K-100 project: ಬರೋಬ್ಬರಿ 175 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ: ಇಸ್ರೇಲ್ ಟೆಕ್ನಾಲಜಿ ಹೆಲ್ಪ್
ಬೆಂಗಳೂರಿನಲ್ಲಿ ರಾಜಕಾಲುವೆಯೊಂದನ್ನು ಅಭಿವೃದ್ಧಿಪಡಿಸುವುದಕ್ಕೆ ರಾಜ್ಯ ಸರ್ಕಾರವು 175 ಕೋಟಿ ವೆಚ್ಚ ಮಾಡುತ್ತಿದೆ. ಹೌದು ನೀವು ಓದಿದ್ದು, ನಿಜ. ರಾಜ್ಯದಲ್ಲಿ ಬೆಂಗಳೂರು ಕೇಂದ್ರಿತವಾಗಿ ಮಾತ್ರ ಅಭಿವೃದ್ಧಿಪಡಿಸಲಾಗುತ್ತಿದೆ ಎನ್ನುವ ಆರೋಪ ಮೊದಲಿನಿಂದಲೂ ಇದೆ. ಈ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆ-100(ನಾಗರಿಕ ಜಲಮಾರ್ಗ) ಎನ್ನುವ ಕಾಮಗಾರಿಗೆ ಚಾಲನೆ ನೀಡಿದ್ದರು. ಈ ಯೋಜನೆಗೆ ಅಂದಾಜು 175 ಕೋಟಿ ವೆಚ್ಚವಾಗಲಿದೆ.
ಇದೀಗ ಈ ರಾಜಕಾಲುವೆ ಅಭಿವೃದ್ಧಿಗೆ ಇಸ್ರೇಲ್ ಟೆಕ್ನಾಲಜಿ ಬಳಸಿಕೊಳ್ಳಲು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ) ಕೆ-100(ನಾಗರಿಕ ಜಲಮಾರ್ಗ) ಯೋಜನೆ ಅಭಿವೃದ್ಧಿಪಡಿಸಲಾಗುತ್ತಿದೆ. ಬಿಬಿಎಂಪಿಯಿಂದ ಕೆ-100(ನಾಗರಿಕ ಜಲಮಾರ್ಗ) ಯೋಜನೆ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಮೂಲಕ ಇಲ್ಲಿನ (ಶಾಂತಿನಗರ ಮುಖ್ಯ ಬಸ್ ನಿಲ್ದಾಣದ ಮುಂದಿರುವ ಬೃಹತ್ ರಾಜಕಾಲುವೆ) ತೆರೆದ ಚರಂಡಿಯನ್ನು ಸರಿಪಡಿಸುವುದು, ವಾಯುಮಾಲಿನ್ಯವನ್ನು ನಿಯಂತ್ರಣ ಹಾಗೂ ಸಾರ್ವಜನಿಕರು ಜಾಗಿಂಗ್ ಮಾಡುವುದಕ್ಕೆ, ವೀಕೆಂಡ್ ಸೇರುವುದಕ್ಕೆ ಯೋಗ್ಯವಾಗುವಂತೆ ಅಭಿವೃದ್ಧಿ ಮಾಡುವುದು ಇದರ ಉದ್ದೇಶವಾಗಿದೆ.

ಇನ್ನು ಕೋರಮಂಗಲ ರಾಜಕಾಲುವೆ(ಕೆ-100) ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗಿನ 9.2 ಕಿ.ಮೀ ಉದ್ದದ ರಾಜಕಾಲುವೆಯಲ್ಲಿ ರಾಜ್ಯಸರ್ಕಾರ ಅನುದಾನ 175 ಕೋಟಿ ರೂ. ವೆಚ್ಚದಲ್ಲಿ ಜಲಮಾರ್ಗ ಯೋಜನೆ ಕಾಮಗಾರಿ ಕಳೆದ ಮೂರ್ನಾಲ್ಕು ವರ್ಷದಿಂದ ನಡೆಯುತ್ತಿದೆ. ಈ ಹಿಂದೆ ಇದರಲ್ಲಿ ಹರಿಯುತ್ತಿದ್ದ 120 ಎಂ.ಎಲ್.ಡಿ ನಿಂದ 05-08 ಎಂ.ಎಲ್.ಡಿ.ಗೆ ಒಳಚರಂಡಿಯ ಹರಿವನ್ನು (ಕೊಳಚೆ ನೀರು) ಕಡಿಮೆ ಮಾಡಲಾಗಿದೆ. ಶೀಘ್ರವೇ ಈ ಭಾಗದಲ್ಲಿ ಕೊಳಚೆ ನೀರು ಹರಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕುಂಬಾರಗುಂಡಿ ಬಳಿ ರಾಜಕಾಲುವೆಯಲ್ಲಿ ಹರಿಯುವ ನೀರನ್ನು ಶುದ್ಧೀಕರಿಸಲು 05 ಎಂ.ಎಲ್.ಡಿ ಎಸ್.ಟಿ.ಪಿ(ತ್ಯಾಜ್ಯ ನೀರು ಸಂಸ್ಕರಣಾ ಘಟಕ)ಯನ್ನು ನಿರ್ಮಾಣ ಮಾಡಲಾಗಿದೆ. ಇದು ಒಳಚರಂಡಿ ಕೊಳಚೆ ನೀರನ್ನು ಸಂಸ್ಕರಿಸಿ, ಕೆ-100 ವ್ಯಾಲಿ ರಾಜಕಾಲುವೆಗೆ ಸಂಸ್ಕರಿಸಿದ ನೀರನ್ನು ಬಿಡುಗಡೆ ಮಾಡಲಿದೆ.
ತ್ಯಾಜ್ಯ ನೀರು ಸಂಸ್ಕರಣೆ
ಕೆ-100 ವ್ಯಾಲಿ ರಾಜಕಾಲುವೆಯ ಒಳಚರಂಡಿಯ ನೀರನ್ನು ಸಂಸ್ಕರಿಸುವುದಕ್ಕೆ ಹಾಗೂ ಮಾರ್ಗದರ್ಶನ ನೀಡಲು ಇಸ್ರೇಲ್ ಮೂಲದ ಅಯಾಲಾ ಟೆಕ್ನಾಲಜಿ ಕಂಪನಿಯನ್ನು ನೇಮಿಸಲಾಗಿದೆ. ನೂತನ ಟೆಕ್ನಾಲಜಿಯನ್ನು ಬಳಸಿಕೊಂಡು ಈ ಮಾರ್ಗದಲ್ಲಿ ಹೋಗುವ ಒಳಚರಂಡಿ ನೀರನ್ನು ಸಂಸ್ಕರಿಸಿ, ಶುದ್ಧ ನೀರನ್ನು ಮುಂದಕ್ಕೆ ಬಿಡಲು ಪ್ಲಾನ್ ಮಾಡಿಕೊಳ್ಳಲಾಗಿದೆ.

