ರೋಗಿಗಳಿಗೆ ತಮ್ಮ ಮತದಾನದ ಹಕ್ಕು ಚಲಾಯಿಸಲು ನೆರವು ನೀಡಿದ ಮಣಿಪಾಲ್ ಆಸ್ಪತ್ರೆ
ಬೆಂಗಳೂರು, ಮೇ.10: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಣಿಪಾಲ್ ಆಸ್ಪತ್ರೆ ವೈದ್ಯಕೀಯವಾಗಿ ಸದೃಢರಾಗಿರುವ 16 ಒಳರೋಗಿಗಳಿಗೆ ಮತ ಚಲಾಯಿಸಲು ಸಹಾಯ ಮಾಡುವ ಮೂಲಕ ಮತದಾನದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದೆ. ರೋಗಿಗಳಿಗೆ ಸಾರಿ ಮತ್ತು ವೈದ್ಯಕೀಯ ನೆರವಿನೊಂದಿಗೆ ಕರೆದುಕೊಂಡು ಹೋಗಿ ಅವರ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸಲು ಸಹಾಯ ಮಾಡಿದೆ.
ಮಣಿಪಾಲ್ ಆಸ್ಪತ್ರೆ ಮುಖ್ಯ ಚುನಾವಣಾ ಅಧಿಕಾರಿಯೊಂದಿಗೆ ಬಿಬಿಎಂಪಿ ಆಯುಕ್ತರನ್ನು ಸಂಪರ್ಕಿಸಿ ಈ ಒಳರೋಗಿಗಳಿಗೆ ಸುಗಮ ಮತದಾನಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಚರ್ಚಿಸಿ ಈ ಕೆಲಸವನ್ನು ಮಾಡಿವೆ. ಆಸ್ಪತ್ರೆಗಳಲ್ಲಿ ತಮ್ಮ ವೈದ್ಯರಿಂದ ಸಂಪೂರ್ಣ ಆರೋಗ್ಯ ತಪಾಸಣೆ ಮತ್ತು ಅನುಮೋದನೆಯ ನಂತರ, ರೋಗಿಗಳನ್ನು ನೋಂದಾಯಿತ ವಾಹನಗಳಲ್ಲಿ ಮತ ಚಲಾಯಿಸಲು ಮತಗಟ್ಟೆಗಳಿಗೆ ಕರೆತರಲಾಗಿದೆ.

ಇವರಲ್ಲಿ ಡಯಾಲಿಸಿಸ್‌ನಲ್ಲಿರುವ ರೋಗಿಗಳು, ಅಪಘಾತದಿಮದ ಚೇತರಿಸಿಕೊಳ್ಳುವವರು, ಕೀಮೋಥೆರಪಿಯಲ್ಲಿರುವ ರೋಗಿಗಳು ಮತ್ತು ಶ್ವಾಸಕೋಶದ ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುತ್ತಿರುವ ರೋಗಿಗಳು ಸೇರಿದ್ದಾರೆ. ಯಾವುದೇ ಅನಗತ್ಯ ಅವಘಡಗಳನ್ನು ತಪ್ಪಿಸಲು ಆಸ್ಪತ್ರೆಯು ಎಲ್ಲಾ 16 ರೋಗಿಗಳಿಗೆ ವೈದ್ಯಕೀಯ ನೆರವು ನೀಡಿತ್ತು.
ಮತದಾನ ಮಾಡಲು ಆಸ್ಕತಿ ಹೊಂದಿದ್ದ ಹಲವು ಒಳರೋಗಿಗಳಲ್ಲಿ ವೈದ್ಯರು ಶಿಫಾರಸು ಮಾಡಿದ 16 ಜನರನ್ನು ಮಾತ್ರ ಮತಗಟ್ಟೆಗೆ ಕರೆತರಲಾಗಿದೆ. 16 ಪ್ರಕರಣಗಳಲ್ಲಿ 2 ಪ್ರಕರಣಗಳು ಗಂಭೀರವಾಗಿದ್ದು, ಅವರನ್ನು ಆಯಾ ಕ್ಷೇತ್ರದ ನರ್ಸ್‌ಗಳು ಮತ್ತು ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ನೋಡಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿತ್ತು.
ಮಣಿಪಾಲ್ ಆಸ್ಪತ್ರೆಯ ತಂಡವು ನಿರ್ದಿಷ್ಟ ಕ್ಷೇತ್ರದ ಚುನಾವಣಾಧಿಕಾರಿಯಿಂದ ಒಳರೋಗಿಗಳಿಗೆ ಮತ ಚಲಾಯಿಸಲು ಸಹಾಯ ಮಾಡಲು ಅನುಮೋದನೆಯ ಪತ್ರದೊಂದಿಗೆ ಅನುಮತಿ ಪಡೆದಿದ್ದಾರೆ. ಈ ರೋಗಿಗಳನ್ನು ಆನೇಕಲ್, ರಾಜಾಜಿ ನಗರ, ಶಿವನಗರ, ಸನ್ ಸಿಟಿ, ಹರಳೂರು, ಮಲ್ಲೇಶಪಾಳ್ಯ, ಮಲ್ಲೇಶ್ವರಂ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಸರ್ಜಾಪುರ, ಯಶವಂತಪುರ ಮತ್ತು ಸಿ ವಿ ರಾಮನ್ ನಗರ ಸೇರಿದಂತೆ ಇತರ ಮತಗಟ್ಟೆಗಳಿಗೆ ಕರೆದೊಯ್ಯಲಾಯಿತು.
ಮಣಿಪಾಲ್ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ತಿಕ್ ರಾಜಗೋಪಾಲ್ ಮಾತನಾಡಿ, 16 ಒಳರೋಗಿಗಳಿಗೆ ಮತದಾನ ಮಾಡಲು ಸಾರಿಗೆ ವ್ಯವಸ್ಥೆ ಕಲ್ಪಿಸುವ ಹೊಸ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ ವೈದ್ಯಕೀಯ ಸಿಬ್ಬಂದಿ ಮತ್ತು ತಂಡವನ್ನು ನಾನು ಅಭಿನಂದಿಸುತ್ತೇನೆ. ಮಣಿಪಾಲ ಯಾವಾಗಲೂ ಅತ್ಯುತ್ತಮ ಚಿಕಿತ್ಸಾ ಆರೈಕೆಗೆ ಹೆಸರುವಾಸಿಯಾಗಿದೆ. ಆದರೆ ನಾವು ನಮ್ಮ ಸೇವೆಗಳಿಗೆ ಸೀಮಿತವಾಗಿರಲು ಬಯಸುವುದಿಲ್ಲ. ನಮ್ಮ ರೋಗಿಗಳಿಗೆ ಸಹಾಯ ಮಾಡಲು ನಾವು ಬದ್ದರಾಗಿದ್ದೇವೆ. ಚುನಾವಣಾ ಆಯೋಗವು ಪಟ್ಟಿ ಮಾಡಿರುವ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆ" ಎಂದಿದ್ದಾರೆ.












Click it and Unblock the Notifications