• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯದಲ್ಲಿ ಪೊಲೀಸ್ ಇಲಾಖೆ ಹೆಚ್ಚು ಭ್ರಷ್ಟವೇ?

By Kiran B Hegde
|

ಬೆಂಗಳೂರು, ನ. 27: ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ. ಈ ವರ್ಷ ನವೆಂಬರ್ 25ರ ವರೆಗೆ 843 ನಾಗರಿಕರು ಸುಮಾರು 8.67 ಕೋಟಿ ರೂ.ಗಳಷ್ಟು ಹಣವನ್ನು ಖಾಕಿಧಾರಿಗಳಿಗೆ ನೀಡಿದ್ದಾರೆ.

ಈ ವಿಷಯ ipaidabribe ಎಂಬ ವೆಬ್‌ಸೈಟ್ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಈ ವೆಬ್ ಸೈಟ್‌ನಲ್ಲಿ ಅನೇಕರು ತಾವು ಲಂಚ ನೀಡಿದ ಇಲಾಖೆಗಳಲ್ಲಿ ಪೊಲೀಸ್ ಇಲಾಖೆಯ ಹೆಸರನ್ನು ಹೆಚ್ಚು ಹೇಳಿದ್ದಾರೆ. [ಬೆಳಗಾವಿಯಲ್ಲಿ ಪೊಲೀಸರಿಗೆ ಒಂದು ದಿನ]

ರಾಜ್ಯದ 37 ಇಲಾಖೆಗಳು ಹಾಗೂ ಸೇವಾ ಸಂಸ್ಥೆಗಳನ್ನು ಭ್ರಷ್ಟಾಚಾರ ಕುರಿತು ಸಮೀಕ್ಷೆ ನಡೆಸಲು ಹೆಸರಿಸಲಾಗಿತ್ತು. ಈ ಸಮೀಕ್ಷೆಯಲ್ಲಿ ಭಾಗವಹಿಸಿದ 1,062 ಜನರು ಒಟ್ಟು 3.75 ಕೋಟಿ ರೂ.ಗಳನ್ನು ಪೊಲೀಸರಿಗೆ ಲಂಚವಾಗಿ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. 7,148 ಜನ 2010ರ ವರೆಗೆ ಪೊಲೀಸರಿಗೆ ಸುಮಾರು 15.12 ಕೋಟಿ ರೂ. ನೀಡಿರುವುದಾಗಿ ತಿಳಿಸಿದ್ದಾರೆ. [ಎಸ್ಎಂಎಸ್ ಮೂಲಕ ದೂರು ನೀಡಿ]

ಸಾರಿಗೆ ಇಲಾಖೆಗೆ 2ನೇ ಸ್ಥಾನ: ಲಂಚ ಪಡೆಯುವುದರಲ್ಲಿ ಸಾರಿಗೆ ಇಲಾಖೆಗೆ ಭ್ರಷ್ಟಾಚಾರದಲ್ಲಿ ಎರಡನೇ ಸ್ಥಾನ ಸಿಕ್ಕಿದೆ. 261 ಜನ ಈ ವರ್ಷ ತಾವು ಅಧಿಕಾರಿಗಳಿಗೆ 3.12 ಲಕ್ಷ ರೂ.ಗಳನ್ನು ನೀಡಿರುವುದಾಗಿ ತಿಳಿಸಿದ್ದಾರೆ. ipaidabribe ವೆಬ್ ಸೈಟ್ ಆರಂಭವಾದ ಮೇಲೆ 1,777 ಜನ ಹಣ ನೀಡಿದ್ದನ್ನು ಹೇಳಿಕೊಂಡಿದ್ದು, ಈ ಮೊತ್ತ 58.28 ಲಕ್ಷ ರೂ. ಆಗುತ್ತದೆ.

ಮುದ್ರಾಂಕ ಮತ್ತು ನೋಂದಣಿ ಇಲಾಖೆ ಹಾಗೂ ಸೀಮಾ ಸುಂಕ ಮತ್ತು ಅಬಕಾರಿ ಇಲಾಖೆಗಳು ಕಡಿಮೆ ಭ್ರಷ್ಟಾಚಾರ ಅಂಶ ದಾಖಲಿಸಿವೆ. [20 ಪೊಲೀಸರಿಗೆ ರಾಷ್ಟ್ರಪತಿ ಪದಕ]

ಮತ್ತೆ ಕರ್ನಾಟಕಕ್ಕೆ ಪ್ರಥಮ ಸ್ಥಾನ: ಆದರೆ, ದೇಶದಲ್ಲಿಯೇ ಕರ್ನಾಟಕವು ಸತತ ಎರಡನೇ ಬಾರಿಗೆ ಅತ್ಯಂತ ಭ್ರಷ್ಟ ರಾಜ್ಯವಾಗಿ ಗುರುತಿಸಿಕೊಂಡಿದೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ, ಆಂದ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿವೆ.

2001ರಲ್ಲಿ ಆರಂಭ: 2001ರಲ್ಲಿ ರಮೇಶ್ ರಾಮನಾಥನ್ ಹಾಗೂ ಸ್ವಾತಿ ರಾಮನಾಥನ್ ಅವರಿಂದ ಆರಂಭವಾದ ಜನಾಗ್ರಹ ವೇದಿಕೆ ಸಾರ್ವಜನಿಕರಿಗೆ ಆಡಳಿತದಲ್ಲಿನ ಲೋಪ ದೋಷಗಳನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದೆ. ಆಡಳಿತದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಹೆಚ್ಚು ಒತ್ತು ನೀಡುವ ಜನಾಗ್ರಹ, ಈಗ ವೆಬ್ ಸೈಟ್ [http://ipaidabribe.com/]ಮೂಲಕ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಆರಂಭಿಸಿದ್ದರು. [ಭ್ರಷ್ಟರ ವಿರುದ್ಧ ಜನಾಗ್ರಹ ಹೋರಾಟ]

ಇದೇ ಐಡಿಯಾ ಬಳಸಿಕೊಂಡು ಜನಾಗ್ರಹ ಆರಂಭಿಸಿದ್ದ 'I Paid a Bribe' ಮಾದರಿಯಲ್ಲೇ "I Made a Bribe" ಎಂಬ ವೆಬ್ ಆಂದೋಲನವನ್ನು ಚೀನಿಯರು ಶುರು ಮಾಡಿದ್ದರು. ಪ್ರಜಾಪ್ರಭುತ್ವ ಆಧಾರಿತ ಈ ಹೋರಾಟ ಕಮ್ಯೂನಿಸ್ಟ್ ದೇಶಕ್ಕೆ ರಫ್ತು ಆಗುತ್ತಿರುವುದು ಸಂತೋಷದ ವಿಷಯ ಎಂದು ಜನಾಗ್ರಹದ ವೆಬ್ ಸಂಚಾಲಕ ಟಿಆರ್ ರಘುನಂದನ್ ಪ್ರತಿಕ್ರಿಯಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Web portal www.ipaidabribe.com says police is the highest corrupt department in Karnataka. And Karnataka stays in the most corrupted states in nation for the second time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more