ಬೆಂಗಳೂರಿನ ಮಡಿವಾಳ ಕೆರೆಯ ಕಳೆ ತೆಗೆಯಲು ಮುಂದಾದ ಕರ್ನಾಟಕ ಅರಣ್ಯ ಇಲಾಖೆ- ಮಾಹಿತಿ, ವಿವರ
ಕರ್ನಾಟಕ ಅರಣ್ಯ ಇಲಾಖೆಯು ಮುಂದಿನ ವಾರ ಮಡಿವಾಳ ಕೆರೆಯಲ್ಲಿ ಕಳೆ ತೆಗೆಯಲು ಆರಂಭಿಸಲಿದೆ. ಈ ಕುರಿತು, ವರದಿ ಹಾಗೂ ವಿವರಗಳನ್ನು ನೋಡಿ
ಬೆಂಗಳೂರು, ಫೆಬ್ರವರಿ 21: ಕರ್ನಾಟಕ ಅರಣ್ಯ ಇಲಾಖೆಯು ಮುಂದಿನ ವಾರ ಮಡಿವಾಳ ಕೆರೆಯಲ್ಲಿ ಕಳೆ ತೆಗೆಯಲು ಆರಂಭಿಸಲಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ನಾಗರಿಕರ ಉಪಯೋಗಕ್ಕೆ ಯೋಗ್ಯವಾಗುವಂತಹ ಕೆರೆಯನ್ನು ಮರುಸ್ಥಾಪಿಸಲು ದೀರ್ಘಾವಧಿಯ ಯೋಜನೆಯನ್ನು ಸಿದ್ಧಪಡಿಸುವಂತೆ ಮಡಿವಾಳ ಲೇಕ್ ಟ್ಯಾಂಕ್ ಫೌಂಡೇಶನ್‌ಗೆ ಕೇಳಲಾಗಿದೆ ಎಂದು ಇಲಾಖೆ ತಿಳಿಸಿದೆ.
ಕಳೆ ತೆಗೆಯುವ ಪ್ರಕ್ರಿಯೆಯು ಜಲಮೂಲಗಳಲ್ಲಿ ಬೆಳೆದಿರುವ ಉಪಯೋಗಕರವಲ್ಲದ ಸಸ್ಯಗಳನ್ನು ತೆಗೆದುಹಾಕುವ ಪ್ರಕ್ರಿಯೆಯಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ (ಬೆಂಗಳೂರು ನಗರ), ಚಕ್ರಪಾಣಿ ವೈ, 'ಕೆರೆಯ ಕಳೆ ತೆಗೆಯುವ ಕಾರ್ಯ ಮುಂದಿನ ವಾರ ಪ್ರಾರಂಭವಾಗಲಿದ್ದು, ನಿರಂತರ ಪ್ರಕ್ರಿಯೆಯಾಗಲಿದೆ. ಅದಕ್ಕೆ ಟೈಮ್ ಲೈನ್ ಇಲ್ಲ. ಇದಲ್ಲದೆ, ಕೆರೆಯ ಸಂರಕ್ಷಣಾ ಚಟುವಟಿಕೆಗಳನ್ನು ಹೈಲೈಟ್ ಮಾಡುವ ವೆಬ್‌ಸೈಟ್ ತಯಾರಿಸುವ ಯೋಜನೆ ಇದೆ. ಎಂಎಲ್‌ಟಿಎಫ್ ಕೆರೆಯನ್ನು ಹೇಗೆ ಸಂರಕ್ಷಿಸಬೇಕು ಎಂಬುದರ ಕುರಿತು ಯೋಜನೆಯನ್ನು ಸಿದ್ಧಪಡಿಸಿದ ನಂತರ ನಾವು ಅದನ್ನು ಮುಂದುವರಿಸುತ್ತೇವೆ.
