ಬೆಂಗಳೂರಲ್ಲಿ ಪ್ರಾರಂಭವಾಗಲಿದೆ ಭಾರತದ ಮೊದಲ 'ಗಾಂಜಾ ಆಸ್ಪತ್ರೆ'

ಬೆಂಗಳೂರು, ಫೆಬ್ರವರಿ 05: ನಗರದಲ್ಲಿ ಇದೇ ವರ್ಷದಲ್ಲಿ 'ಗಾಂಜಾ ಕ್ಲೀನಿಕ್' ತಲೆ ಎತ್ತಲಿದೆ. ನಿಷೇಧವಾಗಿರುವ ಗಾಂಜಾ ಔಷಧವಾಗಿ ಬಹಿರಂಗವಾಗಿಯೇ ನಗರದಲ್ಲಿ ಮಾರಾಟವಾಗಲಿದೆ.

ಬೆಂಗಳೂರಿನಲ್ಲಿ ಇದೇ ತಿಂಗಳ ಅಂತ್ಯ ಅಥವಾ ಮಾರ್ಚ್‌ ಮೊದಲ ವಾರದಲ್ಲಿ ಭಾರತದ ಪ್ರಥಮ 'ಕ್ಯಾನಾಬೀಸ್ ಕ್ಲೀನಿಕ್' (ಗಾಂಜಾ ಕ್ಲೀನಿಕ್) ಪ್ರಾರಂಭವಾಗಲಿದೆ.

ಒಡಿಶಾ ಮೂಲಕ ಸ್ಟಾರ್ಟ್‌ಅಪ್ ಸಂಸ್ಥೆ ಹೆಂಪ್‌ಕಾಮ್ ಸೊಲ್ಯೂಷನ್ಸ್‌, ಈ ಗಾಂಜಾ ಕ್ಲೀನಿಕ್ ಅನ್ನು ಸ್ಥಾಪಿಸುತ್ತಿದ್ದು. ಇದಕ್ಕೆ 'ವೇದಿ ಹರ್ಬಲ್ಸ್‌' ಎಂದು ಹೆಸರಿಡಲಾಗಿದೆ. ಈ ಕ್ಲೀನಿಕ್‌ ನಲ್ಲಿ ಗಾಂಜಾ ದಿಂದ ತಯಾರಿಸಲಾದ ಎಣ್ಣೆ, ಮಾತ್ರೆಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ ಈ ಮಾರಾಟ ಕೇವಲ ವೈದ್ಯಕೀಯ ಅವಶ್ಯಕತೆಗಾಗಿ ಮಾತ್ರವೇ ಆಗಿದೆ.

ಗಾಂಜಾ ಸಂಶೋಧನಾ ಕೇಂದ್ರ ಮತ್ತು ಆಸ್ಪತ್ರೆ

ಗಾಂಜಾ ಸಂಶೋಧನಾ ಕೇಂದ್ರ ಮತ್ತು ಆಸ್ಪತ್ರೆ

ಹೆಂಪ್‌ಕಾಮ್ ಸೊಲ್ಯೂಷನ್ಸ್‌ ಸಂಸ್ಥೆಯು ಬೆಂಗಳೂರಿನಲ್ಲಿ ಗಾಂಜಾ ಸಂಶೋಧನಾ ಕೇಂದ್ರ ಮತ್ತು ಆಸ್ಪತ್ರೆಯನ್ನು ಸ್ಥಾಪಿಸಲಿದ್ದು. ವೈಜ್ಞಾನಿಕವಾಗಿ ಗಾಂಜಾ ಬೆಳೆದು ಅದನ್ನು ವೈದ್ಯಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲಿದೆ ಮತ್ತು ಮಾರಾಟ ಸಹ ಮಾಡಲಿದೆ.

