ಭಾರತ ಸೇನೆಗೆ ಸ್ವದೇಶಿ ವಿಮಾನ ತೇಜಸ್ ಬಲ
ಬೆಂಗಳೂರು, ಡಿ.20: ಭಾರತೀಯ ವೈಮಾನಿಕ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ದಾಟಲಾಗಿದೆ. ಸ್ವದೇಶಿ ತಂತ್ರಜ್ಞಾನದೊಂದಿಗೆ ಹಗುರ ಯುದ್ಧ ವಿಮಾನ 'ತೇಜಸ್' ಎಲ್ಲಾ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡು ವಾಯುಪೇಡೆಗೆ ಪ್ರಬಲ ಅಸ್ತ್ರವಾಗಿ ಇಂದು ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಅತ್ಯುತ್ತಮ ಸಾಮರ್ಥ್ಯವುಳ್ಳ ಹಗುರ ಯುದ್ಧ ವಿಮಾನ 'ತೇಜಸ್' ನಿರ್ಮಾಣದೊಂದಿಗೆ 4ನೇ ಪೀಳಿಗೆಯ ಹಗುರ ಯುದ್ಧ ವಿಮಾನಸೃಷ್ಟಿಸುವ ಮೂಲಕ ಭಾರತ ತನ್ನ ಸಾಮರ್ಥ್ಯ ಜಗತ್ತಿಗೆ ಎತ್ತಿ ತೋರಿಸಿದೆ.
ಬೆಂಗಳೂರಿನ ಎಚ್ ಎಎಲ್ ನಲ್ಲಿ ದ್ವಿತೀಯ ಹಂತದ ಕಾರ್ಯಾಚರಣೆಯ ಪರೀಕ್ಷಾರ್ಥ ಹಾರಾಟ ಶುಕ್ರವಾರ ಯಶಸ್ಸಿಯಾಗಿದೆ. ಮಲ್ಟಿಮೋಡ್ ಕಾಂಪ್ಯಾಕ್ಟ್ ರಾಡಾರ್ (ಎಂಎಂಆರ್) ಹಗುರ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆ ಹಾಗೂ ನೌಕಾಪಡೆಗಳ ಬತ್ತಳಿಕೆಗೆ ಮತ್ತಷ್ಟು ಶಕ್ತಿ ತುಂಬಿದೆ. ಬಹುತೇಕ 2014 ರಲ್ಲಿ ಈ ಸ್ವದೇಶಿ ನಿರ್ಮಿತ ಹಗುರ ಯುದ್ಧ ವಿಮಾನ ಭಾರತೀಯ ವಾಯುಪಡೆಯಲ್ಲಿ ಕಾರ್ಯನಿರ್ವಹಣೆಗೆ ಅಣಿಯಾಗಲಿದ್ದು, ಈ ಮೂಲಕ ಸ್ವದೇಶಿ ತಂತ್ರಜ್ಞಾನದಲ್ಲಿ ಗಣನೀಯ ಯಶಸ್ಸು ಸಾಧಿಸಿದಂತಾಗಿದೆ.
ಇದು 30 ವರ್ಷಗಳ (1983-2013) ಸತತ ಸಾಧನೆಯ ಫಲವಾಗಿದ್ದು, ಕೊನೆಗೂ ಯಶಸ್ಸು ದೊರೆತಿರುವುದು ಸಂತಸದ ವಿಷಯವಾಗಿದೆ. ಇದಕ್ಕೂ ಮುನ್ನ ಲೇಹ್, ಜಾಮ್ ನಗರ್, ಗ್ವಾಲಿಯರ್, ಪಠಾಣ್ ಕೋಟ್, ಗೋವಾ ಮತ್ತಿತರೆಡೆಗಳಲ್ಲಿ ತೇಜಸ್ ಪರೀಕ್ಷೆ ನಡೆಸಲಾಗಿತ್ತು.
ವಾಯುಮಾರ್ಗದಲ್ಲಿ ಲೇಸರ್ ತಂತ್ರಜ್ಞಾನದ ಮೂಲಕ ವೈರಿಪಡೆಯ ಮೇಲೆ ಬಾಂಬ್ ದಾಳಿ ಮಾಡಿ ನಾಶಪಡಿಸಬಲ್ಲ ಸಾಮರ್ಥ್ಯ ಹೊಂದಿದೆ. ಒಂದು ತಾಸಿಗೆ ೧೪೫೦ ಕಿಲೋ ಮೀಟರ್ ವೇಗದ ಸಾಮರ್ಥ್ಯವಿದ್ದು,3 ಸಾವಿರ ಕೆ.ಜಿ. ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲದು. ಈಗಾಗಲೇ ಆರಂಭದಿಂದ ೨೪೫೪ ಬಾರಿ ಪರೀಕ್ಷಾರ್ಥ ಹಾರಾಟ ನಡೆಸಿ ಯಶಸ್ವಿಯಾಗಿ ಮುನ್ನುಗ್ಗಿರುವ ತೇಜಸ್, ವೈರಿ ವಿಮಾನಗಳನ್ನು ಪತ್ತೆ ಹಚ್ಚಿ ನಿರ್ದಿಷ್ಟ ಗುರಿ ತಲುಪುವ ವಿಶೇಷ ಸಾಮರ್ಥ್ಯ ಹೊಂದಿದೆ.

