ಐಎಂಎ ಜ್ಯುವೆಲ್ಸ್‌ ವಂಚನೆ ಪ್ರಕರಣ ಸಿಸಿಬಿಗೆ ಬದಲು ಎಸ್‌ಐಟಿಗೆ

ಬೆಂಗಳೂರು, ಜೂನ್ 11: ಐಎಂಎ ಜ್ಯುವೆಲರ್ಸ್‌ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ನೀಡಿದ್ದ ಸರ್ಕಾರ, ಕೆಲವೇ ಗಂಟೆಯಲ್ಲಿ ತನ್ನ ನಿರ್ಧಾರ ಬದಲಿಸಿ ತನಿಖೆಯನ್ನು ಎಸ್‌ಐಟಿಗೆ ವಹಿಸಿದೆ.

ಇಂದು ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ನಗರ ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಶಿವಾಜಿನಗರದಲ್ಲಿಯೇ ತುರ್ತು ಸಭೆ ನಡೆಸಿ ಈ ನಿರ್ಧಾರ ಮಾಡಿದ್ದಾರೆ.

ಇದಕ್ಕೆ ಮುನ್ನಾ ಟ್ವೀಟ್ ಮಾಡಿದ್ದ ಕುಮಾರಸ್ವಾಮಿ ಅವರು, ಗೃಹ ಸಚಿವರ ಜೊತೆ ಚರ್ಚೆ ಮಾಡಿದ್ದು, ಪ್ರಕರಣವನ್ನು ಸಿಸಿಬಿ ತನಿಖೆಗೆ ಒಪ್ಪಿಸಲಾಗುತ್ತದೆ ಎಂದಿದ್ದರು, ಆದರೆ ನಿರ್ಣಯವು ಕೆಲವೇ ಗಂಟೆ ಒಳಗೆ ಬದಲಾಗಿ ತನಿಖೆಯನ್ನು ಎಸ್‌ಐಟಿಗೆ ವರ್ಗಾಯಿಸಲಾಗಿದೆ.

IMA jewelers fraud case handed over to SIT

ಐಎಂಎ ಗ್ರಾಹಕರ ದೂರುಗಳನ್ನು ಸ್ವೀಕರಿಸಲೆಂದೇ ಶಿವಾಜಿನಗರದಲ್ಲಿ ಮದುವೆ ಛತ್ರವೊಂದನ್ನು ಬುಕ್ ಮಾಡಲಾಗಿತ್ತು, ಸುಮಾರು 8000 ದೂರುಗಳನ್ನು ಇಂದು ಒಂದೇ ದಿನ ಸ್ವೀಕರಿಸಲಾಗಿದೆ.

ಐಎಂಎ ಜ್ಯುವೆಲರ್ಸ್‌ ಮಾಲೀಕ ಬಿಡುಗಡೆ ಮಾಡಿರುವ ಆಡಿಯೋನಲ್ಲಿ ಶಾಸಕ, ಮಂತ್ರಿ ಹಲವು ಪ್ರಮುಖ ಅಧಿಕಾರಿಗಳ ಬಗ್ಗೆ ಉಲ್ಲೇಖ ಮತ್ತು ಲಂಚದ ಹಣದ ಬಗ್ಗೆ ಉಲ್ಲೇಖ ಇರುವ ಕಾರಣ ಪ್ರಕರಣ ಗಂಭೀರ ಪ್ರಕರಣ ಪಡೆದುಕೊಂಡಿದ್ದು, ತನಿಖೆ ಜಾರಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+