Namma Metro: ಹಳದಿ ಮೆಟ್ರೋ ಮಾರ್ಗದ ಹಳಿಗೆ ಹಾರಿ ಜೀವಬಿಟ್ಟ ಪತ್ರಕರ್ತ, ಸಂಚಾರ ವ್ಯತ್ಯಯ, ಟಿಕೆಟ್ ಹಣ ಮರುಪಾವತಿ

ಬೆಂಗಳೂರು: ನಮ್ಮ ಮೆಟ್ರೋ ಜಾಲ ಮತ್ತೊಂದು ಆತ್ಮಹತ್ಯೆ ಘಟನೆಗೆ ಸಾಕ್ಷಿಯಾಗಿದೆ. ಹಳದಿ ಮಾರ್ಗದಲ್ಲಿ ರೈಲು ಬರುವುದನ್ನು ನೋಡಿ ಹಳಿಗೆ ಜಿಗಿದ ಪತ್ರಕರ್ತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಜೆ 5.55ಕ್ಕೆ ಸಂಭವಿಸಿದೆ. ವ್ಯಕ್ತಿಯನ್ನು ಪತ್ರಕರ್ತನಾಗಿದ್ದು, ಆರ್ಥಿಕ ಸಮಸ್ಯೆಯಿಂದ ಈ ರೀತಿಯ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಪೊಲೀಸರ ಪ್ರಕಾರ, ಆನ್‌ಲೈನ್ ಪೋರ್ಟಲ್‌ನಲ್ಲಿ ಕೆಲಸ ಮಾಡುತ್ತಿದ್ದ ರಾಯಚೂರು ಮೂಲದ 37 ವರ್ಷದ ರಾಜೇಶ್ ಹಿರೇಮಠ ಅವರು ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನ್ಯೂಸ್ ಫಸ್ಟ್ ಪ್ರೈಮ್ ಯೂಟ್ಯೂಬ್ ಚಾನಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದರು. ಆರ್ಥಿಕವಾಗಿ ಭಾರೀ ಸಂಕಷ್ಟ ಎದುರಿಸುತ್ತಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ಅವರು ಆತ್ಮಹತ್ಯೆ ನಿರ್ಧಾರ ಮಾಡಿದ್ದರು ಎಂದು ತಿಳಿದು ಬಂದಿದೆ.

Journalist Dies

ಹಳದಿ ಮಾರ್ಗದ ಹುಸ್ಕೂರು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪತ್ರಕರ್ತ ರಾಜೇಶ್ ಹಳಿಗೆ ಜಿಗಿಯುತ್ತಿದ್ದಂತೆ ಅವರ ರಕ್ಷಣೆಗಾಗಿ ನಡೆದ ಎಲ್ಲ ಕಾರ್ಯಾಚರಣೆಗಳು ನಡೆಸಲಾಯಿತಾದರೂ ವಿಫಲವಾದವು. ಘಟನೆಯಿಂದಾಗಿ ಕೆಲವು ಗಂಟೆಗಳ ಕಾಲ ಮಾರ್ಗದ ಇತರ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಯಿತು. ಟಿಕೆಟ್ ಪಡೆದವರಿಗೆ ಇಂದು ಮಂಗಳವಾರ ಡಿಜಿಟಲ್ ಮರುಪಾವತಿ ಆಗಲಿದೆ.

ರಾಜೇಶ್ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಆವರ ದೇಹ ಹೊರ ತೆಗೆಯಲು ಮೆಟ್ರೋ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ಇಂತಹ ಘಟನೆ ಇದೇ ಮೊದಲೇನಲ್ಲ. ಸರ್ವ ಪ್ರಯತ್ನಗಳ ಬಳಿಕವು ಆತ ಮೃತಪಟ್ಟರು. ಹಳದಿ ಮಾರ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೊದಲ ಘಟನೆ ಇದಾಗಿದೆ.

