• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರಕಲಾ ಪರಿಷತ್ತಿನಲ್ಲಿ ಪೂರ್ಣಚಂದ್ರ ತೇಜಸ್ವಿ ಜೀವಲೋಕ -83

|

ಬೆಂಗಳೂರು, ಸೆ. 3: ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 8ರಿಂದ 15ರತನಕ ಜೀವಲೋಕ ಸರಣಿಯಲ್ಲಿ ಈ ಬಾರಿ ಹದ್ದುಗಳ ಅದ್ಭುತಲೋಕ ಹಾಗೂ ಕೊರೊನಾ ಲೋಕವನ್ನು ನಿಮ್ಮ ಮುಂದಿಡಲಾಗುತ್ತಿದೆ.

   Namma Metro ಸಾಮಾಜಿಕ ಅಂತರ ಕಾಯ್ದುಕೊಳ್ಳದ ನಿಲ್ದಾಣಗಳಲ್ಲಿ ನಿಲ್ಲಲ್ಲ | Oneindia Kannada

   ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

   ರಾಷ್ಟ್ರೀಯ ಸೇವಾ ಯೋಜನೆ ಮತ್ತು ಇಕೋ ಕ್ಲಬ್, ಚಿತ್ರಕಲಾ ಮಹಾವಿದ್ಯಾಲಯ, ಕರ್ನಾಟಕ ಚಿತ್ರಕಲಾ ಪರಿಷತ್ತು, ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಕೊಟ್ಟಿಗೆಹಾರ, ನಿಸರ್ಗ ಸಂರಕ್ಷಣಾ ಸಂಸ್ಥೆ ಸಹಕಾರದಿಂದ ಈ ಕಾರ್ಯಕ್ರಮ ಆಯೋಜನೆಯಾಗಿದೆ.

   ಪೂರ್ಣಚಂದ್ರ ತೇಜಸ್ವಿಯ ಕರ್ವಾಲೋ ಇ ಬುಕ್ ಲೋಕಾರ್ಪಣೆ

   ಕಾರ್ಯಕ್ರಮದ ಹೆಸರು: ತೇಜಸ್ವಿ ಜೀವಲೋಕ 83

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ವಿಷಯ: ಹದ್ದುಗಳ ಅದ್ಭುತ ಲೋಕ ಹಾಗೂ ಕೊರೊನಾ ಲೋಕ

   ಯಾವಾಗ: ಸೆಪ್ಟಂಬರ್ 08 ರಿಂದ 15, 2020,

   ಸಮಯ: ಬೆಳಿಗ್ಗೆ 11:00 ರಿಂದ ಸಂಜೆ 07:00ರವರೆಗೆ

   ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

   ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ, ಬೆಂಗಳೂರು

   ಪೂರ್ಣಚಂದ್ರ ತೇಜಸ್ವಿ ಅಂದರೆ ಛಾಯಾಗ್ರಾಹಕ; ಸಾಮಾಜಿಕ ಚಿಂತಕ; ಸೂಕ್ಷ್ಮ ಗ್ರಹಿಕೆಯ ಸಾಹಿತಿ; ಅಧ್ಯಯನ ಬರಹಗಾರ; ಕಾಫಿ ಬೆಳೆಗಾರ; ಆಧುನಿಕ ತಂತ್ರಜ್ಞಾನಕ್ಕೆ ಸ್ಪಂದಿಸುತ್ತಿದ್ದ ಪ್ರಕಾಶಕ; ಕಂಪ್ಯೂಟರ್ ತಜ್ಞ; ಎಲ್ಲಕ್ಕಿಂತ ಮುಖ್ಯವಾಗಿ ಜೀವಲೋಕದ ತುಡಿತಗಳನ್ನು ಅರಿತಿದ್ದ ಪರಿಸರ ಪ್ರೇಮಿ; ನಮ್ಮೆಲ್ಲರ ಪ್ರಜ್ಞೆಯಲ್ಲಿ ಆಳವಾಗಿ ಮೂಡಿದ ಗೆರೆ; ತೇಜಸ್ವಿ ಅಂದರೆ ಚಿದಂಬರ ರಹಸ್ಯ!

   ಬರುವ ಸೆಪ್ಟೆಂಬರ್ 08ಕ್ಕೆ ತೇಜಸ್ವಿಯವರ 83ನೇ ಹುಟ್ಟಿದ ದಿನ (1939-2007). ಆ ನೆನಪಿನಲ್ಲಿ ಮನುಷ್ಯರ ಅಜ್ಞಾನ, ಅಸಡ್ಡೆಗೆ ಒಳಗಾಗಿ ಬದುಕುಳಿಯಲು ಹೆಣಗುತ್ತಿರುವ ಜೀವಿಗಳ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವ ''ತೇಜಸ್ವಿ ಜೀವಲೋಕ'' ಸರಣಿಯ ಛಾಯಾಚಿತ್ರ, ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಸಂವಾದಗಳಿರುವ ಕಾರ್ಯಕ್ರಮಗಳನ್ನು ಕಳೆದ ಎಂಟು ವರ್ಷಗಳಿಂದ ಆಯೋಜಿಸಿಕೊಂಡು ಬರಲಾಗುತ್ತಿದೆ. 2013ರಲ್ಲಿ ಹಕ್ಕಿಲೋಕ, 2014ರಲ್ಲಿ ಕೀಟಲೋಕ, 2015ರಲ್ಲಿ ಪುಷ್ಪಲೋಕ, 2016ರಲ್ಲಿ ಪರಾಗಸ್ಪರ್ಶಿಗಳು, 2017ರಲ್ಲಿ ಜೇಡಲೋಕ, 2018ರಲ್ಲಿ ಬಾವಲಿಲೋಕ, 2019ರಲ್ಲಿ ಗೂಬೆಲೋಕ ಕುರಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು

   ತೇಜಸ್ವಿ ನೆನಪಲ್ಲಿ ಪ್ಯಾಪಿಲಾನ್ ಸರಣಿ ಕೃತಿ ಬಿಡುಗಡೆ

   ಈಗ ಕೊರೊನ ವೈರಸ್ ನಂತಹ ರೋಗಾಣುಗಳ ಉಪಟಳದಿಂದ ಹೈರಾಣಾಗಿರುವ ಮನುಕುಲವು, ತಾನೇ ಮಹಾಮಾರಿಯಾಗಿ ಭೂಮಿಯ ಜೀವ ಲೋಕಕ್ಕೆ ಒಡ್ಡಿರುವ ಗಂಡಾಂತರದಿಂದ ಅಳಿವಿನಂಚಿಗೆ ಬಂದು ನಮ್ಮತ್ತ ನಿಸ್ಸಹಾಯಕ ನೋಟ ಬೀರಿ ನಮ್ಮಿಂದ ಶಾಶ್ವತವಾಗಿ ನಿರ್ಗಮಿಸುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ 'ಹದ್ದು ಮತ್ತು ರಣ ಹದ್ದು'ಗಳಂತಹ ಜೀವಿಗಳ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವ ನಿಟ್ಟಿನಲ್ಲಿ 'ಹದ್ದುಗಳ ಅದ್ಭುತ ಲೋಕ' ಹಾಗೂ 'ಕೊರೊನ ಲೋಕ'ವನ್ನು ಆಯೋಜಿಸಲಾಗುತ್ತಿದೆ. ಈ ಸಂದರ್ಭದಲ್ಲಿ 'ಹದ್ದುಗಳು ಹಾಗೂ ಕೊರೊನ' ಕುರಿತ ಕೈಪಿಡಿಯನ್ನು ಬಿಡುಗಡೆ ಮಾಡಲಾಗುತ್ತದೆ.

   ತೇಜಸ್ವಿ ಜನ್ಮದಿನಕ್ಕೆ ಫೋಟೋಗ್ರಾಫರ್ ಹಂಚಿಕೊಂಡ ಅನುಭವ

   ಈ ಕಾರ್ಯಕ್ರಮವು ಚಿತ್ರಕಲಾ ಪರಿಷತ್ತಿನ (ಶಿವಾನಂದ ವೃತ್ತ, ಕುಮಾರಕೃಪಾ ರಸ್ತೆ) ಆವರಣದಲ್ಲಿ ಪ್ರತಿದಿನ ಬೆಳಗ್ಗೆ 11.30ರಿಂದ ತಜ್ಞರೊಡನೆ ಸಂವಾದ ಹಾಗೂ ಸಾಕ್ಷ್ಯಚಿತ್ರಗಳ ಪ್ರದರ್ಶನವಿರುತ್ತದೆ. ದೂರದ ಊರುಗಳಲ್ಲಿರುವವರು ಝೂಮ್ ಮೂಲಕ ವರ್ಚುಯಲ್ ಕಾರ್ಯಕ್ರಮದಲ್ಲೂ ಭಾಗವಹಿಸಬಹುದು.

   ಈ ಕಾರ್ಯಕ್ರಮದಲ್ಲಿ ನೋಂದಣಿ ಮಾಡಿಕೊಂಡು ಪಾಲ್ಗೊಳ್ಳುವವರು ದಿನಬಳಕೆಯ 130ಕ್ಕೂ ಹೆಚ್ಚು ಧಾನ್ಯ, ಕಾಳು, ಸೊಪ್ಪು, ತರಕಾರಿ, ಗೆಡ್ಡೆ, ಗೆಣಸು, ಎಣ್ಣೆ ಬೀಜ, ಸಂಭಾರಗಳು, ಹಣ್ಣು-ಒಣ ಹಣ್ಣು, ಸಸ್ಯ ಮೂಲಿಕೆಗಳನ್ನು ಬಳಸಿ ತಯಾರಿಸಿರುವ ಆರೋಗ್ಯವರ್ಧಕ, ಶಕ್ತಿವರ್ಧಕ, ರೋಗನಿರೋಧಕ ಪೇಯ 'ಭೂಸಿರಿ'ಯನ್ನು ಕುಡಿಯಲು ನೀಡಲಾಗುವುದು ಹಾಗೂ ಮಧ್ಯಾಹ್ನ, ಸಿರಿಧಾನ್ಯ ತಿನಿಸುಗಳನ್ನು ಉಚಿತವಾಗಿ ಸವಿಯಬಹುದು.

   English summary
   Explore the world of Vultures and more information on Coronavirus and pay tribute to Kannada Writer, novelist, photographer, ornithologist, publisher, painter and environmentalist KP Poornachandra Tejaswi a unique event at Chitrakala Parishat, Bengaluru from September 08 to 15, 2020.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X