ಕರ್ನಾಟಕ ಕೇಸರಿಯಾಗಿಲ್ಲ, ವರ್ಣರಂಜಿತವಾಗಿದೆ: ಪ್ರಕಾಶ್ ರೈ

ಬೆಂಗಳೂರು, ಮೇ 20: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರನ್ನು ಜಸ್ಟ್ ಆಸ್ಕಿಂಗ್ ಅಭಿಯಾನದ ಮೂಲಕ ಕಾಡುತ್ತಿದ್ದ ನಟ ಪ್ರಕಾಶ್ ರೈ ಅವರು, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಪತನದ ಬಗ್ಗೆ ಟ್ವೀಟ್ ಮಾಡಿದ್ದಾರೆ.

"ಕರ್ನಾಟಕ ಕೇಸರಿಯಾಗುವುದಿಲ್ಲ. ಆದರೆ ವರ್ಣರಂಜಿತವಾಗಿ ಮುಂದುವರಿಯಲಿದೆ. ಶುರುವಾಗುವುದಕ್ಕಿಂತಲೂ ಮೊದಲೇ ಮ್ಯಾಚ್ ಮುಗಿದಿದೆ" ಎಂದು 55 ಗಂಟೆಗಳಲ್ಲೇ ಪತನವಾದ ಯಡಿಯೂರಪ್ಪ ಸರ್ಕಾರದ ಬಗ್ಗೆ ನಟ, ನಿರ್ದೇಶಕ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

Karnataka Politics Floor test : Prakash Raj tweet on BJP government departure

ಈ ಬಗ್ಗೆ ಟ್ವೀಟ್ ಮಾಡಿರುವ ರೈ, "ಶುರುವಾಗುವುದಕ್ಕೂ ಮೊದಲೇ ಮ್ಯಾಚ್ ಮುಗಿದಿದೆ. 56ನ್ನು ಮರೆತುಬಿಡಿ 55 ಗಂಟೆಗಳ ಕಾಲವೂ ಉಳಿಸಲು ಸಾಧ್ಯವಾಗಿಲ್ಲ.

ತಮಾಷೆಯನ್ನು ಬದಿಗಿಡುವುದಾದರೆ, ರಾಜಕೀಯ ಕೆಸರೆರಚಾಟಕ್ಕೆ ಪ್ರಜೆಗಳು ಇನ್ನು ತಯಾರಾಗಬೇಕಾಗಿದೆ. ಪ್ರಜೆಗಳಿಗೆ ಹೋರಾಟ ಮಾಡಲು ಇನ್ನೂ ಎದ್ದು ನಿಲ್ಲುತ್ತೇನೆ ಹಾಗು #justasking ಮುಂದುವರಿಸುತ್ತೇನೆ" ಎಂದಿದ್ದಾರೆ.

ತನ್ನ ಜಸ್ಟ್ ಆಸ್ಕಿಂಗ್ ಆಂದೋಲನದ ಭಾಗವಾಗಿ ಪ್ರಕಾಶ್ ರೈ ಕೇಂದ್ರ ಸರಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ವಿಶ್ವಾಸಮತಯಾಚನೆಯಲ್ಲಿ ವಿಫಲವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪನವರು ರಾಜೀನಾಮೆ ನೀಡಿದ ನಂತರ ಪ್ರಕಾಶ್ ರೈ ಈ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+