ಇಸ್ರೋದಿಂದ ಅಮೆರಿಕದ ನ್ಯಾನೋ, ಮೈಕ್ರೋ ಉಪಗ್ರಹ ಉಡಾವಣೆ

ಬೆಂಗಳೂರು, ಆಗಸ್ಟ್ 05: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2015-16ರ ಸಾಲಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನ್ಯಾನೋ ಹಾಗೂ ಮೈಕ್ರೋ ಉಪಗ್ರಹಗಳನ್ನು ಉಡಾವಣೆ ಮಾಡಲು ಯೋಜನೆ ಹಾಕಿಕೊಂಡಿದೆ. ಮೊಟ್ಟ ಮೊದಲ ಬಾರಿಗೆ ಅಮೆರಿಕದ ಉಪಗ್ರಹವನ್ನು ಇಸ್ರೋ ಗಗನಕ್ಕೆ ಹಾರಿಬಿಡಲಿದೆ.

2015-16ನೇ ಸಾಲಿನಲ್ಲಿ ಅಮೆರಿಕದ 9 ನ್ಯಾನೋ ಉಪಗ್ರಹಗಳ ಉಡಾವಣೆಯ ಗುತ್ತಿಗೆಯನ್ನು ಇಸ್ರೋದ ವಾಣಿಜ್ಯ ಅಂಗಸಂಸ್ಥೆ ಆಂಟ್ರಿಕ್ಸ್(Antrix) ಕಾಪೋರೇಷನ್ ಲಿಮಿಟೆಡ್ ಪಡೆದುಕೊಂಡಿದೆ ಎಂದು ಇಸ್ರೋದ ಸಾರ್ವಜನಿಕ ಸಂಪರ್ಕ ಅಧಿಕಾರಿ ದೇವಿಪ್ರಸಾದ್ ಕಾರ್ನಿಕ್ ಪಿಟಿಐಗೆ ತಿಳಿಸಿದ್ದಾರೆ.

ISRO to launch 9 nano/micro American satellites during 2015-16

ಪಿಎಸ್​ಎಲ್​ ವಿ(Polar Satellite Launch Vehicle) ಉಡಾಹಕವನ್ನು ಬಳಸಿಕೊಂಡು ಈ ನ್ಯಾನೋ ಹಾಗೂ ಮೈಕ್ರೋ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತದೆ. ಇಸ್ರೋ ಸುಮಾರು 19 ರಾಷ್ಟ್ರಗಳ 45 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ದಾಖಲೆ ಹೊಂದಿದೆ.

ಮೊಟ್ಟ ಮೊದಲ ಪುನರ್ಬಳಕೆ ಉಡಾಹಕ (Reusable Launch Vehicle-Technology Demonstration (RLV-TD)) ದ ಪ್ರಾಯೋಗಿಕ ಹಾರಾಟ ನಡೆಸಲಾಗುವುದೆಂದು ತಿರುವನಂತಪುರದ ವಿಕ್ರಮ್​ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಡಾ. ಕೆ. ಶಿವನ್ ತಿಳಿಸಿದ್ದಾರೆ.

ಸುಮಾರು 250 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣವಾಗಿ ದೇಶಿಯವಾಗಿ ನಿರ್ಮಾಣಗೊಂಡಿರುವ 2.5 ಟನ್ ತೂಕದ ಜಿಎಸ್​ಎಲ್​ವಿ ಡಿ6 ಉಡಾಹಕ ಆಗಸ್ಟ್ ತಿಂಗಳ ಕೊನೆಯಲ್ಲಿ ಉಡಾವಣೆಗೊಳ್ಳಲಿದೆ. ಉಪಗ್ರಹವನ್ನು ನಿಗದಿತ ಕಕ್ಷೆಗೆ ಸೇರಿಸುವ2 ಹಂತದ, ಸಂಪೂರ್ಣವಾಗಿ ಪುನರ್ಬಳಕೆ ಮಾಡಬಹುದಾದ ಉಡಾಹಕ ಇದಾಗಿದೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+