ಸಂಸ್ಕರಿಸದ ಕೊಳಚೆ ನೀರು ಕೆರೆಗೆ ಸೇರುತ್ತಿರುವುದು ಕೆರೆಯಲ್ಲಿ ಕಳೆ ಬೆಳೆಯಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) 2022 ರಲ್ಲಿ 10 MLD ಸಾಮರ್ಥ್ಯದ ಒಳಚರಂಡಿ ಸಂಸ್ಕರಣಾ ಘಟಕವನ್ನು (STP) ಪ್ರಾರಂಭಿಸಿದರೆ. STP ಅನ್ನು ನವೀಕರಿಸುವ ಯೋಜನೆಯಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಪ್ರಕಾರ, ಕೆರೆಗೆ ಕೊಳಚೆ ನೀರು ಸೇರುವುದರಿಂದ ಕೆರೆಯು ತೃಪ್ತಿಕರವಲ್ಲದ ನೀರಿನ ಗುಣಮಟ್ಟದ ಸೂಚ್ಯಂಕವನ್ನು ಹೊಂದಿದೆ.

ಬಿಡಬ್ಲ್ಯೂಎಸ್‌ಎಸ್‌ಬಿಯ ಅಧಿಕಾರಿಯೊಬ್ಬರು, 'ಎಸ್‌ಟಿಪಿಯನ್ನು ಮೇಲ್ದರ್ಜೆಗೇರಿಸಲಾಗುವುದು. ಆದರೆ ನಮಗೆ ಕೆರೆಯ ಬಳಿ 5 ಎಕರೆಗಿಂತ ಹೆಚ್ಚು ಜಮೀನು ಬೇಕು. ಒಮ್ಮೆ ಮೇಲ್ದರ್ಜೆಗೇರಿದರೆ, ಕೆರೆಯು ಸಂಸ್ಕರಿಸಿದ ಕೊಳಚೆ ನೀರನ್ನು ಮಾತ್ರ ಪಡೆಯುತ್ತದೆ' ಎಂದು ಹೇಳಿದ್ದಾರೆ.
2019 ರಲ್ಲಿ, ಮಡಿವಾಳ ಕೆರೆಯ ಉಸ್ತುವಾರಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಿಂದ ಅರಣ್ಯ ಇಲಾಖೆಗೆ ವರ್ಗಾಯಿಸಲಾಯಿತು.
2022-23 ರ ಕರ್ನಾಟಕ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಡಿವಾಳ ಕೆರೆ ಮತ್ತು ಎಲೆ ಮಲ್ಲಪ್ಪ ಶೆಟ್ಟಿ ಕೆರೆಗಳ ಸಮಗ್ರ ಅಭಿವೃದ್ಧಿಯನ್ನು ಘೋಷಿಸಿದ್ದರು. ಈ ನಿಟ್ಟಿನಲ್ಲಿ ಎರಡು ಕೆರೆಗಳ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ 120 ಕೋಟಿ ರೂಪಾಯಿ ವಿಶೇಷ ಅನುದಾನ ನೀಡುವುದಾಗಿ ಘೋಷಿಸಿತ್ತು.

ಆದರೆ, ಬಿಬಿಎಂಪಿ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಕಾರ ಕೆರೆಯ ಪುನಶ್ಚೇತನಕ್ಕೆ ಯಾರೊಬ್ಬರಿಗೂ ಅನುದಾನ ಬಂದಿಲ್ಲ. 'ಆರಂಭದ ಬಜೆಟ್‌ನಲ್ಲಿ, ಮಡಿವಾಳ ಕೆರೆಯ ಪುನಶ್ಚೇತನಕ್ಕೆ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲು ಬಿಬಿಎಂಪಿಗೆ ತಿಳಿಸಲಾಗಿತ್ತು. ಆದರೆ ಒಂದು ತಿಂಗಳ ನಂತರ ಏಪ್ರಿಲ್‌ನಲ್ಲಿ ಕೆರೆಯ ಉಸ್ತುವಾರಿಯನ್ನು ಅರಣ್ಯ ಇಲಾಖೆಗೆ ವಹಿಸಲಾಯಿತು. ಕೆರೆಯ ಜೀರ್ಣೋದ್ಧಾರ ಕೈಗೊಳ್ಳಲು ಬಿಬಿಎಂಪಿಗೆ ಅಥವಾ ಅರಣ್ಯ ಇಲಾಖೆಗೆ ಅನುದಾನ ಬಂದಿಲ್ಲ' ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications