ಮಸಿ ಬಳಿದ ಕೇಸ್: ವಕೀಲೆ ಮೀರಾ ವಿರುದ್ಧ ಪ್ರಕರಣ, FIR ದಾಖಲಿಸಿದ ಭಗವಾನ್
ಬೆಂಗಳೂರು, ಫೆಬ್ರವರಿ 4: ಹಿರಿಯ ಸಾಹಿತಿ, ಚಿಂತಕ ಕೆ. ಎಸ್. ಭಗವಾನ್ ಮುಖಕ್ಕೆ ನ್ಯಾಯಾಲಯದ ಆವರಣದಲ್ಲಿ ಮಸಿ ಬಳಿದ ವಕೀಲೆ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ 2ನೇ ಎಸಿಎಂಎಂ ನ್ಯಾಯಾಲಯದ ಆವರಣದಲ್ಲಿ ಗುರುವಾರ ಮಧ್ಯಾಹ್ನ ನಡೆದ ಈ ಘಟನೆಯ ಬಳಿಕ ನೇರ ಹಲಸೂರು ಗೇಟ್ ಠಾಣೆಗೆ ತೆರಳಿದ ಪ್ರೊ ಭಗವಾನ್ ಅವರು ವಕೀಲೆ ಮೀರಾ ರಾಘವೇಂದ್ರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿರುವ ಠಾಣಾಧಿಕಾರಿಗಳು ಮೀರಾ ವಿರುದ್ಧ ಐಪಿಸಿ ಸೆಕ್ಷನ್ 504(ಉದ್ದೇಶ ಪೂರ್ವಕವಾಗಿ ಅವಮಾನ), 506(ಜೀವ ಬೆದರಿಕೆ ಹಲ್ಲೆ), 341 (ಉದ್ದೇಶ ಪೂರ್ವಕವಾಗಿ ಅಡ್ಡಗಟ್ಟುವುದು), 323(ಸ್ವಯಂ ಪ್ರೇರಣೆಯಿಂದ ತಡೆಯೊಡ್ಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಸಿ ಬಳಿದಿದ್ದನ್ನು ಸಮರ್ಥಿಸಿಕೊಂಡ ಮೀರಾ:
ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಗೆ ಗ್ರಾಸವಾಗುತ್ತಿದ್ದ ಸಾಹಿತಿ ಪೊ ಕೆ ಎಸ್ ಭಗವಾನ್ ಅವರು ಹಿಂದೂ ಧರ್ಮದ ವಿರುದ್ಧ ಸದಾಕಾಲ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ''ಹಿಂದೂ ಧರ್ಮವೆಂಬುದೇ ಇಲ್ಲ ಹಿಂದೂ ಧರ್ಮ ಅವಮಾನಕರ, ಮಾನ ಮರ್ಯಾದೆ ಇರುವವರು ಹಿಂದು ಶಬ್ದ ಬಳಸಬಾರದು'' ಎಂದು ಹೇಳಿದ್ದರು. ಈ ಹೇಳಿಕೆ ವಿರುದ್ಧ ಐಪಿಸಿ ಸೆಕ್ಷನ್ 298, 505 ಅಡಿಯಲ್ಲಿ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೆ.

ಆದರೆ, ಈ ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಹಾಕಿದ್ದ ಪ್ರೊ ಭಗವಾನ್ ಅವರು ಮೈಸೂರಿನಿಂದ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನಂತರ ಜಾಮೀನು ಪಡೆದುಕೊಂಡು ಹೊರ ಬಂದರು. ನಾನು ಕಪ್ಪು ಮಸಿ ಬಳಿದು ತಕ್ಕಶಾಸ್ತ್ರಿ ಮಾಡಿದ್ದೇನೆ ಎಂದು ಮೀರಾ ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ
''ನನ್ನನ್ನು ಬಂಧಿಸಿ ಏನು ಬೇಕಾದರೂ ಮಾಡಿ. ಐಯಂ ರೆಡಿ ಫಾರ್ ಎವೆರಿ ಥಿಂಗ್. (ನಾನು ಎಲ್ಲಕ್ಕೂ ಸಿದ್ಧಳಾಗಿದ್ದೇನೆ). ನಾನು ಜೈಲಿಗೆ ಹೋಗಲು ಕೂಡ ರೆಡಿ. ಏನ್ಸಾರ್ ಇಷ್ಟು ವಯಸ್ಸಾಗಿದೆ. ಇನ್ನೂ ದೇವರ ಬಗ್ಗೆ ರಾಮನ ಬಗ್ಗೆ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತೀರಿ ನಾಚಿಕೆಯಾಗುವುದಿಲ್ಲವೇ ನಿಮಗೆ'' ಎಂದು ವಕೀಲೆ ಆಕ್ರೋಶದಿಂದ ಪ್ರಶ್ನಿಸಿದರು.
ಮೈಸೂರಿನಲ್ಲಿ ಭಗವಾನ್ ಮುಖಕ್ಕೆ ಮಸಿ ಎರಚಿದ ವಕೀಲೆ#Mysuru #Bhagwan pic.twitter.com/aaz0mfcu4E
— oneindiakannada (@OneindiaKannada) February 4, 2021
ನಂತರ ಭಗವಾನ್ ಅವರನ್ನು ಗನ್ ಮ್ಯಾನ್, ಕೆಲ ವಕೀಲರು ಹಾಗೂ ಪೊಲೀಸರು ಕೋರ್ಟ್ ಆವರಣದಿಂದ ಕರೆದುಕೊಂಡು ಹೋದರು.
''ನ್ಯಾಯದೇಗುಲದಲ್ಲಿ ಪ್ರಕರಣ ನಡೆಯಬಾರದಿತ್ತು. ಏನೇ ಇದ್ದರೂ ಕಾನೂನಿನ ಚೌಕಟ್ಟಿನಡಿ ಬಗೆಹರಿಸಿಕೊಳ್ಳಬೇಕು. ಇದು ಕ್ಷಮೆ ಕೋರಬೇಕಾದ ಘಟನೆ'' ಎಂದು ಫೇಸ್‌ಬುಕ್ ಲೈವ್‌ನಲ್ಲಿ ನ್ಯಾಯವಾದಿ ಜಗದೀಶ್ ಕೆ ಎನ್ ಮಹದೇವ್ ಅವರು ಬಾರ್ ಅಂಡ್ ಬೆಂಚ್ ತಾಣಕ್ಕೆ ತಿಳಿಸಿದ್ದಾರೆ. ಟ್ವಿಟ್ಟರಲ್ಲೂ ಪರ ವಿರೋಧ ಚರ್ಚೆ ನಡೆದಿದೆ.
Recommended Video
-
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications