ಮುಂದಿನ 24 ಗಂಟೆಗಳಲ್ಲಿ ಭಾರತಕ್ಕೆ ಬರುತ್ತೇನೆ: ಮನ್ಸೂರ್ ಖಾನ್

ಬೆಂಗಳೂರು, ಜುಲೈ 15: ಐಎಂಎ ಹಗರಣದ ರುವಾರಿ ಐಎಂಎ ಸಂಸ್ಥೆ ಮನ್ಸೂರ್ ಖಾನ್ ಮುಂದಿನ 24 ಗಂಟೆಯೊಳಗೆ ಬೆಂಗಳೂರಿಗೆ ಬರುವುದಾಗಿ ಹೇಳಿದ್ದಾನೆ.

ಅಜ್ಞಾತ ಸ್ಥಳದಿಂದ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಮನ್ಸೂರ್ ಖಾನ್ ಈಗಾಗಲೇ ಟಿಕೆಟ್ ಕೂಡ ಖರೀದಿಸಿಯಾಗಿದೆ, ಮುಂದಿನ 24 ಗಂಟೆಗಳಲ್ಲಿ ನಾನು ಭಾರತಕ್ಕೆ ವಾಪಸ್ ಬರುತ್ತೇನೆ ಎಂದಿದ್ದಾರೆ. ಬೆಂಗಳೂರು ಪೊಲೀಸರು ನನ್ನನ್ನು ರಕ್ಷಿಸುತ್ತಾರಾ? ಎಂಬ ಅನುಮಾನವನ್ನೂ ಆತ ವಿಡಿಯೋದಲ್ಲಿ ವ್ಯಕ್ತಪಡಿಸಿದ್ದಾನೆ.

ಹೃದಯ ಸಂಬಂಧಿ ಖಾಯಿಲೆ ಮತ್ತು ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವ ನಾನು ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದೆ. ಈಗ ನನ್ನ ಬಳಿ ಹಣ ಖಾಲಿ ಆಗಿದೆ. ಚಿಕಿತ್ಸೆ ಪಡೆಯಲು ಆಗುತ್ತಿಲ್ಲ ಎಂದು ಆತ ವಿಡಿಯೋದಲ್ಲಿ ಹೇಳಿದ್ದಾನೆ.

I will back to Bengaluru in 24 hours: Manoor Khan

ನಾನು ಭಾರತ ಬಿಟ್ಟು ಬಂದಿದ್ದೇ ತಪ್ಪು, ಅಲ್ಲಿ (ಬೆಂಗಳೂರು) ಉಂಟಾದ ಪರಿಸ್ಥಿತಿಯಿಂದಾಗಿ ದೇಶ ಬಿಟ್ಟು ಹೋಗಿದ್ದೆ, ನನಗೆ ಭಾರತದ ಕಾನೂನಿನ ಮೇಲೆ ನಂಬಿಕೆ ಇದೆ, ನಾನು ವಾಪಸ್ ಬಂದು ಕಾನೂನು ಹೋರಾಟ ಮಾಡುತ್ತೇನೆ, ನನ್ನನ್ನು ಹೆದರಿಸಿ ಹಲವರು ಲಂಚ ಪಡೆದಿದ್ದಾರೆ ನನಗೆ ಎಷ್ಟು ನೆನಪಿದೆಯೋ ಅಷ್ಟು ಜನರ ಹೆಸರು ಬರೆದಿಟ್ಟಿದ್ದೇನೆ ಎಂದು ಮನ್ಸೂರ್ ಖಾನ್ ಹೇಳಿದ್ದಾನೆ.

ಬೆಂಗಳೂರಿಗೆ ಬಂದು ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ, ನನ್ನಲ್ಲಿ ಸ್ಥಿರಾಸ್ತಿ ಸಾಕಷ್ಟು ಇದೆ ಎಲ್ಲರೂ ಶಾಂತರೀತಿಯಿಂದ ಇರಿ ಎಲ್ಲರ ಹಣವನ್ನು ವಾಪಸ್ ನೀಡುತ್ತೇನೆ, ನೀವು ಕೊಡುವ ಶಕ್ತಿಯಿಂದಲೇ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಮನ್ಸೂರ್ ಖಾನ್ ಹೇಳಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+