ಬೆಂಗಳೂರು ಟ್ರಾಫಿಕ್ ನಿರ್ವಹಣೆ ಅಭಿವೃದ್ಧಿಗೆ ಕೈಜೋಡಿಸಿದ ಜಪಾನ್
ಬೆಂಗಳೂರು, ಡಿಸೆಂಬರ್ 20: ಬೆಂಗಳೂರಿನ ಟ್ರಾಫಿಕ್ ಮಾಹಿತಿ ಮತ್ತು ನಿರ್ವಹಣೆ ವ್ಯವಸ್ಥೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಂದು ಭಾರತ ಮತ್ತು ಜಪಾನ್ ಒಪ್ಪಂದಕ್ಕೆ ಸಹಿ ಹಾಕಿವೆ.
ಈ ಒಪ್ಪಂದದ ಅನ್ವಯ ಜಪಾನ್ ರೂ. 72.86 ಕೋಟಿ (1.276 ಬಿಲಿಯನ್ ಯೆನ್) ನೆರವು ನೀಡಲಿದೆ. ಟ್ರಾಫಿಕ್ ನಿರ್ವಹಣೆಯ ಸುಧಾರಣೆಗಾಗಿ ಈ ನೆರವು ಬಳಕೆಯಾಗಲಿದೆ.
ಭಾರತದ ಪರವಾಗಿ ಆರ್ಥಿಕ ವ್ಯವಹಾರಗಳ ಇಲಾಖೆ ಜಂಟಿ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಮತ್ತು ಭಾರತದ ಜಪಾನ್ ಅಂಬಾಸಿಡರ್ ಕೆನ್ಜಿ ಹಿರಮಸ್ತು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಈ ಯೋಜನೆಯ ಅನ್ವಯ 'ಅಡ್ವಾನ್ಸ್ಡ್ ಟ್ರಾಫಿಕ್ ಇನ್ಫಾರ್ಮೇಷನ್ ಆ್ಯಂಡ್ ಮ್ಯಾನೇಜ್ ಮೆಂಟ್ ಸಿಸ್ಟಂ (ATIMS)'ಗಳನ್ನು ಬೆಂಗಳೂರು ನಗರದಲ್ಲಿ ಜಾರಿಗೆ ತರಲಾಗುತ್ತದೆ. ಇದರಲ್ಲಿ ನೂತನ ಸಿಗ್ನಲ್ ವ್ಯವಸ್ಥೆಯ ಅನುಷ್ಠಾನ, ನಗರದ ಪ್ರಮುಖ ಪ್ರದೇಶಗಳಲ್ಲಿ ವಾಹನ ದಟ್ಟಣೆ ಅಳೆಯಲು ಸೆನ್ಸಾರ್ ಗಳ ಅಳವಡಿಕೆ ಸೇರಿದೆ.
ಈ ಎಲ್ಲಾ ಕ್ರಮಗಳ ಮೂಲಕ ನಗರದ ಟ್ರಾಫಿಕ್ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ, ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ.











Click it and Unblock the Notifications