ಸುಳ್ಳು ಆರೋಪ ಮಾಡಿದ್ರೆ ಕಾಂಗ್ರೆಸ್‌ನವರು ಏಟು ತಿಂತಾರೆ: ರೇವಣ್ಣ
ಬೆಂಗಳೂರು, ಡಿಸೆಂಬರ್ 28: 'ನಾನು ಮಂತ್ರಿಗಿರಿಗೆ ಕೇರ್ ಮಾಡುವನಲ್ಲ, ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ರೆ ಕಾಂಗ್ರೆಸ್‌ನವರು ಏಟು ತಿಂತಾರಷ್ಟೆ' ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸಿಟ್ಟಿನಿಂದ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಇಲಾಖೆಯಲ್ಲಿಯೇ ನನಗೆ ಮಾಡಲು ಸಾಕಷ್ಟು ಕೆಲಸಗಳಿವೆ, ನಾನು ಬೇರೆ ಇಲಾಖೆಯಲ್ಲಿ ಮೂಗು ತೂರಿಸುತ್ತೇನೆ ಎಂಬುದು ಅಪ್ಪಟ ಸುಳ್ಳು, ಉದ್ದೇಶಪೂರ್ವಕವಾಗಿ ಈ ಆರೋಪಗಳನ್ನು ಮಾಡಲಾಗುತ್ತಿದೆ ಎಂದರು.
ಬೇರೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದೇನೋ ಇಲ್ಲವೋ ಎಂದು ನೇರವಾಗಿ ಪರಮೇಶ್ವರ್ ಅವರನ್ನೇ ಕೇಳಿ ನೋಡಿ, ನಾನು ಬೇರೆ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದ್ದೇನೆ ಎಂಬುದೆಲ್ಲಾ ಸುಳ್ಳು ಎಂದ ಅವರು, 'ಪುಟಗೋಸಿ ಮಂತ್ರಿಗಿರಿಗೆಲ್ಲಾ ನಾನು ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಅವರು ಸಿಟ್ಟಿನಲ್ಲಿ ಹೇಳಿದರು.

ಪರಮೇಶ್ವರ್ ಅವರಿಂದ ಗೃಹಖಾತೆ ಕಿತ್ತುಕೊಳ್ಳಬಾರದಿತ್ತು ಎಂದ ಅವರು, ಆರು ತಿಂಗಳಲ್ಲಿ ಅವರು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರು ದಲಿತರೆಂಬ ಕಾರಣಕ್ಕೆ ಅವರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ ಎಂದರು.












Click it and Unblock the Notifications