2020ರಲ್ಲಿ ಬೆಂಗಳೂರಿನಿಂದ ಟೋಕಿಯೋಗೆ ನೇರ ವಿಮಾನ

ಬೆಂಗಳೂರು, ಜನವರಿ 23: 2020ರ ವೇಳೆಗೆ ಟೋಕಿಯೋ ಹಾಗೂ ಬೆಂಗಳೂರಿನ ನಡುವೆ ನೇರ ವಿಮಾನ ಹಾರಾಟ ಸೇವೆ ಆರಂಭವಾಗಲಿದೆ ಎಂದು ಜಪಾನ್ ಏರ್​ಲೈನ್ಸ್ ಲಿಮಿಟೆಡ್​ (ಜೆಎಎಲ್​) ಬುಧವಾರದಂದು ಪ್ರಕಟಿಸಿದೆ.

2020ರ ಬೇಸಿಗೆ ಅವಧಿಯಲ್ಲಿ ಬೆಂಗಳೂರು- ಟೋಕಿಯೋ ನಡುವೆ ತಡೆರಹಿತ ನೇರ ವಿಮಾನಗಳು ಜೆಎಎಲ್ ಸಂಸ್ಥೆಯಿಂದ ಹಾರಾಡಲಿವೆ. ಸದ್ಯ ಟೋಕಿಯೋ- ನವದೆಹಲಿ- ಬೆಂಗಳೂರು ಮೂಲಕ ವಾಯುಯಾನ ಸೇವೆ ಲಭ್ಯವಿದೆ. ಬೋಯಿಂಗ್​ 787-8 ಸುದೀರ್ಘ ಒಂಬ್ಬತ್ತು ಗಂಟೆಗಳ ಪ್ರಯಾಣದ ಹಾರಾಟ ನಡೆಸುತ್ತಿದೆ ಎಂದು ಜೆಎಎಲ್ ತಿಳಿಸಿದೆ.

Japan Airlines to start Bengaluru-Tokyo service from 2020

ಬೆಂಗಳೂರು ಐಟಿ/ಬಿಟಿ, ಟೆಲಿಕಾಂ ಹಬ್ ಎಂದು ಗುರುತಿಸಿಕೊಂಡಿದೆ. ಟೋಕಿಯೋದಿಂದ ನೇರ ವಿಮಾನ ಸಂಪರ್ಕ ಕಲ್ಪಿಸಿದರೆ ಎರಡೂ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿಗೆ ಸಹಾಯಕವಾಗಲಿದೆ. ಭಾರತ- ಜಪಾನ್​ನ ಪ್ರವಾಸೋದ್ಯಮ ಅಭಿವೃದ್ಧಿಗೂ ಪೂರಕವಾಗಲಿದೆ. ಉದ್ಯೋಗ ಸೃಷ್ಟಿ ಉದ್ದೇಶದಿಂದಲೂ ಈ ಸೇವೆ ಉಪಯೋಗವಾಗಲಿದೆ ಎಂದು ಬೆಂಗಳೂರಿನಲ್ಲಿರುವ ಜಪಾನ್ನಿನ ಕೌನ್ಸಲ್ ಜನರಲ್ ಟಕಾಯುಕಿ ಕಿತಾಗವಾ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+