ಸೋಮವಾರ ಸಂಜೆ ಸುಮಾರು 17:50 ಗಂಟೆಗೆ ಹಳದಿ ಮಾರ್ಗದ ಹುಸ್ಕೂರು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಪ್ಲಾಟ್‌ಫಾರ್ಮ್ ಗೆ ಸಮೀಪಿಸುತ್ತಿದ್ದ ಮೆಟ್ರೋ ರೈಲಿನ ಮುಂದೆ ಹಳಿ ಮೇಲೆ ಜಿಗಿದು ಸಾವಿಗೀಡಾಗಿದ್ದಾರೆ. ಇವರ ಯಾರು, ಎಲ್ಲಿಯವರು, ಹೆಸರು ವಿಳಾಸದ ಸಂಪೂರ್ಣ ಮಾಹಿತಿ ತಿಳಿಯಬೇಕಿದೆ.

ತುರ್ತು ಬ್ರೇಕ್ ಹಾಕಿದರೂ ಉಳಿಯಲಿಲ್ಲ!

ಅಪ್‌ಲೈನ್ ಹಳಿಯ ಮೇಲೆ ಪ್ರಯಾಣಿಕನನ್ನು ಗಮನಿಸಿದ ರೈಲು ನಿರ್ವಾಹಕರು ತಕ್ಷಣ ತುರ್ತು ಬ್ರೇಕ್ ಹಾಕಿದ್ದಾರೆ. ತ್ವರಿತ ಕ್ರಮದ ಕೈಗೊಂಡರೂ ಸಹಿತ ಪ್ರಯಾಣಿಕರೊಬ್ಬರು (ರಾಜೇಶ್) ರೈಲಿನಡಿಗೆ ಸಿಲುಕಿದ್ದಾರೆ. ಇದಾಗುತ್ತಿದ್ದಂತೆ ರೈಲು ನಿರ್ವಾಹಕರು ಕೂಡಲೇ ಕಾರ್ಯಾಚರಣೆ ನಿಯಂತ್ರಣ ಕೇಂದ್ರಕ್ಕೆ (OCC) ಮಾಹಿತಿ ನೀಡಿದ್ದಾರೆ. ತಕ್ಷಣವೇ ಆತನ ರಕ್ಷಣೆಗೆ ಅಗತ್ಯ ಎಲ್ಲಾ ತುರ್ತು ಕಾರ್ಯಾಚರಣೆಗಳನ್ನು ಆರಂಭಿಸಲಾಗಿದೆ. ಘಟನಾ ಸ್ಥಳದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿ, ನಿಲ್ದಾಣದ ಸಿಬ್ಬಂದಿ ಹಾಗೂ ಮೆಟ್ರೋ ಭದ್ರತಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ವ್ಯಕ್ತಿ ಜಿಗಿದ ಸ್ಥಳಕ್ಕೆ ದೌಡಾಯಿಸಿದ್ದಾರೆ. ಇತ್ತ ಪೊಲೀಸರಿಗೂ ಕೂಡಲೇ ಮಾಹಿತಿ ನೀಡಲಾಯಿತು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿದೆ.

