Karnataka Rain: ಮಳೆ ಆರ್ಭಟ... ಮುಂದಿನ 72 ಗಂಟೆಗಳ ಕಾಲ ಅಬ್ಬರಿಸಲಿದೆ ಭಾರಿ ಮಳೆ!

ಕರ್ನಾಟಕದಲ್ಲಿ ಮಳೆ ಆರ್ಭಟ ಬಲು ಜೋರಾಗುತ್ತಿದ್ದು, ಮಳೆಯ ಕಾಟಕ್ಕೆ ಜನರು ಇದೀಗ ಟೆನ್ಷನ್ ಆಗಿದ್ದಾರೆ. ಮಳೆ... ಮಳೆ... ಮಳೆ... ಹೀಗೆ ಚಳಿಗಾಲ ಬಂದರೂ ಕರ್ನಾಟಕದ ಎಲ್ಲೆಲ್ಲೂ ಮಳೆ ಬಗ್ಗೆ ಚಿಂತೆ ಶುರುವಾಗಿದೆ. ಕನ್ನಡಿಗರ ರಾಜಧಾನಿ ಬೆಂಗಳೂರಿನಿದ ಹಿಡಿದು ಉತ್ತರ ಕರ್ನಾಟಕ ಟು ದಕ್ಷಿಣ ಕರ್ನಾಟಕ ಹಾಗೂ ಮಲೆನಾಡು & ಕರಾವಳಿ ಭಾಗದಲ್ಲೂ ಈ ರೀತಿಯಾಗಿ ಮಳೆಯು ಅಬ್ಬರಿಸುತ್ತಿದೆ. ಅದರಲ್ಲೂ, ಮುಂದಿನ 72 ಗಂಟೆಗಳ ಕಾಲ ನಮ್ಮ ಕರ್ನಾಟಕದ ಈ ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಭಾರಿ ಮಳೆ!

ಅದ್ಯಾವ ಕೇಡುಗಾಲಕ್ಕೆ ಅಂತಾ ಚಳಿಗಾಲ ಡಿಸೆಂಬರ್ ತಿಂಗಳಲ್ಲಿ ಕೂಡ ಕರ್ನಾಟಕದಲ್ಲಿ ಈ ರೀತಿ ಮಳೆ ಸುರಿಯುತ್ತಿದೆಯೋ ಗೊತ್ತಿಲ್ಲ. ಕಳೆದ ಒಂದು ವಾರ ಪೂರ್ತಿ ಮಳೆ ಸುರಿದಿದ್ದು, ಜನರು ಕೂಡ ಇದನ್ನ ನೋಡಿ ರೊಚ್ಚಿಗೆದ್ದಿದ್ದಾರೆ. ಮನುಷ್ಯರು ಪ್ರಕೃತಿ ಮಾತೆಯ ಮೇಲೆ, ತೀವ್ರವಾಗಿ ದೌರ್ಜನ್ಯ ನಡೆಸುತ್ತಿರುವ ಕಾರಣಕ್ಕೆ ಹೀಗೆಲ್ಲಾ ಆಗುತ್ತಿದೆ ಎಂಬ ಆರೋಪ ಈಗ ಕೇಳಿ ಬರುತ್ತಿದೆ. ಇಂತಹ ಸಮಯದಲ್ಲೇ, ಕರ್ನಾಟಕದ ಈ ಜಿಲ್ಲೆಗಳಲ್ಲಿ ಮುಂದಿನ 72 ಗಂಟೆ ಕಾಲ ಅಬ್ಬರಿಸಲಿದೆ ಭಾರಿ ಮಳೆ ಎಂದು ವಾರ್ನಿಂಗ್ ಕೊಡಲಾಗಿದೆ!

Karnataka Rain Heavy Rain Alert Issued For Next 72 Hours To These Places Of Karnataka

ಕರ್ನಾಟಕದ ಹಲವು ಜಿಲ್ಲೆಗಳಿಗೆ ಮತ್ತೆ ಮಳೆ!

