Get Updates
Get notified of breaking news, exclusive insights, and must-see stories!

ಬಿಗ್ ಬಾಸ್ ಮನೆಗೆ ಪತ್ರಕರ್ತ ರವಿ ಬೆಳಗೆರೆ ಎಂಟ್ರಿ; ಏನಿದು ಲೆಕ್ಕಾಚಾರ?

ಬೆಂಗಳೂರು, ಅಕ್ಟೋಬರ್ 11: ಹಿರಿಯ ಪತ್ರಕರ್ತ- ಹಾಯ್ ಬೆಂಗಳೂರ್ ಹಾಗೂ ಓ ಮನಸೇ ಸಂಪಾದಕ ರವಿ ಬೆಳಗೆರೆ 'ಬಿಗ್ ಬಾಸ್- ಕನ್ನಡ' ಮನೆ ಪ್ರವೇಶಿಸುವುದು ಖಾತ್ರಿ ಆಗಿದೆ. ಈ ವಿಚಾರವು ವಿವಿಧ ಮೂಲಗಳಿಂದ ಖಚಿತವಾಗಿದೆ. ಕಲರ್ ಫುಲ್ ವ್ಯಕ್ತಿತ್ವದ ರವಿ ಬೆಳಗೆರೆ ಪತ್ರಿಕೋದ್ಯಮ, ಶಾಲೆ, ರೇಡಿಯೋ, ಸಿನಿಮಾ, ಯೂ ಟ್ಯೂಬ್ ಹೀಗೆ ನಾನಾ ಮಾಧ್ಯಮಗಳ ಮೂಲಕ ಜನಪ್ರಿಯರು.

ಅಷ್ಟೇ ಅಲ್ಲ, ವಿವಾದಗಳಿಂದಲೂ ರವಿ ಬೆಳಗೆರೆ ಅವರು ಹೊರತಾಗಿಲ್ಲ. ಇತ್ತೀಚೆಗೆ 'ಬೆಳ್ ಬೆಳಗ್ಗೆ ಬೆಳಗೆರೆ' ಎಂಬ ಯೂ ಟ್ಯೂಬ್ ನ ತಮ್ಮ ಸ್ವಂತ ಚಾನೆಲ್ ಕಾರ್ಯಕ್ರಮದ ಮೂಲಕವೂ ಅವರು ಸುದ್ದಿಯಲ್ಲಿ ಇದ್ದಾರೆ. ಆದರೆ ಬಿಗ್ ಬಾಸ್ ಮನೆಯೊಳಗೆ ಎಷ್ಟು ದಿನ ರವಿ ಬೆಳಗೆರೆ ಇರಬಲ್ಲರು ಎಂಬುದು ಸದ್ಯದ ಪ್ರಶ್ನೆ.

Bigg Boss Kannada 7: ದೊಡ್ಮನೆ ಟಿಕೆಟ್ ಪಡೆದ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಇಲ್ಲಿದೆ

ಬಿಗ್ ಬಾಸ್ ನ ಈ ಹಿಂದಿನ ಅವತರಣಿಕೆಯಲ್ಲಿ ರವಿ ಬೆಳಗೆರೆ ಅವರ ಮಗಳು ಭಾವನಾ ಬೆಳಗೆರೆ ಸಹ ಭಾಗವಹಿಸಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಬಿಗ್ ಬಾಸ್ ಮನೆಯೊಳಗೆ ಜಗಳ- ವಾಗ್ವಾದ, ರಂಪ- ರಾದ್ಧಾಂತಗಳು ನೋಡುತ್ತಾ ಬಂದಿದ್ದೇವೆ. ಇಂಥ ಸನ್ನಿವೇಶದಲ್ಲಿ ರವಿ ಬೆಳಗೆರೆ ಪ್ರವೇಶದಿಂದ ಈ ರಿಯಾಲಿಟಿ ಶೋ ಇನ್ನಷ್ಟು ರಂಗೇರುವುದರಲ್ಲಿ ಅನುಮಾನ ಇಲ್ಲ.

Journalist Ravi Belagere In To Bigg Boss Kannada Contest

ಆದರೆ, ಬಿಗ್ ಬಾಸ್ ಮನೆಯ ಶಿಸ್ತು, ಊಟ- ತಿಂಡಿ, ಟಾಸ್ಕ್ ಗಳು... ಇವೆಲ್ಲವುಗಳಿಗೆ ರವಿ ಬೆಳಗೆರೆ ಅವರು ಒಗ್ಗಿಕೊಳ್ಳಲು ಸಾಧ್ಯವಾ? ಅಕ್ಟೋಬರ್ ಹದಿಮೂರನೇ ತಾರೀಕಿನ ಭಾನುವಾರದಂದು ಸ್ಪರ್ಧಿಗಳು ಬಿಗ್ ಬಾಸ್ ಮನೆಗಳು ಮನೆಯೊಳಗೆ ಪ್ರವೇಶ ಮಾಡಲಿದ್ದು, ಆ ನಂತರ ಉತ್ತರ ಸಿಗಲಿದೆ.

ಅಂದ ಹಾಗೆ, ಬಿಗ್ ಬಾಸ್ ಸ್ಪರ್ಧಿಯಾಗಿ ರವಿ ಬೆಳಗೆರೆ ಅವರು ಮನೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಬಂದಾಗ, ಈ ಬಗ್ಗೆ ಅವರನ್ನೇ ಒನ್ ಇಂಡಿಯಾ ಕನ್ನಡದಿಂದ ಪ್ರಶ್ನಿಸಲಾಗಿತ್ತು. ಆಗ ತಾವು ಸ್ಪರ್ಧೆ ಮಾಡುತ್ತಿಲ್ಲ ಎಂದು ತಿಳಿಸಿದ್ದರು. ಶುಕ್ರವಾರದಂದು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆವು. ಆದರೆ ಸಾಧ್ಯವಾಗಲಿಲ್ಲ.

ಬಹುತೇಕ ಎಲ್ಲ ಕ್ರಿಯೇಟಿವ್ ಕ್ಷೇತ್ರಗಳಲ್ಲಿ ತಮ್ಮದೊಂದು ಛಾಪು ಮೂಡಿಸಿರುವ ರವಿ ಬೆಳಗೆರೆ ಅವರು ಬಿಗ್ ಬಾಸ್ ಗೆ ಸ್ಪರ್ಧೆ ಮಾಡುವುದನ್ನು ನಮ್ಮದೇ ಮೂಲಗಳು ಖಚಿತಪಡಿಸಿವೆ. ಅವರ 'ಬಿಗ್ ಬಾಸ್' ಪ್ರವೇಶದ ಹಿಂದಿನ ಲೆಕ್ಕಾಚಾರಗಳು ಏನಿದೆಯೋ? ಆದರೂ ಅವರಿಗೆ 'ಬೆಸ್ಟ್ ಆಫ್ ಲಕ್'.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+