ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಐಐಎಂನಿಂದ ತಂತ್ರಜ್ಞರಿಗಾಗಿ ಮ್ಯಾನೇಜ್ ಮೆಂಟ್ ಕಾರ್ಯಕ್ರಮ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 25: ನಗರದಲ್ಲಿರುವ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ (ಐಐಎಂಬಿ) ಸಂಸ್ಥೆಯು ಜರ್ಮನಿಯ ಎರಡು ಮ್ಯಾನೇಜ್ ಮೆಂಟ್ ವಿದ್ಯಾ ಸಂಸ್ಥೆಗಳ ಸಹಯೋಗದಲ್ಲಿ ತಂತ್ರಜ್ಞಾನ ನಿರ್ವಹಣೆ ವಲಯದ ಸೇವೆ ಸಲ್ಲಿಸುತ್ತಿರುವ ಸಮೂಹಕ್ಕಾಗಿಯೇ ಹೊಸತೊಂದು ಅಂತಾರಾಷ್ಟ್ರೀಯ ಗುಣಮಟ್ಟದ ಮ್ಯಾನೇಜ್ ಮೆಂಟ್ ಕಾರ್ಯಕ್ರಮವನ್ನು ರೂಪಿಸಿದೆ.

ಈ ಹೊಸ ಪರಿಕಲ್ಪನೆಗೆ ಜರ್ಮನಿಯ ಫೆಡ್ರಿಕ್ ಅಲೆಕ್ಸಾಂಡರ್ ವಿಶ್ವವಿದ್ಯಾಲಯ ಹಾಗೂ ಫ್ರಾನ್ ಹೋಫರ್ ಇನ್ಸ್ಟಿಟ್ಯೂಟ್ ಆಫ್ ಇಂಟಿಗ್ರೇಟೆಡ್ ಸರ್ಕೀಟ್ಸ್ ಐಐಎಸ್ ಗಳ ಸಹಯೋಗದೊಂದಿಗೆ ಐಐಎಂಬಿ ಸಂಸ್ಥೆಯು ಈ ಕಾರ್ಯಕ್ರಮವನ್ನು ರೂಪಿಸಿದೆ.

IIM Bangalore to launch International Management Programme for Technologists

ಇಂದಿನ ತಂತ್ರಜ್ಞರಿಗೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಸ್ಪರ್ಧೆಗಳು ಹಾಗೂ ಸವಾಲುಗಳು, ಇದಕ್ಕಾಗಿ ಬೇಕಾಗುವ ವಿಶೇಷ ಕೌಶಲ್ಯಗಳ ಬಗ್ಗೆ ತಂತ್ರಜ್ಞರಿಗೆ ಸೂಕ್ತ ಮಾಹಿತಿ ನೀಡುವುದು ಹಾಗೂ ಅವರನ್ನು ಇಂದಿನ ಜಾಗತಿಕ ಸ್ಪರ್ಧೆಗೆ ಸಜ್ಜುಗೊಳಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ ಎಂದು ಐಐಎಂಬಿ ಪ್ರಕಟಣೆ ತಿಳಿಸಿದೆ.

ಇಂಜಿನಿಯರಿಂಗ್ ಹಾಗೂ ಟೆಕ್ನಾಲಜಿ ಮ್ಯಾನೇಜರ್ ಗಳು, ಸಂಶೋಧನಾ ಹಾಗೂ ಅಭಿವೃದ್ಧಿ ವಿಭಾಗದ ತಂತ್ರಜ್ಞರು, ಪ್ರಾಡಕ್ಟ್ ಡಿಸೈನರ್ ಗಳು, ವಾಸ್ತು ಶಿಲ್ಪ (ಆರ್ಕಿಟೆಕ್ಟ್) ಇಂಜಿನಿಯರ್ ಗಳಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಜಾಲತಾಣಕ್ಕೆ ಭೇಟಿ ನೀಡಿ ತಮ್ಮ ಹೆಸರುಗಳನ್ನು ನೊಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ, 080-26993380 ಸಂಖ್ಯೆಗೆ ಕರೆ ಮಾಡಬಹುದು.

English summary
The Indian Institute of Management Bangalore (IIMB) has announced a partnership with two premier German B-schools – the Friedrich Alexander University and the Fraunhofer Institute for Integrated Circuits IIS, Germany for an International Management Programme for Technologists (IMPT).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X