Karnataka Rains: ಕುಗ್ಗದ ವೈಪರಿತ್ಯ, ಮುಂದಿನ 5 ದಿನ ಭಾರೀ ಮಳೆ
ಬೆಂಗಳೂರು, ಜುಲೈ 30: ಕರ್ನಾಟಕದಲ್ಲಿ ನಿರಂತರವಾಗಿ ಮಳೆ ಸುರಿಯಲು ಕಾರಣವಾಗಿರುವ ಅರಬ್ಬಿ ಸಮುದ್ರದಲ್ಲಿ ವೈಪರಿತ್ಯದ ತೀವ್ರ ಇಳಿಕೆ ಆದಂತಿಲ್ಲ. ಹೀಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಮಳೆ ಆರ್ಭಟಿಸುವ ಮುನ್ಸೂಚನೆ ದೊರೆತಿದೆ.
ಹವಾಮಾನ ಇಲಾಖೆ ಪ್ರಕಾರ, ಕಳೆದ ಎರಡು ದಿನದಲ್ಲಿ ಮುಂಗಾರು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇಳಿಕೆ ಆದಂತೆ ಕಂಡು ಬಂದಿತ್ತು. ಆದರೆ ವೈಪರಿತ್ಯಗಳ ತೀವ್ರತೆ ಹೆಚ್ಚಾಗಿದ್ದು, ಮತ್ತೆ ವಿವಿಧ ಜಿಲ್ಲೆಗಳಲ್ಲಿ ಮುಂದಿನ 05 ದಿನಗಳವರೆಗೆ ಸಾಧಾರಣದಿಂದ ಭಾರೀ ಮಳೆ ಆಗುವ ಮುನ್ಸೂಚನೆ ದೊರಕಿದೆ.

ನಿರಂತರ ಸುರಿದ ಮುಂಗಾರು ಮಳೆ ಅಬ್ಬರದಿಂದ ರಾಜ್ಯದ ಬಹುತೇಕ ಎಲ್ಲ ನದಿಗಳು ಉಕ್ಕಿ ಹರಿಯಲು, ಜಲಾಶಯಗಳು ಭರ್ತಿಯಾಗಿವೆ. ತಗ್ಗು ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಯಾಗಿವೆ. ಮಲೆನಾಡು, ಕರಾವಳಿ ಭಾಗದಲ್ಲಿ ಮಳೆಗೆ ಗುಡ್ಡ ಕುಸಿದರೆ, ಉತ್ತರ ಕರ್ನಾಟಕ ಭಾಗದಲ್ಲಿ ನದಿ ತೀರದ ಪ್ರದೇಶಗಳಲ್ಲಿ ಗ್ರಾಮಗಳು ಮುಳುಗಡೆ ಆಗಿವೆ. ನೂರಾರು ಸೇತುವೆಗಳು ನೆಲಕಚ್ಚಿವೆ. ಗುಡ್ಡಗಳು, ಹೆದ್ದಾರಿಗಳು ಕುಸಿತು ಸಂಚಾರ ಅಸ್ತವೆಸ್ತವಾಗಿದೆ. ವಿದ್ಯುತ್ ಕಂಬಗಳು ಧರೆಗುರುಳಿ, ಜನರು ಪಡಬಾರದ ಕಷ್ಟವನ್ನೆಲ್ಲ ಪಟ್ಟಿದ್ದಾರೆ.
ಪ್ರವಾಹ, ನೆರೆ ನಿರ್ಲಕ್ಷಿಸಿದ ರಾಜಕಾರಣಗಳು..
ಈ ಕುರಿತು ಮಾತನಾಡಬೇಕಾದ ರಾಜ್ಯ ಸರ್ಕಾರ ಹಾಗೂ ವಿಪಕ್ಷ ನಾಯಕರು ಹಗರಣಗಳ ಬೆನ್ನತ್ತಿದ್ದಾರೆ. ಆ ವಿಚಾರದ ಜೊತೆಗೆ ಉತ್ತರ ಕರ್ನಾಟಕ ಸೇರಿ ಪ್ರವಾಹ, ನೆರೆ ಉಂಟಾದ ಪ್ರದೇಶಗಳಿಗೆ ಭೇಟಿ ಕೊಟ್ಟು ಸಮೀಕ್ಷೆ ಮಾಡಬೇಕು. ಪರಿಹಾರ ಒದಗಿಸಬೇಕು. ಸಂತ್ರಸ್ತರಿಗೆ ಸರ್ಕಾರ ಹಾಗೂ ವಿಪಕ್ಷಗಳು ಆಸರೆಯಾಗುವ ತುರ್ತು ಕೆಲಸ ಮಾಡಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.
ಎಲ್ಲೆಲ್ಲಿ ಭಾರಿ ಮಳೆ, ಸಾಧಾರಣೆ ಮಳೆ?
ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಮತ್ತು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಹಿನ್ನಲೆಯಲ್ಲಿ ಇಂದು ಜುಲೈ 30ಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ. ನಂತರದ ಎರಡು ದಿನ (ಆಗಸ್ಟ್2) ಭಾರಿ ಮಳೆ ಹಿನ್ನೆಲೆಯಲ್ಲಿ ಇದೇ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ನಂತರ ಆಗಸ್ಟ್ 4ರವರೆಗೆ ಸಾಧಾರಣದಿಂದ ಭಾರೀ ಮಳೆ ಬರಲಿದೆ. ಇನ್ನೂ ಭಾರಿ ಮಳೆ ಹೊರತುಪಡಿಸಿದ ರಾಜ್ಯದ ಉತ್ತರ ಒಳನಾಡು, ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆ ಮುಂದುವರಿದಿದೆ. ಬಿಟ್ಟು ಬಿಡದಂತೆ ನಿತ್ಯವು ಮಳೆ ದರ್ಶನವಾಗುತ್ತಿದೆ. ಮುಂದಿನ ಐದು ದಿನವು ಆಯಾ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮುಂದುವರಿಯಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.












Click it and Unblock the Notifications