ಚಿತ್ರಗಳು : ಓಕಳಿಪುರಂ ಸಿಗ್ನಲ್‌ ಫ್ರೀ ಕಾರಿಡಾರ್‌ ಯೋಜನೆ

ಬೆಂಗಳೂರು, ಆಗಸ್ಟ್ 23 : ಎಂಟು ಪಥದ ಓಕಳಿಪುರಂ ಸಿಗ್ನಲ್‌ ಫ್ರೀ ಕಾರಿಡಾರ್‌ ಯೋಜನೆಯ ಕಾಮಗಾರಿ ಭರದಿಂದ ಸಾಗಿದೆ. ಸುಮಾರು 115 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗೆ 2016ರ ಫೆಬ್ರವರಿಯಲ್ಲಿ ಚಾಲನೆ ಸಿಕ್ಕಿದೆ.

ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್ (ಬಿಜೆಪಿ) ಅವರು ಸೋಮವಾರ ಸಿಗ್ನಲ್‌ ಫ್ರೀ ಕಾರಿಡಾರ್‌ ಯೋಜನೆ ಕಾಮಗಾರಿಯ ಪರಿಶೀಲನೆ ನಡೆಸಿದರು. ಮೆಜೆಸ್ಟಿಕ್ ಕಡೆಯಿಂದ ಬರುವ ವಾಹನಗಳಿಗೆ ಪ್ರತ್ಯೇಕ ಮಾರ್ಗವನ್ನು ನಿರ್ಮಿಸುವ ಕಾರ್ಯ ಅಂತಿಮ ಹಂತದಲ್ಲಿದೆ.[ಓಕಳಿಪುರಂ ಸಿಗ್ನಲ್ ಫ್ರೀ ಕಾರಿಡಾರ್ ಕಾಮಗಾರಿ]

ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಈ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. ಆದರೆ, ರೈಲ್ವೆ ಇಲಾಖೆಯಿಂದ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಾದ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಯೋಜನೆಯೂ ವಿಳಂಬವಾಯಿತು.[ಓಕಳಿಪುರಂ ಅಷ್ಟಪಥ ಕಾಮಗಾರಿಯ ಅಡ್ಡಿಗಳು ನಿವಾರಣೆ]

ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಗೆ ರೈಲ್ವೆ ಇಲಾಖೆಯಿಂದ ಸುಮಾರು 2 ಎಕರೆ ಭೂಮಿಯನ್ನು ಸ್ವಾಧೀನಪಡಿ­ಸಿ­ಕೊಳ್ಳಲಾಗಿದ್ದು, ಇದಕ್ಕೆ ಬದಲಾಗಿ ಬಿನ್ನಿಮಿಲ್‌ ಕಾರ್ಖಾನೆ ಜಾಗವನ್ನು ಇಲಾಖೆಗೆ ನೀಡಲಾಗಿದೆ. ಭೂ ಸ್ವಾಧೀನ ಪೂರ್ಣಗೊಂಡ ಬಳಿಕ ಕಾಮಗಾರಿಗೆ ಚಾಲನೆ ಸಿಕ್ಕಿದೆ.[ನಮ್ಮ ಬೆಂಗಳೂರು ಹೀಗಾದರೆ ಚೆನ್ನ.. ವಿಡಿಯೋ ನೋಡಿ]

ತಾತ್ಕಾಲಿಕ ರಸ್ತೆ ನಿರ್ಮಾಣ

ತಾತ್ಕಾಲಿಕ ರಸ್ತೆ ನಿರ್ಮಾಣ

ಮೆಜೆಸ್ಟಿಕ್ ಕಡೆಯಿಂದ ರಾಜಾಜಿನಗರದ ಕಡೆ ಬರುವ ವಾಹನಗಳಿಗೆ ಅನುಕೂಲವಾಗುವಂತೆ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.

ಮಲ್ಲೇಶ್ವರಂ ಕಡೆಗೆ ಹೋಗುವ ವಾಹನಗಳಿಗೆ ವ್ಯವಸ್ಥೆ

ಮಲ್ಲೇಶ್ವರಂ ಕಡೆಗೆ ಹೋಗುವ ವಾಹನಗಳಿಗೆ ವ್ಯವಸ್ಥೆ

ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಮಲ್ಲೇಶ್ವರಂ ಕಡೆ ವಾಹನಗಳು ಹೋಗಲು ನಿರ್ಮಾಣವಾಗುತ್ತಿರುವ ಪಥ.

ಕೆಳ ಸೇತುವೆ ನಿರ್ಮಾಣ

ಕೆಳ ಸೇತುವೆ ನಿರ್ಮಾಣ

ತುಮಕೂರು ಕಡೆಗೆ ಹೋಗುವ ರೈಲ್ವೇ ಹಳಿ ಅಡಿ ಕೆಳ ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತಿದೆ.

115 ಕೋಟಿ ವೆಚ್ವ

115 ಕೋಟಿ ವೆಚ್ವ

ಎಂಟು ಪಥದ ಓಕಳಿಪುರಂ ಸಿಗ್ನಲ್‌ ಫ್ರೀ ಕಾರಿಡಾರ್‌ ಯೋಜನೆಯ ಕಾಮಗಾರಿಗೆ 115.5 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಭೂಮಿ ಸ್ವಾಧೀನ ವೆಚ್ಚವೂ ಇದರಲ್ಲಿ ಸೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+