ಐಪಿಎಲ್ ಬೆಟ್ಟಿಂಗ್ ಆಪ್ ಪ್ರಕರಣ: ಸೋನು ಶ್ರೀನಿವಾಸಗೌಡ ಸೇರಿ ಹಲವು ರೀಲ್ಸ್ ಸ್ಟಾರ್‌ಗಳ ವಿಚಾರಣೆ
ಬೆಂಗಳೂರು ಏಪ್ರಿಲ್ 8: ರೀಲ್ಸ್ ಸ್ಟಾರ್ ಆಗಿದ್ದೇ ಆಗಿದ್ದು ಸೋನು ಶ್ರೀನಿವಾಸಗೌಡ ಮೇಲೆ ಒಂದಿಲ್ಲಾ ಒಂದು ಆರೋಪ ಕೇಳಿ ಬರುತ್ತಲೇ ಇವೆ. ಕನ್ನಡದ ಬಿಗ್ ರಿಯಾಲಿಟಿ ಶೂ ಬಿಗ್‌ಬಾಸ್ ಮೂಲಕ ಜನಪ್ರಿಯತೆ ಪಡೆದ ಸೋನು ಶ್ರೀನಿವಾಸಗೌಡ ಈಗ ರೀಲ್ಸ್ ಸ್ಟಾರ್‌ಗಳ ಪಟ್ಟಿಯಲ್ಲಿ ಮುಂಚುಣಿಯಲ್ಲಿ ಇದ್ದಾರೆ. ಇದೀಗ ಅವರಿಗೆ ಹೊಸದೊಂದು ಸಂಕಷ್ಟ ಶುರುವಾಗಿದೆ.
ಹೌದು ಬೆಟ್ಟಿಂಗ್ ಆಪ್ ಅನುಮತಿ ಇಲ್ಲದೆ ಪ್ರಮೋಟ್ ಮಾಡಿದ ಆರೋಪದ ಮೇಲೆ ಸೋನು ಶ್ರೀನಿವಾಸಗೌಡ ಅವರ ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ. ಸೋನು ಮಾತ್ರವಲ್ಲ ಬೆಟ್ಟಿಂಗ್ ಆಪ್ ಪ್ರಮೋಟ್ ವಿಚಾರದಲ್ಲಿ 100ಕ್ಕೂ ಹೆಚ್ಚು ರೀಲ್ಸ್ ಸ್ಟಾರ್‌ಗಳನ್ನು ಸೈಬರ್ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ರೀಲ್ಸ್ ಸ್ಟಾರ್‌ಗಳು ಅನುಮತಿ ಇಲ್ಲದೆ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಐಪಿಎಲ್ ಬೆಟ್ಟಿಂಗ್ ಸಂಬಂಧ ಜಾಹೀರಾತು ಬಿತ್ತರಿಸಿದ್ದಾರೆ. ಇಂತಹವರನ್ನು ಪಟ್ಟಿ ಮಾಡಿ ವಕೀಲರೊಬ್ಬರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ರೀಲ್ಸ್ ಸ್ಟಾರ್‌ಗಳ ಪೇಜ್‌ನಲ್ಲಿ ಬಿತ್ತರಿಸಲಾದ ಜಾಹೀರಾತುಗಳು ಜನರಿಗೆ ವಂಚಿಸುವ ಜಾಹೀರಾತುಗಳು ಆಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹೀಗಾಗಿ ಸೈಬರ್ ಪೊಲೀಸರು ಪಟ್ಟಿ ಮಾಡಿ ನೋಟೀಸ್ ಜಾರಿ ಮಾಡಿ ರೀಲ್ಸ್ ಸ್ಟಾರ್‌ಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಸೈಬರ್ ಪೊಲೀಸರು ನೋಟೀಸ್ ಜಾರಿ ಮಾಡುತ್ತಿದ್ದಂತೆ ರೀಲ್ಸ್ ಸ್ಟಾರ್‌ಗಳು ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ಹಾಜರಾದವರಲ್ಲಿ ಸೋನು ಶ್ರೀನಿವಾಸಗೌಡ ಸೇರಿದಂತೆ ವರುಣ್ ಆರಾಧ್ಯ, ದಚ್ಚು, ದೀಪಕ್‌ಗೌಡ ಇದ್ದಾರೆ. ವಿಚಾರಣೆ ವೇಳೆ ರೀಲ್ಸ್ ಸ್ಟಾರ್‌ಗಳು ಸೈಬರ್ ಪೊಲೀಸರ ಮುಂದೆ ಕ್ಷಮೆ ಕೇಳಿದ್ದಾರೆ.
ಜೊತೆಗೆ ತಮಗೆ ಹಾಗೂ ಜನರಿಗೆ ಈ ಜಾಹಿರಾತಿನಿಂದ ತೊಂದರೆಯಾಗಲಿದೆ ಎಂದು ಅರಿವೇ ಇರಲಿಲ್ಲ. ಇನ್ಮುಂದೆ ಇಂತಹ ಜಾಹೀರಾತುಗಳನ್ನು ನಾವು ಪ್ರಕಟಿಸುವುದಿಲ್ಲ ಎಂದು ಹೇಳಿದ್ದಾರೆ. ತಮಗೆ ತಮ್ಮ ತಪ್ಪಿನ ಬಗ್ಗೆ ಅರಿವಾಗಿದೆ. ಇನ್ಮುಂದೆ ಇಂತಹ ತಪ್ಪು ಆಗದೇ ಇರುವಂತೆ ನಾವು ನೋಡಿಕೊಳ್ಳುತ್ತೇವೆ ಎಂದಿದ್ದಾರೆ.
ಜೊತೆಗೆ ಜಾಹೀರಾತುಗಳನ್ನೂ ಡಿಲೀಟ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಪೊಲೀಸರು ಇಂತಹ ತಪ್ಪು ಮರುಕಳಿಸಿದರೆ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆಂದು ತಿಳಿದು ಬಂದಿದೆ.

ಈ ಹಿಂದೆ ಸೋನು ಗೌಡ ರೀಲ್ಸ್ ಮಾಡಲು ಬಡ ಹುಡುಗಿಯನ್ನು ಬಳಸಿಕೊಂಡು ದುಡ್ಡು ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು. ಈ ವಿಚಾರದಲ್ಲಿ ಅವರು ಜೈಲಿಗೂ ಕೂಡ ಹೋಗಿ ಬಂದಿದ್ದಾರೆ. ಇದೀಗ ಅವರ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿದ್ದು, ಇದರಲ್ಲಿ ಪೊಲೀಸರು ಅವರಿಗೆ ವಾರ್ನಿಂಗ್ ಮಾತ್ರ ಕೊಟ್ಟಿದ್ದಾರೆ. ಆದರೆ ಮುಂದೆ ಇಂತಹ ಘಟನೆಗಳು ನಡೆದರೆ ಸೋನು ಗೌಡ ಸಂಕಷ್ಟ ಮಾತ್ರ ತಪ್ಪಿದ್ದಲ್ಲ.












Click it and Unblock the Notifications