ಘಟನೆ ನಡೆದ ಪ್ಲಾಟ್‌ಫಾರ್ಮ್ ಸುರಕ್ಷಿತಗೊಳಿಸಿ, ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಇತರ ಅಧಿಕಾರಿಗಳ ಸಮನ್ವಯದೊಂದಿಗೆ ಅಗತ್ಯ ರಕ್ಷಣಾ ಮತ್ತು ಮೃತದೇಹ ತೆರವು ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ. ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಂದ ಘಟನೆಯ ಕುರಿತು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತ ಹಳದಿ ಮಾರ್ಗದಲ್ಲಿ ಸಂಚಾರಕ್ಕೆ ಮುಂದಾದ ಎಲ್ಲ ಪ್ರಯಾಣಿಕರಿಗೆ ನಿರಂತರವಾಗಿ ಮಾಹಿತಿ ಒದಗಿಸಲಾಯಿತು. ಮೆಟ್ರೋ ನಿಲ್ದಾಣಗಳು ಹಾಗೂ ರೈಲುಗಳ ಒಳಗೆ ಧ್ವನಿವರ್ಧಕ ಮೂಲಕ ಮಾಹಿತಿ ನೀಡಲಾಯಿತು. ಪ್ರಯಾಣಿಕರ ಮಾಹಿತಿ ಪ್ರದರ್ಶನ ವ್ಯವಸ್ಥೆಗಳಲ್ಲಿ (PIDS) ಮಾಹಿತಿಯನ್ನು ನಿಯಮಿತ ನೀಡಲಾಯಿತು. ನಿಲ್ದಾಣದ ಸಿಬ್ಬಂದಿ ನಿಯಂತ್ರಿತ ರೈಲು ಸೇವೆಗಳು ಹಾಗೂ ಪರ್ಯಾಯ ಸಾರಿಗೆ ವ್ಯವಸ್ಥೆ ಬಳಸಿಕೊಂಡು ಪ್ರಯಾಣ ಮಾಡುವಂತೆ ತಿಳಿಸಲಾಯಿತು ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಲವು ಪ್ರಯಾಣಿಕರಿಗೆ ಟಿಕೆಟ್ ದರ ಮರು ಪಾವತಿಯಾಗಿದ್ದು, ಡಿಜಿಟಲ್ ಟಿಕೆಟ್ ದರ ಇಂದು ಮರುಪಾವತಿ ಆಗಲಿದೆ.

ರೈಲುಗಳಲ್ಲಿ ಸಂಚಾರ ವ್ಯತ್ಯಯ

ಈ ಘಟನೆಯಿಂದಾಗಿ ಹಳದಿ ಮಾರ್ಗದ ಮೆಟ್ರೋ ರೈಲು ಸೇವೆಗಳಲ್ಲಿ 17:55 ಗಂಟೆಯಿಂದ 20:00 ಗಂಟೆಯವರೆಗೆ ತಾತ್ಕಾಲಿಕ ವ್ಯತ್ಯಯ ಉಂಟಾಯಿತು. ಈ ಅವಧಿಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಮತ್ತು ರಾಷ್ಟ್ರೀಯ ವಿದ್ಯಾಲಯ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರವೇ ಮೆಟ್ರೋ ರೈಲುಗಳು ಸಂಚರಿಸಿದವು.

ರಕ್ಷಣಾ ಮತ್ತು ತೆರವು ಕಾರ್ಯಾಚರಣೆಗಳು, ನಿಯಮಾನುಸಾರ ಕೈಗೊಳ್ಳಬೇಕಾದ ಪ್ರಕ್ರಿಯೆಗಳು, ಹಳಿ ತೆರವು ಹಾಗೂ ಸುರಕ್ಷತಾ ಪರಿಶೀಲನೆ ಪೂರ್ಣಗೊಳಿಸಿದ ಬಳಿಕ 19:42 ಗಂಟೆಗೆ ವಿದ್ಯುತ್ ಸರಬರಾಜು ಪುನಃಸ್ಥಾಪಿಸಲಾಯಿತು. ಹಳದಿ ಮಾರ್ಗದ ರೈಲು ಕಾರ್ಯಾಚರಣೆ, ಪ್ರಯಾಣಿಕರ ಸಂಚಾರ ಹಾಗೂ ಜನಸಂದಣಿ ಪರಿಸ್ಥಿತಿ ಸೇರಿದಂತೆ ಸಂಪೂರ್ಣವಾಗಿ 19:57 ಗಂಟೆಯ ವೇಳೆಗೆ ಸಹಜ ಸ್ಥಿತಿಗೆ ಬಂದಿದ್ದು,ಆಗ ಮೆಟ್ರೋ ಸಂಚಾರ ಪುನಃಸ್ಥಾಪಿಸಲಾಯಿತು ಎಂದು BMRCL ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+