ತೇಜಸ್ ವೈಶಿಷ್ಟ್ಯಗಳು
ತೇಜಸ್ ವಿಶೇಷ ತಂತ್ರಜ್ಞಾನ ಹೊಂದಿದ್ದು, ತನ್ನ ರಾಡಾರ್ ವ್ಯವಸ್ಥೆಯಿಂದಾಗಿ ರಾತ್ರಿ ವೇಳೆಯಲ್ಲೂ ಕಾರ್ಯಾಚರಣೆ ನಡೆಸುವ ಹಾಗೂ ಸರ್ವ ಋತುಗಳಲ್ಲೂ, ಅಂದರೆ ಚಳಿ, ಉಷ್ಣ, ಮಳೆ, ಗಾಳಿಗಳಲ್ಲೂ ಯಶಸ್ವಿಯಾಗಿ ದಾಳಿ ನಡೆಸಬಲ್ಲದು.
ತೇಜಸ್ ನಲ್ಲಿ ಇಬ್ಬರು ಪೈಲಟ್‌ಗಳು ನಿರ್ವಹಣೆ ಮಾಡಬಹುದಲ್ಲದೆ ಟ್ರೈನರ್ ಆಗಿಯೂ ಕೆಲಸ ಮಾಡುತ್ತದೆ. ಈ ಮೊದಲು ಬ್ರಿಟನ್ ನ ಹಾಕ್ ಯುದ್ಧ ವಿಮಾನ ಗಳನ್ನು ಈ ಕಾರ್ಯಕ್ಕೆ ಅವಲಂಬಿಸಬೇಕಾಗಿತ್ತು.
ಖರ್ಚು ವೆಚ್ಚ
ತೇಜಸ್ ಫೈಟರ್ ಜೆಟ್ (ಯುದ್ಧ ವಿಮಾನ) ವಾಯುಪಡೆ ಹಾಗೂ ನೌಕಾಪಡೆಗಳರೆಡರಲ್ಲೂ ಬಳಕೆಯಾಗಲಿದೆ. ಒಟ್ಟಾರೆ 25 ಸಾವಿರ ಕೋಟಿ ರೂ.ಗಳ ಯೋಜನೆ ಇದಾಗಿದ್ದು, ಪ್ರತಿ ತೇಜಸ್ ನಿರ್ಮಾಣಕ್ಕೆ 200 ಕೋಟಿ ರೂ. ವೆಚ್ಚವಾಗಲಿದೆ. 4 ಅಡಿ 9 ಇಂಚು ಎತ್ತರ ಹಾಗೂ 43 ಅಡಿ ಉದ್ದವಿರುವ ತೇಜಸ್, ಲೇಸರ್ ಬಾಂಬ್ ದಾಳಿ ಜತೆಗೆ ಗನ್ ಫೈಟ್ ನಲ್ಲೂ ಕಾರ್ಯನಿರ್ವಹಿಸಲಿದೆ.

ಎ.ಕೆ.ಆಂಟನಿ ವೀಕ್ಷಣೆ
ಭಾರತೀಯ ವಾಯುಪಡೆಗೆ ಆನೆ ಬಲ ನೀಡಲಿರುವ ಸ್ವದೇಶಿ ತಂತ್ರಜ್ಞಾನ ನಿರ್ಮಿತ ಹಗುರ ಯುದ್ಧ ವಿಮಾನ ತೇಜಸ್ ನ ಪ್ರಾಯೋಗಿಕ ಪರೀಕ್ಷೆಯಲ್ಲಿ ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಖುದ್ದಾಗಿ ಭಾಗವಹಿಸಿ ಸಮಗ್ರವಾಗಿ ವೀಕ್ಷಿಸಿದರು.

ವಿವಿಧ ಸಂಸ್ಥೆಗಳ ಸಹಕಾರ
ಮೊದಲ ಸಲ ಪೈಲಟ್ ಸಹಿತ ಯುದ್ಧ ವಿಮಾನ ಕಾರ್ಯಾಚರಿಸಿದ್ದು ವಿಶಿಷ್ಟವಾಗಿತ್ತು. ತೇಜಸ್ ನಿರ್ಮಾಣದಲ್ಲಿ ಬೆಂಗಳೂರಿನ ಹಿಂದೂಸ್ಥಾನ್-ಏರೊನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್)ನ ಜತೆ ಐಎಎಫ್, ಎಂಒಡಿ, ಎಲ್ ಎಸಿ, ಬಿಎಚ್ ಇಎಲ್ ಸೇರಿದಂತೆ ವಿವಿಧ ಸಂಸ್ಥೆಗಳು ಹಾರ್ಡ್ ವೇರ್, ಸಾಫ್ಟ್ ವೇರ್ ವಿಭಾಗಗಳಲ್ಲಿ ನೆರವು ನೀಡಿವೆ.
ಬೆಂಗಳೂರಿನಲ್ಲಿ ನಡೆದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಎಚ್‌ಎಎಲ್ ಅಧ್ಯ್ಕಷ ಡಾ.ಕೆ.ತ್ಯಾಗಿ, ಅಜಯ್‌ಕುಮಾರ್, ಅರವಿಂದ್, ಜೈಜೀತ್ ಮಾಲಾ ಸೇರಿದಂತೆ ಅನೇಕ ತಂತ್ರಜ್ಞರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮೂರು ಹಗುರ ಯುದ್ಧ ವಿಮಾನಗಳನ್ನು ಪ್ರದರ್ಶಿಸಲಾಯಿತು.

ಹಾರಾಟಕ್ಕೆ ರೆಡಿ
ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದ ಬಳಿ ಹಾರಾಟಕ್ಕೆ ಸಜ್ಜಾಗಿ ನಿಂತಿರುವ ಲಘು ಯುದ್ಧ ವಿಮಾನ ತೇಜಸ್

ಹಾರಾಟಕ್ಕೆ ರೆಡಿ
ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದ ಬಳಿ ಹಾರಾಟಕ್ಕೆ ಸಜ್ಜಾಗಿ ನಿಂತಿರುವ ಲಘು ಯುದ್ಧ ವಿಮಾನ ತೇಜಸ್

ಬೆಂಗಳೂರಿನಲ್ಲಿ ಎಕೆ ಅಂಟನಿ
ಲಘು ಯುದ್ಧ ವಿಮಾನ ತೇಜಸ್ ಪರೀಕಾರ್ಥ ಹಾರಾಟ ವೀಕ್ಷಣೆಗೆ ಬೆಂಗಳೂರಿಗೆ ಬಂದಿದ್ದ ರಕ್ಷಣಾ ಸಚಿವ ಎಕೆ ಎಂಟನಿ ಹಾಗೂ ವಾಯುಸೇನೆ ಮುಖ್ಯಸ್ಥ NAK ಬ್ರೌನ್ ಅವರು ಸಮಾಲೋಚನೆಯಲ್ಲಿದ್ದಾರೆ. PTI Photo by Shailendra Bhojak












Click it and Unblock the Notifications