ಕೆ-100 ಯೋಜನೆಯು ಬಹುತೇಕ ಪೂರ್ಣಗೊಂಡಿದ್ದು, ಕೊಳಚೆ ನೀರು ಹರಿಯುವುದನ್ನು ತಡೆಯುವ ಉದ್ದೇಶದಿಂದ ಜಲಮಾರ್ಗದ ಮಧ್ಯೆ ಕಾಂಕ್ರೀಟ್ ರಿಂಗ್ಸ್‌ಗಳನ್ನು ಅಳವಡಿಸಲಾಗುತ್ತಿದೆ. ಅಲ್ಲದೇ ಕೊಳಚೆ ನೀರನ್ನು ಹೀರಿಕೊಳ್ಳುವಂತಹ ಸಸಿಗಳನ್ನು ನೆಡಲಾಗಿದೆ. ಜಲಮಾರ್ಗದಲ್ಲಿ ಅಳವಡಿಸಿರುವ ಸಸಿಗಳು ತ್ಯಾಜ್ಯ ನೀರನ್ನು ಹೀರಿಕೊಂಡು ಶುದ್ಧ ನೀರನ್ನು ಹೊರಗೆ ಬಿಡುವುದಕ್ಕೆ ಸಹಕಾರಿಯಾಗಿರಲಿದೆ. ಇನ್ನು ರಾಜಕಾಲುವೆಗೆ ತ್ಯಾಜ್ಯ ನೀರು ಬರುವುದನ್ನು ನಿಲ್ಲಿಸುವ ಉದ್ದೇಶದಿಂದ ಜಲಮಂಡಳಿಯು 15 ಎಂ.ಎಲ್.ಡಿ ಸಾಮರ್ಥ್ಯದ ಇಂಟರ್ ಮೀಡಿಯೆಟ್ ಸೀವೆಜ್ ಪಂಪಿಂಗ್ ಸ್ಟೇಷನ್(ISPS)ನ್ನು ನಿರ್ಮಾಣ ಮಾಡುತ್ತಿದೆ. ಇದು ಪ್ರಗತಿಯಲ್ಲಿದ್ದು, ವರ್ಷಾಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ.
ಕೆ-100 ಯೋಜನೆಯ ಪ್ರಗತಿ ಎಷ್ಟಾಗಿದೆ ?
ಇನ್ನು ಈ ಯೋಜನೆಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಗತಿ ಆಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ. ಆದರೆ, ವಾಸ್ತವಾಗಿ ಕಾಮಗಾರಿಯಲ್ಲಿ ಗಮನಾರ್ಹ ಬದಲಾವಣೆ ಆಗಿಲ್ಲ ಎಂದೇ ಸಾರ್ವಜನಿಕರು ದೂರಿದ್ದಾರೆ. ಬಿಬಿಎಂಪಿಯ ಪ್ರಕಾರ ಕಾಮಗಾರಿ ಅಭಿವೃದ್ಧಿ ವಿವರ ಈ ರೀತಿ ಇದೆ. ರಾಜಕಾಲುವೆ ಮಾರ್ಗದ ಎರಡೂ ಬದಿಯ ತಡೆಗೋಡೆ, ತಳಮಟ್ಟದ ಸೇತುವೆಗಳನ್ನು ವಾಸ್ತುಶಿಲ್ಪದ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಸಸಿಗಳನ್ನು ನಡೆವುದು , ರಾತ್ರಿ ಸಮಯದಲ್ಲಿ ಉದ್ಯಾನವನದ ರೀತಿಯಲ್ಲಿ ಅಲಂಕಾರಿಕ ದೀಪಗಳ ಅಳವಡಿಕೆ, ಗ್ರಾನೈಟ್ ಅಳವಡಿಕೆ, ಪಾದಚಾರಿ ಮಾರ್ಗ, ಗ್ರಿಲ್ ಅಳವಡಿಕೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂದು ಬಿಬಿಎಂಪಿ ತಿಳಿಸಿದೆ.












Click it and Unblock the Notifications