ನನ್ ಹತ್ರ ಮೊಬೈಲೇ ಇಲ್ಲ: ಫೊನ್ ಕದ್ದಾಲಿಕೆ ಕುರಿತು ಸಿದ್ದರಾಮಯ್ಯ ಯೂಟರ್ನ್?
ಬೆಂಗಳೂರು, ಆಗಸ್ಟ್ 17: 'ನನ್ನ ಹತ್ತಿರ ಮೊಬೈಲ್ ಇಲ್ಲ, ಫೋನ್ ಟ್ಯಾಪಿಂಗ್ ಬಗ್ಗೆ ನನಗೆ ಗೊತ್ತಿಲ್ಲ' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಲವು ದಿನದ ಹಿಂದಷ್ಟೆ ಫೋನ್ ಟ್ಯಾಪಿಂಗ್ ವಿರುದ್ಧ ಗುಡುಗಿದ್ದ ಸಿದ್ದರಾಮಯ್ಯ ಇಂದು ಫೋನ್ ಕ್ದಾಲಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ, ನನ್ನ ಬಳಿ ಮೊಬೈಲ್ ಇಲ್ಲ ಎಂದಿದ್ದಾರೆ. 'ನಾನು ಮೊಬೈಲ್ ಬಳಸುವುದಿಲ್ಲ, ಆದರೆ ನನ್ನ ಪಿಎಗಳ ಬಳಿ ಇದೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಫೋನ್ ಟ್ಯಾಪಿಂಗ್ ತನಿಖೆ ಬಗ್ಗೆ ನಿಲವು ಸ್ಪಷ್ಟಪಡಿಸಿರುವ ಅವರು, 'ಫೋನ್ ಟ್ಯಾಪಿಂಗ್ ತನಿಖೆಯನ್ನು ಸರ್ಕಾರ ಮಾಡಿಸಲಿ' ಎಂದು ಹೇಳಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಅವರು, ತಾವು ಸಿಎಂ ಆಗಿದ್ದಾಗ ಹಲವು ಶಾಸಕರು, ಕಾಂಗ್ರೆಸ್ ಹಿರಿಯ ಮುಖಂಡರು, ಕೆಲವು ಪತ್ರಕರ್ತರು, ಪೊಲೀಸ್ ಅಧಿಕಾರಿಗಳ ಫೋನ್ ಟ್ಯಾಪಿಂಗ್ ಮಾಡಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಫೋನ್ ಟ್ಯಾಪಿಂಗ್ ಪ್ರಕರಣವನ್ನು ಗಂಭಿರವಾಗಿ ತೆಗೆದುಕೊಂಡಿರುವ ಯಡಿಯೂರಪ್ಪ ಅವರು, ಈ ಬಗ್ಗೆ ತನಿಖೆ ನಡೆಸಲು ಆಸಕ್ತಿ ತೋರಿದ್ದಾರೆ. ಈಗಾಗಲೇ ಐಪಿಎಸ್ ಅಧಿಕಾರಿಗಳ ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆಯನ್ನು ಇಲಾಖೆ ಮಟ್ಟದಲ್ಲಿ ಮಾಡಲಾಗುತ್ತಿದೆ.











Click it and Unblock the Notifications