ಮಳೆ ಯಾಕೆ ಈ ರೇಂಜ್‌ಗೆ ಸುರಿಯುತ್ತಿದೆ ಅಂದ್ರೆ, ಸದಾ ಶಾಂತವಾಗಿ ಇರುತ್ತಿದ್ದ ಬಂಗಾಳಕೊಲ್ಲಿ ಇದೀಗ ರೊಚ್ಚಿಗೆದ್ದಿದೆ. ಯಾಕಂದ್ರೆ ಬಂಗಾಳಕೊಲ್ಲಿ ಪ್ರದೇಶದಲ್ಲಿ ಪದೇ ಪದೇ ವಾತಾವರಣ ಹಾಳಾಗಿ ಹೋಗುತ್ತಿದ್ದು, ಜನರು ಕೂಡ ಇದನ್ನ ಕಂಡು ಬೆಚ್ಚಿ ಬಿದ್ದಿದ್ದಾರೆ. ಇಂತಹ ವೇಳೆ ಬೆಂಗಳೂರು ಸೇರಿ ಕರ್ನಾಟಕದ ಹಲವು ಜಿಲ್ಲೆಗಳಿಗೆ ಮತ್ತೆ ಮಳೆ ಆರ್ಭಟದ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ, ಯಾವೆಲ್ಲಾ ಭಾಗದಲ್ಲಿ ಮಳೆ ಸುರಿಯಲಿದೆ? ಕರ್ನಾಟಕ ರಾಜ್ಯದ ಯಾವ ಯಾವ ಜಿಲ್ಲೆಗೆ ಮಳೆ ಬರಲಿದೆ? ಮುಂದೆ ಓದಿ.

ಡಿಸೆಂಬರ್ 7 ಅಂದ್ರೆ ಇಂದು, ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದೆ. ಹಾಗೇ ಅವಳಿ ನಗರ ಹುಬ್ಬಳ್ಳಿ-ಧಾರವಾಡ, ಕುಂದಾನಗರಿ ಬೆಳಗಾವಿ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸುರಿಯುವ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗೇ ಡಿಸೆಂಬರ್ 8, ಅಂದ್ರೆ ನಾಳೆ ಕೂಡ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದ್ದು, ಹುಬ್ಬಳ್ಳಿ-ಧಾರವಾಡ, ಕುಂದಾನಗರಿ ಬೆಳಗಾವಿ ಜಿಲ್ಲೆಗಳು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಗೂ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ.

ಬೆಂಗಳೂರಿಗೂ ಕಾದಿದೆ ಮಳೆ ಕಂಟಕ!

ಡಿಸೆಂಬರ್ 9ರ ಸೋಮವಾರ ಬೆಂಗಳೂರಲ್ಲಿ ಕೂಡ ಭಾರಿ ಮಳೆ ಬೀಳುವ ಮುನ್ಸೂಚನೆಯ ನೀಡಲಾಗಿದ್ದು, ಹುಬ್ಬಳ್ಳಿ-ಧಾರವಾಡ, ಕುಂದಾನಗರಿ ಬೆಳಗಾವಿ ಜಿಲ್ಲೆಗಳು ಸೇರಿದಂತೆ ಉತ್ತರ ಕನ್ನಡ ಜಿಲ್ಲೆ & ಉಡುಪಿ ಹಾಗೂ ಮಂಗಳೂರು ಭಾಗದಲ್ಲಿ ಕೂಡ ಭಾರಿ ಮಳೆಯ ಕುರಿತು ಮುನ್ನೆಚ್ಚರಿಕೆ ನೀಡಲಾಗಿದೆ. ಮತ್ತೊಂದು ಕಡೆ ಮತ್ತೆ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣ ಆಗುತ್ತಿದೆ. ಹೀಗಾಗಿ, ಹವಾಮಾನ ವೈಪರೀತ್ಯದ ಪರಿಣಾಮ ಡಿಸೆಂಬರ್ 12ರ ಬಳಿಕ ಮತ್ತಷ್ಟು ಮಳೆ ಸುರಿಯುವ ಎಚ್ಚರಿಕೆ ಸಿಕ್ಕಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+