ಲೈಂಗಿಕ ಸಂಬಂಧಿ ಸಮಸ್ಯೆಗೂ ರಾಮಬಾಣ

ಲೈಂಗಿಕ ಸಂಬಂಧಿ ಸಮಸ್ಯೆಗೂ ರಾಮಬಾಣ

ಗಾಂಜಾ ಅನ್ನು ಹಲವು ಮನೋ ಸಂಬಂಧಿ ಖಾಯಿಲೆಗಳನ್ನು ಗುಣಪಡಿಸಲು ಬಳಸಬಹುದಾಗಿದೆ ಎಂಬುದನ್ನು ಈ ಸಂಸ್ಥೆಯು ಸತತ ಐದು ವರ್ಷದ ಸಂಶೋಧನೆ ಮೂಲಕ ಕಂಡುಕೊಂಡಿದೆ. ಆತಂಕ, ಖಿನ್ನತೆ, ಹಲವು ಬಗೆಯ ನೋವುಗಳು, ಲೈಂಗಿಕತೆ ಸಂಬಂಧಿ ಸಮಸ್ಯೆಗಳು, ಒತ್ತಡ, ಕೆಲವು ಬಗೆಯ ಜ್ವರ, ಕೆಲವು ದೀರ್ಘಕಾಲದ ಕಾಯಿಲೆಗಳ ಚಿಕಿತ್ಸೆಗೆ ಬಳಸಬಹುದಾಗಿದೆ.

ಎಲ್ಲಾ ರೀತಿಯ ಒಪ್ಪಿಗೆ ಪಡೆದುಕೊಂಡಿದೆ

ಎಲ್ಲಾ ರೀತಿಯ ಒಪ್ಪಿಗೆ ಪಡೆದುಕೊಂಡಿದೆ

ಆರೋಗ್ಯ ಮತ್ತು ಮಾನವ ಸೇವೆಗಳಿಗಳ ಫೆಡರಲ್ ಏಜೆನ್ಸಿ ಮತ್ತು ಯುಎಸ್‌ ಫೂಡ್ ಆಂಡ್ ಡ್ರಗ್‌ ಅಡ್ಮಿನಿಸ್ಟ್ರೇಶನ್ ಗಳು ಗಾಂಜಾ ಕ್ಲಿನಿಕ್‌ ಗೆ ಒಪ್ಪಿಗೆ ಸೂಚಿಸಿದೆ. ಭಾರತದ ಸಂಬಂಧಿತ ಇಲಾಖೆಯಿಂದಲೂ ಹೆಂಪ್‌ಕಾಮ್ ಸಂಸ್ಥೆ ಒಪ್ಪಿಗೆ ಪಡೆದುಕೊಂಡಿದೆ.

ಆಯುರ್ವೇದ ವೈದ್ಯರು ರೋಗಿಗಳಿಗೆ ನೀಡಬಹುದು

ಆಯುರ್ವೇದ ವೈದ್ಯರು ರೋಗಿಗಳಿಗೆ ನೀಡಬಹುದು

ಯಾವುದೇ ಆಯುರ್ವೇದ ವೈದ್ಯರು ಗಾಂಜಾ ಮಾತ್ರೆ ಹಾಗೂ ಎಣ್ಣೆಯನ್ನು ಬಳಸಲು ರೋಗಿಗಳಿಗೆ ಸೂಚಿಸಬಹುದಾಗಿದೆ. ಮೊದಲಿಗೆ ಕಡಿಮೆ ಡೋಸೇಜ್‌ನಿಂದ ಪ್ರಾರಂಭ ಮಾಡುವುದಾಗಿ ಹೆಂಪ್‌ಕಾಮ್ ಸೊಲ್ಯೂಷನ್ಸ್‌ ಹೇಳಿದೆ. ಸಂಸ್ಥೆಯು ಗಾಂಜಾ ಕ್ಲಿನಿಕ್ ಅನ್ನು ಬೆಂಗಳೂರಿನಲ್ಲಿ ಪ್ರಾರಂಭಿಸುತ್ತಿದೆಯಾದರೂ ಭಾರತದ ಇತರ ಪ್ರಮುಖ ನಗರಗಳಿಗೆ ಆಸ್ಪತ್ರೆಯನ್ನು ವಿಸ್ತರಿಸುವ ಇರಾದೆ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+