ನಿರ್ಭಯಾ ತಾಯಿ ಪಾತ್ರ ಮಾಡುವ ಆಸೆ ವ್ಯಕ್ತಪಡಿಸಿದ ಮಾಳವಿಕಾ
ಬೆಂಗಳೂರು, ಮಾರ್ಚ್ 20: ನಿರ್ಭಯಾ ತಾಯಿ ಆಶಾ ದೇವಿ ಪಾತ್ರ ಮಾಡುವ ಆಸೆಯನ್ನು ನಟಿ, ಬಿಜಿಪಿ ನಾಯಕಿ ಮಾಳವಿಕಾ ಅವಿನಾಶ್ ವ್ಯಕ್ತಪಡಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಮಾಳವಿಕಾ ಬರೆದುಕೊಂಡಿದ್ದಾರೆ.
''ಯಾರಾದರೂ ಸಿನಿಮಾ ಮಾಡಿದರೆ, ನಾನು ಆಶಾ ದೇವಿ ಪಾತ್ರ ಮಾಡಲು ಸಿದ್ಧಳಿದ್ದೇನೆ. ನಮ್ಮ ದೇಶದ ಇಂದಿನ ಹೀರೋ. ಎಂತಹ ತಾಯಿ.'' ಎಂದು ಕೈ ಮುಗಿಯುವ ಮೂಲಕ ನಿರ್ಭಯಾ ತಾಯಿ ಆಶಾ ದೇವಿರಿಗೆ ನಮನ ಸಲ್ಲಿಸಿದ್ದಾರೆ.

ಇಂದು (ಮಾರ್ಚ್ 20) ನಿರ್ಭಯಾ ಹಂತಕರನ್ನ ಗಲ್ಲಿಗೆ ಏರಿಸಲಾಗಿದೆ. ಕೊನೆಗೂ ನಿರ್ಭಯಾಗೆ ನ್ಯಾಯ ಸಿಕ್ಕಿದ್ದು, ಈ ಬಗ್ಗೆ ತಾಯಿ ಆಶಾ ದೇವಿ ಮಾತನಾಡಿದ್ದಾರೆ. ಅವರ ಪ್ರತಿಕ್ರಿಯೆ ಕಂಡು ಮಾಳವಿಕಾ ಭಾವುಕವಾಗಿದ್ದಾರೆ.
''ಇದು ದೇಶದ ಪ್ರತಿಯೊಬ್ಬ ಮಗಳ ಗೆಲವು. ಕೊನೆಗೂ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಿದೆ. ಇಂದು ನಮಗೆ ನ್ಯಾಯ ಸಿಕ್ಕಿದೆ. ಈ ದಿನವನ್ನು ನನ್ನ ಮಗಳಿಗೆ ಅರ್ಪಿಸುತ್ತಿದ್ದೇನೆ. ನ್ಯಾಯಾಂಗ ವ್ಯವಸ್ಥೆ ಹಾಗೂ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ'' ಎಂದು ನಿರ್ಭಯಾ ತಾಯಿ ಕಣ್ಣಂಚಲ್ಲಿ ನೀರು ತುಂಬಿಕೊಂಡು ಪ್ರತಿಕ್ರಿಯಿಸಿದ್ದಾರೆ.
If someone is making a film, I offer my services to play #AshaDevi(GRATIS), our National hero today! What a mother 🙏🏽#NirbhayaRapistsHanged @BangaloreTimes1 @suvarnanewstv @publictvnews @tv9kannada @KannadaPrabha
— MALAVIKA AVINASH (@MALAVIKAAVINASH) March 20, 2020
2012ರ ಡಿಸೆಂಬರ್ 16 ರಂದು ದೆಹಲಿಯ ಬಸ್ ಒಂದರಲ್ಲಿ ನಿರ್ಭಯಾ ಮೇಲೆ ಕಾಮುಕರು ಅತ್ಯಾಚಾರ ನಡೆಸಿದ್ದರು. 7 ವರ್ಷಗಳ ಬಳಿಕ ಅಪರಾಧಿಗಳಾದ ಮುಕೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಕುಮಾರ್ ಶರ್ಮಾ, ಅಕ್ಷಯ್ ಕುಮಾರ್ ಗಲ್ಲು ಶಿಕ್ಷೆ ಆಗಿದೆ.












Click it and Unblock the Notifications