್ತಿಕವಾಗಿ ಕಚೇರಿಗೆ ಬಂದು ನನಗೆ ರಾಜೀನಾಮೆ ಪತ್ರ ನೀಡದ ಕಾರಣ ಅದನ್ನು ಅಂಗೀಕರಿಸುವುದಿಲ್ಲ' ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.

ವಿಧಾನಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು, ವೈಯಕ್ತಿಕವಾಗಿ ಬಂದು ರಾಜೀನಾಮೆ ನೀಡದೆ ಹೋದರೆ ಅಂಗೀಕರಿಸುವುದಿಲ್ಲ. ಅವರು ನನ್ನ ಭೇಟಿಗೆ ಕಚೇರಿಯಿಂದ ಪೂರ್ವಾನುಮತಿ ಪಡೆದಿರಲಿಲ್ಲ. ಅವರು ಬರುವ ವಿಚಾರ ನನಗೆ ತಿಳಿದಿರಲಿಲ್ಲ. ವೈಯಕ್ತಿಕ ಕೆಲಸಕ್ಕಾಗಿ ಕಚೇರಿಯಿಂದ ಹೊರಕ್ಕೆ ತೆರಳಿದ್ದೆ. ನನ್ನ ಅನುಪಸ್ಥಿತಿಯಲ್ಲಿ ರಾಜೀನಾಮೆ ಕೊಟ್ಟಿದ್ದರೆ ನಾನು ಹೊಣೆಯಲ್ಲ. ಅವರು ಮೊದಲೇ ಅನುಮತಿ ಕೋರಿದ್ದರೆ ಕಚೇರಿಯಲ್ಲಿ ಇರುತ್ತಿದ್ದೆ ಎಂದು ಹೇಳಿದರು.

ಸ್ಲಂನಲ್ಲಿದ್ದು ದುರ್ವಾಸನೆ ಆಗೊಲ್ಲ ಎಂದರೆ ಹೇಗೆ?: ರಮೇಶ್ ಕುಮಾರ್ ಮಾರ್ಮಿಕ ನುಡಿಸ್ಲಂನಲ್ಲಿದ್ದು ದುರ್ವಾಸನೆ ಆಗೊಲ್ಲ ಎಂದರೆ ಹೇಗೆ?: ರಮೇಶ್ ಕುಮಾರ್ ಮಾರ್ಮಿಕ ನುಡಿ

ರಾಜೀನಾಮೆ ಪತ್ರ ನೀಡಿರುವ ಶಾಸಕರನ್ನು ವೈಯಕ್ತಿಕವಾಗಿ ಕರೆದು ಕಾರಣ ಪಡೆದುಕೊಳ್ಳಬೇಕಾಗುತ್ತದೆ. ಹಾಗೆ ಖುದ್ದು ಹಾಜರಾಗದೆ ಅವರ ರಾಜೀನಾಮೆ ಅಂಗೀಕಾರ ಮಾಡುವುದಿಲ್ಲ ಎಂದು ತಿಳಿಸಿದರು.

karnataka speaker ramesh kumar will not accept resignation if not present personally

ರಾಜೀನಾಮೆ ಸಲ್ಲಿಸಿರುವ 13 ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಹೀಗಾಗಿ ಪಕ್ಷದ ಪರ ವಕೀಲರು ಸ್ಪೀಕರ್ ಭೇಟಿಗೆ ಅನುಮತಿ ಕೋರಿದ್ದಾರೆ. ಇದಕ್ಕೂ ಮೊದಲು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳುವಂತೆ ಕಾಂಗ್ರೆಸ್ ದೂರು ನೀಡಿದೆ. ಈ ಇಬ್ಬರ ರಾಜೀನಾಮೆ ತಾಂತ್ರಿಕವಾಗಿ ಸರಿಯಾಗಿಲ್ಲ. ಹೀಗಾಗಿ ಅವರನ್ನು ಅನರ್ಹತೆಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.

English summary
Speaker Ramesh Kumar said that, he will not accept the resignation of MLAs if they are not present personally before him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X